ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೭ ಅಧ್ಯಾ- ೨.] ಪ್ರಥಮಸ್ಕಂಧವು. ಮೂರುಗುಣಗಳುಂಟು. ಇವು ಮೂರೂ ಕೇವಲಪ್ರಕೃತಿಯ ಗುಣಗಳು. ಹೊಂದುವನೆಂಬುದರಿಂದ, ಈ ತ್ರಿಮೂರ್ತಿಗಳಿಗಿಂತಲೂ ಬೇರೆಯಾದ ಪರತತ್ವೋಂ ದುಂಟೆಂದೂ ಸೂಚಿತವಾಗುವುದು. ಇದರಮೇಲೆ'ರ್ಯ ಬ್ರಹ್ಮ ವಿಷ್ಣು ರುದ್ರಾಸ ಸಂಪ್ರಸೂಯ೦ತೇ, ತೇನೇದಂ ಪೂರ್ಣ೦ ಪುರುಷೇಣ ಸರಂ, ತತೋಯದುರತ ರಂತದರಪಮನಾಮಯಮಯ ಏತದ್ವಿದುರಮೃತಾಸ್ತೇ ಭವ” ಎಂಬಶ್ರುತಿವಾಕ್ಯ ದಲ್ಲಿ, ಬ್ರಹ್ಮ ವಿಷ್ಣು ಪ್ರಕೃತಿಗಳೆಲ್ಲರೂ ಬೇರೊಂದು ಪರತತ್ವದಿಂದ ಹುಟ್ಟಿದುದಾಗಿ ಯ, (ತತೋಯದುತ್ತರತರಂ'ಎಂದು ತ್ರಿಮೂರ್ತಿಗಳಿಗಿಂತಲೂ ಆ ತತ್ವವು ಪರವೆನಿ ಸಿ, ಬೇರೆಯಾಗಿರುವುದಾಗಿಯೂ, ಅದೇ ಮೋಕ್ಷಹೇತುವೆಂಬುದಾಗಿಯೂ ಹೇಳಲ್ಪಟ್ಟಿ ರುವುದು. ಇದೂ ಅಲ್ಲದೆ 'ಅಮೃತಸ್ಯೆಷ ಸೇತು” ಎಂಬುದಾಗಿ ವಿಷ್ಣುವು ಮೋಕ್ಷಕ್ಕೆ ಸೇತುವಾಗಿರುವನೆಂದರೆ ಮೋಕ್ಷ ಪ್ರಾಪ್ತಿಗೆ ದಾರಿಯಾಗಿರುವನೆಂಬುದರಿಂದ, ತ್ರಿಮ ರ್ಶಿಗಳಿಗಿಂತಲೂ ಬೇರೆಯಾವ ಪರತತ್ವವೊಂದುಂಟೆಂದೂ,ಅದೇ ಮುಮುಕ್ಷುಗಳಿಗೆ ಪ್ರಾಸ್ಮಸ್ಥಾನವೆಂದೂ, ಸಕಲಜಗತ್ಕಾರಣವೆಂದೂ ಸಿದ್ಧವಾಗುವುದು.ಹೀಗಿರಲು ನಾರಾ ಯಣನೇ ಪರಮಪುರುಷನೆಂದೂ,ಅವನೇ ಮುತ್ತಿಗೆ ಸ್ನಾನನೆಂದೂ ಹೇಳುವುದು ಹೇಗೆ?” ಎಂದು ಕೆಲವರು ಆಕ್ಷೇಪಿಸಬಹುದು. ಇವುಗಳಿಗೆ ಸಮಾಧಾನವೇನೆಂದರೆ:-ಪರಮಪ ರುಷನೊಬ್ಬನೇ ತ್ರಿಮೂರ್ತಿಗಳಾದನೆಂದಮಾತ್ರಕ್ಕೆ, ಅವನಿಗೂ ತ್ರಿಮೂರ್ತಿಗಳಿಗೂ ಐಕ್ಯವನ್ನು ಹೇಳಬೇಕೆಂಬ ನಿರ್ಬಂಧವೇನೂ ಏರ್ಪಡುವುದಿಲ್ಲ. ಬ್ರಹ್ಮಾ ನಾರಾಯಣ ಶಿವಶ್ಯನಾರಾಯಣ;” ಎಂಬ ವಾಕ್ಯಗಳಲ್ಲಿ ಸ್ವರಪೈಕ್ಯವು ತೋರಿದರೂ, 'ನಾರಾಯಣಾ ಹ್ಯಾ ಜಾಯತೇ, ನಾರಾಯಣಾದುದೊ ಜಾಯತೇ”ಇತ್ಯಾದಿಗಳಾದ ಬೇರೆವಾ ಕೈಗಳಿಂದ ಆ ಸಂದೇಹವು ಪರಿಕೃತವಾಗಿ,ಬ್ರಹ್ಮ ರುದ್ರರಿಗೆ ನಾರಾಯಣನೇ ಉತ್ಪತ್ತಿ ಕಾರಣನೆಂದು ವ್ಯಕ್ತವಾಗುವುದು, ಇದೇ ಅರ್ಥದಲ್ಲಿ ಇನ್ನೂ ಅನೇಕಶ್ರುತಿಸ್ಮತಿವಾಕ್ಯ ಗಳುಂಟು “ಏಕೆ ಹವೈ ನಾರಾಯಣ ಆಸೀನ್ನ ಬ್ರಹ್ಮಾ ದೇಶಾನಃ”ಆದಿಯಲ್ಲಿ ನಾತಾ ಯಣನೊಬ್ಬನುಹೊರತು ಬ್ರಹ್ಮ ರುದ್ರಾದಿಗಳಾರೂ ಇರಲಿಲ್ಲವೆಂದೂ, “ಸ ಮುನಿ ತ್ಯಾ ಸಮಚಿಂತಯತ” 'ತತ ಏತೇ ವ್ಯಜಾಯತ್ತ ವಿಶ್ವ ಹಿರಣ್ಯಗದ್ಯೋಗಿ ರ್ಯಮವರುಣರುದ್ರಾ :” “ಯನ್ನಾಭಿಪದ್ಮಾದಭವ, ಮಹಾತ್ಮಾ ಪ್ರಜಾಪತಿಃ| ತತ್ರ ಬ್ರಹ್ಮಾ ಚತುರುಸೊತೊಜಾಯತ, ಸೋಗೋ ಭೂತಾನಾಂ ಮೃತ್ಯುಮಸೃಜನ್ ತಕ್ಷಂ ತ್ರಿಶಿರಸ್ಕೃ ತ್ರಿಪಾದಂ.ಖಣ್ಡಪರಶುಂ”ಇತ್ಯಾದಿ ವಾಕ್ಯಗಳಿಂದ ಶ್ರೀಮನ್ನಾ ರಾಯಣನ ಮನಸ್ಸಂಕಲ್ಪದಿಂದ, ಅವನ ನಾಭಿಯಲ್ಲಿ ಬ್ರಹ್ಮನು ಜನಿಸಿ, ಆಮೇಲೆಬ್ರಹ್ಮನೆ ರುದ್ರನನ್ನು ಸೃಷ್ಟಿಸಿದಹಾಗೆ ವ್ಯಕ್ತವಾಗುವುದು, ಆದ್ಯೋ ನಾರಾಯಣೋ ದೇವ