ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ ೧, ಹುಟ್ಟುವ ಮನುಷ್ಯರು ಕೇವಲಭಾಗ್ಯಹೀನರೆಂದು ಹೇಳುವುದಕ್ಕೆ ಏನೇನೂ ಸಂದೇಹವಿಲ್ಲ. ಇದಲ್ಲದೆ ಕಲಿಯುಗದ ಜನರು ತಮಗೆ ತೋರಿದ ಧರ್ಮಾಡಿಗ ಳನ್ನು ಸಾಧಿಸಬೇಕಾಗಿದ್ದರೂ ಕೂಡ, ಅದರ ಸಾಧನಗಳು ನಾನಾವಿಧಗಳಾ ಗಿರುವುದರಿಂದ, ಎಷ್ಟೋ ವಿಷಯಗಳನ್ನು ಕೇಳಬೇಕಾಗಿರುವುದು ! ಅವುಗಳ ನ್ನು ಕೊನೆಮುಟ್ಟಿಸುವುದಕ್ಕೂ ಎಷ್ಟೋ ಶ್ರಮಪಡಬೇಕಾಗುವುದು. ನಡೆಸ ತಕ್ಕ ಕರ್ಮಗಳೂ ಅಪರಿಮಿತವಾಗಿರುವುವು. ಆದುದರಿಂದ ಎಲೈ ಸೂತನೆ! ನೀನು ಪುರಾಣಾದಿಗಳ ಸಾರವೆಲ್ಲವನ್ನೂ ಸಂಗ್ರಹಿಸಿ, ಅವುಗಳಲ್ಲಿ ಯಾ ವುದು ನಿನ್ನ ಬುಟ್ಟಿಗೆ ಮುಖ್ಯವೆಂದು ತೋರಿರುವುದೋ, ಅದನ್ನು ನಮಗೂ ಅನುಗ್ರಹಿಸಿ ತಿಳಿಸಬೇಕು : ಸುಲಭವಾಗಿ ಪರಮಪದವನ್ನು ಸಾಧಿಸುವುದಕ್ಕೆ ನಿನಗೆ ತಿಳಿದಮಟ್ಟಿಗೆ ಉತ್ತಮವಾದ ಉಪಾಯವೇನೆಂಬುದನ್ನು ನಮಗೆ ತಿಳಿಸು : ಎಲೈ ಸಂಧಶಿರೋಮಣಿ ! ಆ ಉಪಾಯವನ್ನು ಕೇಳದಮಾತ್ರ ಒಂದಲೇ ನಮ್ಮ ಮನಸ್ಸಿನ ಕಲ್ಮಷಗಳೆಲ್ಲವೂ ನೀಗಿ ಪ್ರಸನ್ನ ವಾಗುವಂತೆ, ಸುಲಭೋಪಾಯವನ್ನು , ಸೀನೋದಿರುವ ಸಗ್ಯಂಡೆಗಳಿಂದ ಸಂಗ್ರಹಿಸಿ ಯಾಗಿ,ನಿನ್ನ ಬುದ್ಧಿಯಿಂಹಿಸಿಯಾಗಲಿ ತಿಳಸಬೇಕು!ಎಲೈ ಮಹಾತ್ಮನೆ ನಿನಗೆ ಮಂಗಳವಾಗಲಿ ! ಭಕ್ತರಕ್ಷಕನಾದ ಭಗವಂತನು ಈ ಭೂಮಿಯಲ್ಲಿ ಯಾವ ಕಾರವನ್ನು ನಡೆಸುವುದಕ್ಕಾಗಿ ದೇವಕೀದೇವಿಯಲ್ಲಿ ವಸುದೇವಪುತ್ರ ನಾಗಿ ಅವತರಿಸಿದನೋ, ಅದರ ರಹಸ್ಯಗಳೆಲ್ಲವನ್ನೂ ನೀನು ಚೆನ್ನಾಗಿ ಬಲ್ಲವ ನು. ಅದನ್ನು ನಾವೂ ಕೇಳಬೇಕೆಂದಿರುವೆವು. ಕೃಷ್ಣಾವತಾರವು ಲೋಕದಲ್ಲಿ ಶತ್ರುಮಿತ್ರರೆಂಬ ಭೇದವಿಲ್ಲದೆ ಸಮಸ್ತಪ್ರಾಣಿಗಳಿಗೂ ಕ್ಷೇಮವನ್ನೂ , ಮೇ ಲೈಯನ್ನೂ ಕೈಗೂಡಿಸಿರುವುದು, ಆ ಶ್ರೀಕೃಷ್ಣನಾಮವನ್ನು ಅಜ್ಞಾನದಿಂ ದೊಮ್ಮೆ ಸ್ಮರಿಸಿದಮಾತ್ರದಲ್ಲಿಯೂಕೂಡ, ಭಯಂಕರವಾದ ಸಂಸಾರವೆಂಬ ಪಾಶವು ಬಿಟ್ಟು ಹೋಗುವುದು, ಅವನ ನಾಮಸ್ಮರಣಕ್ಕೆ ಮಹಾಭಯವೂ ಕೂಡ ಭಯಪಡುವುದು. ಆಷ್ಟೇಕೆ ? ಆತನ ಪಾದಸಂಬಂಧದಿಂದ ಪವಿತ್ರ ರಾಗಿ, ಶಮದಮಾರಿಗುಣವಿಶಿಷ್ಯರಾದ ಮಹರ್ಷಿಗಳ ಪಾದವನ್ನು ಮುಟ್ಟಿ ದಮಾತ್ರದಿಂದಲೇ,ಚೇತನರ ಜನ್ಮವು ಪವಿತ್ರವಾಗುವುದಲ್ಲವೆ?ಆತನಪಾದತೀ ರ್ಥರೂಪವಾದ ಗಂಗೆಯೂ ಕೂಡ ಸ್ನಾನಪಾನಾದಿಗಳಿಂದ ತನ್ನನ್ನು ಸೇವಿ