ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ಶ್ರೀಮತ್ಪಾಗವತವು ಅಧ್ಯಾ. ೧. ಆ ಬಗೆಯ ಆಜ್ಞಾನಗಳೆಲ್ಲವನ್ನೂ ಅಡಗಿಸಬಲ್ಲನೋ, ಯಾವನು ಯಾವ ಬಗೆಯ ವಿಕಾರಕ್ಕೂ ಒಳಗಾಗದ ಸತ್ಯಸ್ವರೂಪನೋ, ಅಂತಹ ದರೆ ಧಾ ಮ್ಯಾ ಸೇನ ಸದಾ ನಿರಸ್ತ ಕುಹಕಂ) ಸ್ವರೂಪಜ್ಞಾನದಿಂದ ಯಾವ ಗಲೂ, ಸಿರಸಿಸಲ್ಪಟ್ಟ ಇಂದ್ರಜಾಲಾದಿಮಾಯೆಗಳುಳ್ಳವನು. ಎಂದರೆ ಮಾಯಾಮಯವಾದ ಸೃಷ್ಟಿಯನ್ನು ಮಾಡತಕ್ಕವನಲ್ಲವೆಂದು ಭಾವು. ಇತಂಹ (ಸತ್ಯಂ) ನಿರತಿಶಯಾನಂ ದಾನುಭವರಸನಾದ (ಪರಂ ಪರಮಾತ್ಮ ಸ್ವರೂಪನಾದ ನಾರಾಯಣನನ್ನು ಭೀಮ ಹಿ) ಧ್ಯಾನಿಸುವೆವೆಂದರ್ಧವು, ಇದರಿಂದ ಭಗವಂತನೇ ಈ ಜಗತ್ತಿನ ಸೃಷ್ಣಾದಿಗಳಿಗೆ 'ಕಾರಣಭೂತನು ಸ ರ್ವಜ್ಞನ, ಸಾಧಿಪತಿಯು, ಚತುರ್ಮುಖಬಹ್ಮನಿಗೂ ಜ್ಞಾನೋಪದೇಶಮಾಡಿದವ ನು ಲೀಲಾರ್ಥವಾಗಿ ಜೀವೇಶ್ವರ ಜಡಸೃಷ್ಟಿಗಳೆಂಬ “ಕ್ರಿಸರ್ಗದಲ್ಲಿ ಪ್ರವೃತ್ತಿಯುಳ್ಳವ ನು ನಿರತಿಶಯಾನಂದಾನುಭವಸ ರೂಪನು ಇಂತಹ ನಾರಾಯಣನೊಬ್ಬನೇ, ಸರ್ವ ಗುಣಸಂಪೂರ್ಣನಾಗಿಯೂ ಸರೆತ್ತಮನಾಗಿಯೂ, ಈ ಜೀವಜಡಪ್ರಪಂಚಗಳಿಂದ ಭಿನ್ನ ನಾಗಿಯೂ ಇರುವನೆಂದು ದೈತಾರ್ಥವು, ಗಾಯತ್ರಿ ಮಂತ್ರಾಕ್ಷಸೂಚನವು. 'ಗಾಯತ್ರುಪಕ್ರಮೋ ಯತ್ರ ತತ್ರ ಭಾಗವತಂವಿದು” ಎಂಬ ಪುರಾಣೋಕ ಲಕ್ಷಣವನ್ನನುಸರಿಸಿ, ಈ ಪ್ರಥಮಶೋಕದಲ್ಲಿ ಗಾಯತ್ರಿ ಮಂತ್ರಾರವು ಸೂಚಿತವಾಗು ವುದು. ಗಾಯತ್ರಿ ಮಂತ್ರಾರವೇನೆಂದರೆ:-(ಯಃ ನಃ ಧಿಯಃ ಪ್ರಚೋದಯಾತ್ ) “ಯಾವ ಪರಮಾತ್ಮನು ನಮ್ಮ ಬುದ್ದಿಗೆ ಪ್ರೇರಕನೋ, (ಸವಿತುಃ, ದೇವಸ್ಯ. ಸೃಷ್ಟಿಕರ್ತ ನಾಗಿಯೂ, ಸ್ವಯಂಪ್ರಕಾಶವುಳ್ಳವನಾಗಿಯೂ ಇರುವ ಆ ಸರೇಶ್ವರನ (ವರೇಣ್ಯರ ಅತ್ಯುತ್ತಮವಾದ) (ಭರ್ಗಃ) ತೇಜಸ್ಸನ್ನು (ಧೀಮಹಿ ಧ್ಯಾನಿಸುವೆವು” ಎಂಬುದು ಗಾಯತ್ರಿ ಮಂತ್ರಾರ್ಥವು. ಇದರಂತೆಯೇ ಈ ಮಂಗಳಶ್ಲೋಕದಲ್ಲಿಯಕಡ (ಜನ್ಮಾ ದಸ್ಯಯತ :) ಎಂಬುದಾಗಿ ಜಗತ್ಕಾರಣವನ್ನು ಹೇಳುವುದರಿಂದ, ಸವಿತೃ ಪದಾರ್ಥವು ಸೂಚಿತವಾಗುವುದು. (ಸ್ವರಾಟ್) ಎಂಬುದರಿಂದ ದೇವಶಬ್ದಾರ್ಥವು ಸೂಚಿತವಾಗ ವದು. (ವರ)ಎಂಬಶಬ್ದದಿಂದ ವರೇಣ ಶಬ್ದಾರ್ಥವು ಸೂಚಿತವಾಗುವುದು. ವೇದ ಪದೇಶಕನೆಂಬುದರಿಂದ (ಧಿಯೋ ಯೋ ನ: ಪ್ರಚೋದಯಾತ6)ಎಂಬ ವಾಕ್ಯಾರ್ಥವು ಬೋಧಿತವಾಗುವುದು. (ಧಾಮಾನ) ಎಂಬುದರಿಂದ ಭರ್ಗಶಬ್ದಾರ್ಥವು ಸೂಚಿತ ವಾಗವುದು. (ಧೀ ಮಹಿ) ಎಂಬ ಪದವು ಶಬ್ದಾರ್ಥಗಳೆರಡರಿಂದಲೂ, ಗಾಯತ್ರಿ ಮಂತ್ರವನ್ನು ಹೋಲುವುದು.