ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಶ್ರೀಮದ್ಭಾಗವತವು [ಅಧ್ಯಾ. ೨೧. ಚಿತ್ತು, ಅಚಿತ್ತು, ಈಶ್ವರನೆಂಬ ಮೂರು ತತ್ವಗಳಿಂದಲೇ ಏರ್ಪಟ್ಟಿರುವುದ ರಿಂದ, ಒಂದಕ್ಕೊಂದು ಸಮಾನಗಳಾಗಿಯೇ ಇರುವುವು. ಹಾಗಿದ್ದರೂ ವಿವಿಧಪ್ರಾಣಿಶರೀರನಿರಾಣಕ್ಕೆ ಸಾಧನಗಳಾದ ಸೃಥಿವಿ ಮೊದಲಾದ ಭೂತಗಳಿಗೆ, ಸೃಷ್ಟಿ ಕಾಲದಲ್ಲಿ ಚತುರುಖನು * ವೇದದಲ್ಲಿ ಹೇಳಲ್ಪಟ್ಟಂತೆ ಬೇರೆಬೇರೆ ನಾಮರೂಪಗಳನ್ನು ಕಲ್ಪಿಸಿರುವನು. ಈ ಭೇದಕಲ್ಪನೆಯು ಸಂಸಾರಿಗಳಾದ ಚೇತನರಿಗೆ, ಅವರವರ ಇಪ್ಯಾರಸಿಗೆ ತಕ್ಕಂತೆ ಅಧಿ ಕಾರನಿಷ್ಠೆಯನ್ನು ಕಲ್ಪಿಸುವುದಕ್ಕೆಂದೇ ಗ್ರಹಿಸಬೇಕು. ಅವರವರು ವಿಪ ರೀತಾಧಿಕಾರಗಳಿಗೆ ಹೋಗದೆ ತಮ್ಮ ತಮ್ಮ ಅಧಿಕಾರಗಳನ್ನೇ ಅನುಷಿ ಸುವಹಾಗೆ ನಿಯಮವನ್ನಿಡುವುದಕ್ಕಾಗಿಯೇ ನಾನು ದೇಶಕಾಲಾದಿವಸ್ತುಗ ಳಲ್ಲಿ ಶುದ್ಧಾಶುದ್ಧಗಳೆಂಬ ಬೇರೆಬೇರೆ ವಿಭಾಗಗಳನ್ನು ತೋರಿಸಿರುವೆನು. ಈ ಶುದ್ಧಾಶುದ್ಧವಿಭಾಗ ಕ್ರಮವೇನೆಂದರೆ, ದೇಶಗಳಲ್ಲಿ ಕೃಷ್ಣಮೃಗಗಳ ಸಂಚಾರವಿಲ್ಲದೆಯೂ, ಬ್ರಾಹ್ಮಣಭಕ್ತಿಯಿಲ್ಲದೆಯೂ ಇರುವ ದೇಶವು ಅಶು ದವೆಂದೂ, ಅವುಗಳನ್ನೊಳಕೊಂಡ ದೇಶವು ಶುದ್ಧವೆಂದೂ ತಿಳಿಯಬೇಕು. ಆದರೆ ಕೃಷ್ಣಮೃಗಗಳು ಹೆಚ್ಚಾಗಿ ತುಂಬಿದ್ದರೂ, ಸೌರಾಷ್ಟ್ರ, ಮಗಧ ಕಳಿಂಗಿದೇಶಗಳಂತೆ ಮೈತೃಭೂಯಿಷಗಳಾಗಿಯೂ, ಊಷರ ಪ್ರಚುರವಾಗಿಯೂ ಇಮ್ಮ, ಅಸಂಸ್ಕೃತಗಳಾದ ದೇಶಗಳು ಅಶುದ್ಧ ದೇಶಗ ಳೆನಿಸುವುವು. ಕಾಲಗಳಲ್ಲಿ ದ್ರವ್ಯಸಂಪತ್ತಿಯುಳ್ಳುಪಾಗಿಯೂ, ಪೂಾಜ್ಞಾ ಜರೂಪದಿಂದ ಸಹಜವಾಗಿಯೂ ಕಶ್ಯಗಳಿಗೆ ಅನುಕೂಲಿಸತಕ್ಕ ಕಾಲವು ಶುಚಿಯೆನಿಸುವುದು. ದ್ರವ್ಯಾಲಾಭದಿಂದಲೋ, ರಾಹ್ಮ ವಿಷ್ಣವದಿಂ ದಲೋ, ಸೂತಕಾದಿಗಳಿಂದಲೋ ಯಾವ ಕಾಲವು ಕರಗಳಿಗೆ ಅನುಕೂಲಿಸ ಬರುವುದೋ ಆಕಾಲವು ಅಶುಚಿಯೆನಿಸುವುದು. ದ್ರವ್ಯಗಳಿಗೆ ಇತರದ್ರವ್ಯ ಸಂಬಂಧದಿಂದಲೂ, ಶಾಸ್ತ್ರ ಪ್ರಮಾಣದಿಂದಲೂ, ಹಿರಿಯರ ವಾಕ್ಯಗ ಳಿಂದಲೂ, ಸಂಸ್ಕಾರಗಳಿಂದಲೂ, ಕಾಲದಿಂದಲೂ, ಹೆಚ್ಚು ಕಡಿಮೆ

  • ಬ್ರಹ್ಮನು ಸೃಷ್ಟಿಕಾಲದಲ್ಲಿ, ತನಗೆ ಪರಮಪುರುಷನಿಂದುಪದೇಶಿಸಲ್ಪಟ್ಟ ವೇದದಲ್ಲಿರುವ ದೇವಮನುಷ್ಕಾದಿಶಬ್ದಗಳನ್ನು ಚಿಂತಿಸಿ, ಅವುಗಳಿಗೆ ತಕ್ಕಂತೆ ಬೇರೆ ಬೇರೆ ಆಕಾರಗಳನ್ನು ಸೃಷ್ಟಿಸಿದುದಾಗಿ ಶ್ರುತಿಯು.