ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವತಾರಿಕೆ, ತವನ್ನೂ, ಹಯಗ್ರೀವಬ್ರಹ್ಮವಿದ್ಯೆ (ಮಂತ್ರ) ಯನ್ನೂ ಪ್ರತಿಪಾದಿಸತಕ್ಕ ಗ್ರಂಥವು ಭಾಗವತವೆನಿಸುವುದೆಂದು ಇದರಲಕ್ಷಣವು. ಇದರಂತೆಯೇ ಮಾ ತೃಪುರಾಣದಲ್ಲಿಯೂಕೂಡ. 'ಆರಭ್ಯ ಯತ್ರ ಗಾಯತ್ರೀಂ ವರ್ಣ್ಯತೇ ಧರವಿಸ್ತರಃ | ವೃತ್ರಾಸುರವಧಶ್ಚಾಪಿ ಯತ್ರ ಭಾಗವತಂ ವಿದುಃ || " ಎಂಬ ಲಕ್ಷಣವು ಪ್ರತಿಪಾದಿತವಾಗಿದೆ. ಈ ಲಕ್ಷಣವನ್ನನುಸರಿಸಿ,ಗ್ರಂ ಥಾದಿಯಲ್ಲಿರುವ ಮಂಗಳಶ್ಲೋಕದಲ್ಲಿ ಶಬ್ದಾರ್ಥಗಳೆರಡರಿಂದಲೂ ಗಾಯ ಶ್ರೀಮಂತ್ರಾದ್ಧವು ಹೇಳಲ್ಪಡುವುದು. ಅದರಂತೆಯೇ ಮುಂದೆ ಕ್ರಮವಾಗಿ ವೃತ್ರವಧ್ರವೃತ್ತಾಂತವೂ, ಹಯಗ್ರೀವಮಂತ್ರವೂ ಪ್ರತಿಪಾದಿತವಾಗು ವುವು. ಈ ವಿವರಗಳೆಲ್ಲವೂ ಅಲ್ಲಲ್ಲಿನ ವ್ಯಾಖ್ಯಾನಗಳಿಂದ ವ್ಯಕ್ತವಾಗುವುವು.