ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೮೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೨ ಶ್ರೀಮದ್ಭಾಗವತವು. [ಅಧ್ಯಾ, ೨. ಕಾರವನ್ನು ಮಾಡಿದರೂ, ಅವೆಲ್ಲವೂ ಅಂತರಾತ್ಮನಾದ ಆ ವಾಸುದೇವನಲ್ಲಿ ಯೇವರ್ತಿಸುವುವು.ಎಲ್ಲೆಲ್ಲಿಯೂ ಒಂದೇಬಗೆಯತೇಜಸ್ಸುಳ್ಳ ಅಗ್ನಿ ಯು ತನ ಗಾಶ್ರಯವಾದ ಹುಲ್ಲು,ಕಟ್ಟಿಗೆ, ಮೊದಲಾದ ವಸ್ತುಗಳಿಗೆ ತಕ್ಕಂತೆ ಹೆಸರಿನ ಕ್ಲಿಯೂ, ಆಕೃತಿಯಲ್ಲಿಯೂ ಬೇಡುವಂತೆ, ಜೀವನೂಕೊಡ, ಸರಕಾಲ ಸ ಗ್ಯಾವಸ್ಯೆಗಳಲ್ಲಿಯೂ ಒಂದೇ ವಿಧವಾದಜ್ಞಾನಾನಂದಸ್ವರೂಪನಾಗಿದ್ದರೂ, ತಾನು ಸೇರಿದ ದೇಹಗುಣಕ್ಕೆ ತಕ್ಕಂತೆ, ದೇವನೆಂದೂ, ಮನುಷ್ಯನೆಂದೂ, ತಿರಕ್ಕೆಂದೂ, ನಾನಾಭೇದಗಳಿಂದ ತೋರುವನು. ಹಾಗೆಯೇ ಸತ್ಯೇಶ್ವರನೂ ಕೂಡ ಜೀವಾತ್ಮನನ್ನೆ ತನಗೆ ಶರೀರವನ್ನಾಗಿ ಮಾಡಿಕೊಂಡು, ತನ್ಮೂಲಕ WH & ಭೂತವಾಗಿ, ಆತನ ನಿಯಮವಕ್ಕೆ ಒಳಪಟ್ಟಿರುವುವು. ಪ್ರಪಂಚಸೃಷ್ಟಿಗೆ ಮೊದಲು ಈ ಚಿದಚಿತ್ರಗಳೆರಡೂ ಈಗ ಕಾಣುವ ನಾಮರೂಪಭೇದಗಳೆಂದೂ ಇಲ್ಲದೆ, ಭಗವಂತನಿಗೆ ಶರೀರವಾಗಿ,ಅವನೊಡನೆ ಏಕಾಕಾರವಾಗಿಯೇ ಇದ್ದುವು. ಇದೇ ಅವುಗಳ ಸೂಕ್ಷವಸ್ಥೆ ಯು, ಉಪ್ಪು, ಸಕ್ಕರೆ ಇವುಗಳೆರಡೂ ಹಾಲಿನಲ್ಲಿ ಕರಗಿದಾಗ, ಅವು ಮೂರೂ ಒಂದಾ ಗಿ ಸೇರಿ,ಶಾಲೆಂದೇ ಕಣ್ಣಿಗೆ ಕಾಣುವಂತೆ, ಈಶ್ವರನೊಬ್ಬನೇ ಕಾಣುತ್ತಿದ್ದನು “ಸದೇವ ಸೆಮೈದಮಗ್ರ ಆಸೀದೇಕಮೇವಾದ್ವಿತೀಯಂ” ಎದು ಸೃಷ್ಟಿಗೆಮೊದಲು ಎರಡ ನೆಯ್ದಿಲ್ಲದೆ ಬ್ರಹ್ಮವೊಂದೇ ಇತ್ತೆಂಬ ಶ್ರುತಿಗೆ ಇದೇ ಅರ್ಥವು. ಅದರಿಂದಾಚೆಗೆ ಈಶ್ವ ರನು 'ತಕತ ಬಹು ಸ್ಕಾಂ ಪ್ರಜಾಯೇಯ” ಎಂದು ತಾನೇ ಅನೇಕವಸ್ತುಗಳಾಗಿ ಹುಟ್ಟುವಂತೆ ಸಂಕಲ್ಪಿಸಿಕೊಂಡು, ಚಿದಚಿತ್ತುಗಳನ್ನು ಬೇರೆಬೇರೆ ನಾಮರೂಪವಿಭಾಗ ಗಳಿಂದ ಬೇರ್ಪಡುವಂತೆ ಸೂಲಾಕಾರಕ್ಕೆ ತಿರುಗಿಸಿದನು. ಇದೇ ಅವುಗಳ ಸ್ಕೂಲಾ ವಸ್ಥೆಯು, ಇದೇ ಸೃಷ್ಟಿಯೆನಿಸುವುದು. ಇವುಗಳ ಸಮುದಾಯವೇ ಈ ಜಗತು. ಈ ಸ್ನಲಾವಸ್ಥೆಯಲ್ಲಿಯೂ ಕೂಡ ಒಂದೊಂದರಲ್ಲಿಯೂ ಈಶ್ವರನು ಅಂತರಾಮಿಯಾ ಗಿರುವನು, ಹೀಗೆ ಚಿದಚಿತ್ತಗಳೆರಡೂ ಸೂಕ್ಷಾವಸ್ಥೆಯಲ್ಲಿಯಾಗಲಿ, ಸ್ಕೂಲಾವಸ್ಥೆ ಯಲ್ಲಿಯಾಗಲಿ, ಈಶ್ವರನಿಗೆ ಶರೀರವಾಗಿ ಅವನನ್ನಗಲದಿರುವುವು. ಈಶ್ವರನು ಅವುಗ ಳಿಗೆ ಆತ್ಮರೂಪದಿಂದಿರುವನು. ಆದುದರಿಂದ ಶರೀರಭೇದದಿಂದ ಹುಟ್ಟಿರುವ ರಾಮ, ಸೋಮ ಇವೇ ಮೊದಲಾದ ನಾಮಾಂತರಗಳೆಲ್ಲವೂ ಅದರೊಳಗಿನ ಜೀವಾತ್ಮನವರೆ ಗೂ ಸಲ್ಲುವಂತೆ, ಶರೀರ ಭೂತಗಳಾದ ಜೀವಗಳಿಗೂ, ಇತರ ವಸ್ತುಗಳಿಗೂ ವಾಚ ಕಗಳಾದ ಶಬ್ದಗಳೆಲ್ಲವೂ ಅಂತರಾಮಿಯಾದ ಆ ಪರಮಾತ್ಮನ ವಿಷಯವಾಗಿಯೆ ಕೊನೆಮುಟ್ಟುವುವೆಂದು ತಿಳಿಯಬೇಕು.