ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತ ಮಾಹಾತ್ಮವು. ದರಿಂದ ನೀನು ಇವೆಲ್ಲವನ್ನೂ ಬಿಟ್ಟು ವೈರಾಗ್ಯವನ್ನು ವಹಿಸಿ ಕಾಡಿನಲ್ಲಿರು.” ಎಂದನು. ಈ ಮಾತನ್ನು ಕೇಳಿದೊಡನೆ ಬ್ರಾಹ್ಮಣನಿಗೆ ತನ್ನ ಮಗನಲ್ಲಿ ಒಂದು ವಿಧವಾದ ಗುರುಭಾವವು ಹುಟ್ಟಿತು. ಅದರಿಂದ ಆ ಬ್ರಾಹ್ಮಣನು ತಿರು ಗಿ ಗೋಕರ್ಣನನ್ನು ದೈನ್ಯದಿಂದ ಪ್ರಾರ್ಥಿಸುವನು. ಆವತ್ಸ! ಗೋಕರ್ಣ! ನಾನು ಕಾಡಿನಲ್ಲಿ ಹೋಗಿ ನಡೆಸಬೇಕಾದ ಕಾರವೇನು? ಅದನ್ನಾದರೂ ವಿ ಸರಿಸಿ ನನಗೆ ತಿಳಿಸು ! ಅಜ್ಞಾನಾಂಧಕಾರದಲ್ಲಿ ಮುಳುಗಿಹೋಗಿರುವ ನನ್ನನ್ನು ದರಿಸುವ ಭಾರವು ನಿನ್ನದು” ಎಂದನು. ಅದಕ್ಕಾ ಗೋಕರ್ಣನ ಜ ನಕಾ ಕೇಳು? ರಕ್ತಮಾಂಸಗಳಿಂದ ಕೇವಲಹೇಯವಾದ ಈ ದೇಹದಲ್ಲಿ ಅಭಿ ಮಾನವನ್ನು ಬಿಟ್ಟುಬಿಡು! ಹೆಂಡತಿ ಮಕ್ಕಳಲ್ಲಿಯೂ ಮಮತೆಯನ್ನು ಬಿಡು? ಈ ಜಗತ್ತೆಲ್ಲವೂ' ಕವಲನಶ್ವರವೆಂದು ದೃಢವಾಗಿ ನಂಬು! ಆದುದರಿಂದ ಭಕ್ತಿ ನಿಷ್ಠನಾಗಿ ವೈರಾಗ್ಯವನ್ನನುಸರಿಸು! ಸದ್ಧರ್ಮವನ್ನಾಶ್ರಯಿಸು! ಲೌಕಿಕ ಧರ್ಮಗಳನ್ನು ತ್ಯಜಿಸು! ಸಾಧುಗಳನ್ನು ಸೇವಿಸು! ಭೋಗದಾಸೆಯನ್ನು ಬಿಡು! ಬೇರೊಬ್ಬರ ದೋಷಗುಣಗಳನ್ನು ವಿಚಾರಿಸುವುದರಲ್ಲಿ ದೃಷ್ಟಿಯಿಡದಿರು ! ಯಾವಾಗಲೂ ಭಾಗವತಕಥಾಮೃತವನ್ನು ಪಾನಮಾಡುವುದರಲ್ಲಿ ನಿರತ ನಾಗು ! ” ಎಂದನು ಆತ್ಮದೇವನೆಂಬ ಬ್ರಾಹ್ಮಣನು ಅರುವತ್ತು ವರ್ಷದ ಮುದುಕನಾಗಿದ್ದರೂ, ತನ್ನ ಮಗನ ಬಾಯಿಂದ ಆ ಮಾತನ್ನು ಕೇಳಿ ದೊಡನೆ ಮನಸ್ಸನ್ನು ದೃಢಪಡಿಸಿಕೊಂಡು ವಿರಕ್ತನಾಗಿ ಕಾಡಿಗೆ ಹೊರಟ ನು. ಅಲ್ಲಿ ಅನವರತವೂ ಹರಿಸೇವಾಪರನಾಗಿ, ಶ್ರೀಭಾಗವತ ದಶಮಸ್ಕಂಧ ವನ್ನು ಅನುದಿನವೂ ಪಠಿಸುತ್ತಿದ್ದು, ಶ್ರೀಕೃಷ್ಣಸಾಯುಜ್ಯರೂಪವಾದ ಮೋ ಕವನ್ನು ಹೊಂದಿದನು. ಇತ್ತಲಾಗಿ ತಂದೆಯು ವನಕ್ಕೆ ಹೊರಟಕೂಡಲೆ, ದಂಧುಕಾರಿಯು ತನ್ನ ತಾಯಿಯನ್ನು ಹೊಡೆದು ಬಡಿದು ಹಿಂಸಿಸುತ್ತ (ಹಣವನ್ನೆಲ್ಲಿ ಬಚ್ಚಿ ಟೈರುವೆ ಹೇಳು ! ಇಲ್ಲದಿದ್ದರೆ ಕೊಲ್ಲುವೆನು.” ಎಂದು ಹೆದರಿಸುತ್ತಿದ್ದನು. ಈ ಭಯಕ್ಕಾಗಿ ದುಂಧುಲಿಯು ಆದೇರಾತ್ರಿಯಲ್ಲಿ ಯಾರೂ ಕಾಣದಹಾಗೆ ಬಾವಿಯಲ್ಲಿ ಬಿದ್ದು ಸತ್ತಳು. ಅತ್ತಲಾಗಿ ಗೋಕರ್ಣನೆಂಬವನು ಯೋಗ ನಿಷ್ಟನಾಗಿ ತೀರಯಾತ್ರೆಗೆ ಹೊರಟು, ಪುಣ್ಯಕ್ಷೇತ್ರಗಳನ್ನು ಸುತ್ತುತಿದ್ದ