ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೪೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತ ಮಾಹಾತ್ಮವು. ೩೧ ಭಯಪಡಬೇಡ! ಇದುವರೆಗಿದ್ದಂತೆಯೇ ನೀನು ಇನ್ನೂ ಸ್ವಲ್ಪ ಕಾಲದವರೆಗೆ ಸಹಿಸಿಕೊಂಡಿರು ! ನಿನ್ನ ಮುಕ್ತಿಗೆ ಸಾಧಕವಾದ ಮಾರ್ಗವನ್ನು ನಾನು ಬೇ ರೆ ಯಾರಿಂದಾದರೂ ವಿಚಾರಿಸಿ, ಅದರಂತೆ ಪ್ರಯತ್ನಿಸುವೆನು. ಇನ್ನು ನಿನ್ನ ನಿಜಸ್ಥಾನಕ್ಕೆ ನೀನು ಹೋಗು!” ಎಂದನು. ಈ ಮಾತನ್ನು ಕೇಳಿ ದುಂಧುಕಾ ರಿಯು,ಕಣ್ಮರೆಯಾಗಿ ತನ್ನ ಸ್ಥಾನಕ್ಕೆ ಹೊರಟುಹೋದನು. ಇತ್ತಲಾಗಿ ಗೋ ಕರ್ಣನು ಹಾಸಿಗೆಯಲ್ಲಿ ಮಲಗಿದ್ದಂತೆಯೇ, ಮುಂದೆ ಮಾಡಬೇಕಾದ ಉಪಾ ಯವೇನೆಂದು ಆ ರಾತ್ರಿಯೆಲ್ಲವೂ ಚಿಂತಿಸುತಿದ್ದರು. ಯಾವುದೊಂದು ಮಾ ರ್ಗವೂ ಅವನ ಮನಸ್ಸಿಗೆ ತೋರಲಿಲ್ಲ ! ಬೆಳಗಾದಮೇಲೆ ಆ ಗ್ರಾಮಸ್ಥರ ನೇಕರು ಗೋಕರ್ಣನ ಬಳಿಗೆ ಬಂದು, .ಪ್ರೀತಿಯಿಂದ ಅವನ ಯೋಗಕ್ಷೇಮಗ ಳನ್ನು ವಿಚಾರಿಸುತಿದ್ದರು. ಗೋಕರ್ಣನು ಅವರೆಲ್ಲರಿಗೂ ರಾತ್ರಿಯಲ್ಲಿ ನಡೆದ ವೃತ್ತಾಂತಗಳನ್ನು ತಿಳಿಸುತ್ತ, ಮುಂದೆ ದುಂಧುಕಾರಿಗೆ ಪಿಶಾಚಜನ್ಮವನ್ನು ಬಿಡಿಸುವುದಕ್ಕೆ ಯಾರಾದರೂ ತಕ್ಕ ಉಪಾಯವನ್ನು ಹೇಳಬೇಕೆಂದು ಕೇಳು ತಿದ್ದನು. ಎಷ್ಟೋ ಮಂದ ವಿದ್ಯಾಂಸರೂ, ಜ್ಞಾನಿಗಳೂ, ಯೋಗಿಗಳೂ,ಬ್ರ ಹ್ಮವಾಹಿಗಳೂ ಈ ವಿಚಾರವನ್ನು ಕುರಿತು ಅನೇಕಶಾಸ್ತ್ರಗಳನ್ನು ಪರಿಶೀಲಿಸಿ ನೋಡುತಿದ್ದರು. ಯಾರಿಗೂ ಯಾವುದೊಂದು ಮಾರ್ಗವೂ ತೋರಲಿಲ್ಲ. ಅವರಲ್ಲಿ ಕೆಲವರು ಈ ಪಿಶಾಚಜನ್ಮವಿಮೋಚನಕ್ಕೆ ಸೂಕ್ಯಾನುಗ್ರಹವನ್ನು ಸಂಪಾದಿಸಿ, ಆ ಸೂರದೇವನ ಆಜ್ಞೆಯಂತೆ ನಡೆಸಬೇಕಲ್ಲದೆ ಬೇರೆ ಮಾರ್ಗ ವಿಲ್ಲವೆಂದು ನಿಶ್ಚಯಿಸಿ ತಿಳಿಸಿದರು.ಆಗ ಗೋಕರ್ಣನು ತನ್ನ ಯೋಗಬಲದಿಂದ ಸೂದ ಗತಿಯನ್ನು ತಡೆದು ಓ ಸತ್ವಜಗತ್ಸಾಕ್ಷಿಯಾದ ಸೂರದೇವನೆ ! ನಿನಗೆ ನಮಸ್ಕಾರವು! ನೀನು ನನ್ನಲ್ಲಿ ಅನುಗ್ರಹವಿಟ್ಟು ದುಂಧುಕಾರಿಗೆ ಮುಕ್ತಿ ಹೇತುವಾದ ಮಾರ್ಗವನ್ನು ತಿಳಿಸಬೇಕು” ಎಂದು ಬಾರಿಬಾರಿಗೂ ಪ್ರಾರ್ಥಿಸಿ ದನು. ಆಗ ಸೂಯ್ಯನು, ದೂರದಿಂದಲೇ ಗೋಕರ್ಣನನ್ನು ನೋಡಿ ( ಗೋಕ ರ್ಣಾ ! ಸಪ್ತಾಹಶ್ರವಣವೆಂಬ ವಿಧಿಯಿಂದ ಶ್ರೀಭಾಗವತವನ್ನು ಕೇಳುವುದು ಹೊರತು, ಈ ಪಿಶಾಚಜನ್ಮವಿಮೋಚನಕ್ಕೆ ಬೇರೆ ಮಾರ್ಗವಿಲ್ಲವೆಂದು ತಿಳಿಸಿದ ನು. ಅಲ್ಲಿದ್ದವರೆಲ್ಲರೂ ಧನ್ಮರೂಪವಾದ ಈ ಸೂರೈನ ವಾಕ್ಯವನ್ನು ಕೇಳಿ, ಗೋಕರ್ಣನನ್ನು ಕುರಿತು, (“ಗೋಕರ್ಣಾ! ಇದು ಬಹಳ ಸುಲಭವಾದ ಕಾ