ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ. ೧೪. ನಂತೆ ಹೊಳೆಯುವ ಬಿಳೀಕರೆ, ಬಿಳೀಚಾಮರಗಳು, ಚಿನ್ನದ ಕಲಶಗಳು, ಬಂಗಾರದ ಸರಪಣಿಯಿಂದ ಕಟ್ಟಲ್ಪಟ್ಟ ಬಿಳೀಯೆತ್ತು, ಇವೆಲ್ಲವೂ ಸಿದ್ಧವಾ ಗಿರುವುವು. ಅಂದವಾದ ಕೇಸರಳಿಂದಲೂ ನಾಲ್ಕು ಹಲ್ಲುಗಳಿಂದಲೂ ಕೂಡಿ ದ ಮಹಾಬಲಾಢವಾದ ಕುದುರೆಯು ಇಲ್ಲಿರುವುದು. ಸಿಂಹಾಸನವೂ ಸಿದ್ಧ ಪಡಿಸಲ್ಪಟ್ಟಿರುವುದು.ಇದೋ ಇಲ್ಲಿ ಹುಲಿಯ ಚರವನ್ನು ತರಿಸಿಟ್ಟಿರುವೆನು. ಹುತಮಾಡಲ್ಪಟ್ಟ ಅಗ್ನಿಯು ಅತ್ಯುತ್ಸಾಹಗೊಂಡಂತೆ ಜಾಜ್ವಲ್ಯಮಾನ ವಾಗಿ ಉರಿಯುತ್ತಿರುವುದು. ಸಮಸ್ತ ಮಂಗಳವಾದ್ಯಗಳೂ ಸಿದ್ಧವಾಗಿರು ವುವು. ವೇಶೈಯರೆಲ್ಲರೂ ಆಲಂಕೃತರಾಗಿರುವರು. ಅಚಾತ್ಯರೂ, ಬ್ರಾಹ್ಮಣ ರೂ ಬಂದಿರುವರು. ಗೋವುಗಳೂ, ಮೃಗಪಕ್ಷಿಗಳೂ, ಸಿದ್ದವಾಗಿ ಬಂದು. ನಿಂತಿರುವುವು ಪಟ್ಟಣವಾಸಿಗಳೂ, ದೇಶವಾಸಿಗಳೂ, ವರ್ತಕರೂ, ಇಲ್ಲಿ. ತಮ್ಮ ತಮ್ಮ ಪರಿವಾರಗಳೊಡನೆ ಬಂದು ಸೇರಿರುವರು. ಇವರೆಲ್ಲರೂ ಒ ಬ್ಬರಿಗೊಬ್ಬರು ರಾಮಾಭಿಷೇಕವೆಂಬ ಪ್ರಿಯವಾರ್ತೆಯನ್ನೇ ಹೇಳಿಕೊಳ್ಳು ತಾ, ಸಂತೋಷಭರಿತರಾಗಿ, ಇತರಸಾಮಂತರಾಜರೊಡಗೂಡಿ, ಅಭಿಷೇಕ ಕಾಲವನ್ನು ನಿರೀಕ್ಷಿಸುತ್ತಿರುವರು. ನೀನುಹೊಗಿ ಮಹಾರಾಜನನ್ನು ತ್ವರೆ ಪಡಿಸು ! ಹೊತ್ತುಮೀರುವುದು! ಇದೋ ! ಚೆನ್ನಾಗಿ ಬೆಳಗಾಯಿತು. ಈ ಗಲೇ ಪರಿಶುದ್ಧವಾದ ಪ್ರಷ್ಯ ನಕ್ಷತ್ರವು ಬರುವುದು. ಆ ಮುಹೂರ್ತದ ಲ್ಲಿಯೇ ಅಭಿಷೇಕವನ್ನು ನಡೆಸಿಬಿಡಬೇಕು. ಇನ್ನು ನೀನು ಹೊರಡು.” ಎಂ ದನು. ಮಹಾತ್ಮನಾದ ವಸಿಷ್ಠನು ಹೇಳಿದ ಮಾತನ್ನು ಕೇಳಿ, ಸುಮಂ. ತ್ರನು ದಶರಥನಿಗೆ ಈ ಸದಭಿಪ್ರಾಯವು ಹುಟ್ಟಿದುದಕ್ಕಾಗಿ ಆತನನು ಮನಸ್ಸಿನಲ್ಲಿಯೇ ಕೊಂಡಾಡುತ್ತ, ಆ ರಾಜಗೃಹದೊಳಕ್ಕೆ ಪ್ರವೇಶಿಸಿದನು. ರಾಜನಿಗೆ ಪರಮಾಪ್ತನಾಗಿ ವಯೋವೃದ್ಧನಾಗಿರುವ ಆ ಸುಮಂತ್ರನನು ದ್ವಾರಪಾಲಕರು ನೋಡಿ, ಅವನನ್ನು ತಡೆಯಲಾರದೆ ಹಿಂಜರಿದು ನಿಂತರು. ಸುಮಂತ್ರನು ದಶರಥರಾಜನಿಗೆ ಬಹಳ ಆಪ್ತನಾದುದರಿಂದ, ಆತ ನನ್ನು ಯಾವಾಗಲೂ ಬಾಗಿಲಲ್ಲಿ ತಡೆಯಕೂಡದೆಂದು ರಾಜಾಜ್ಞೆಯಿದ್ದಿ ತು, ಆ ರಾಜಾಜ್ಞೆಯನ್ನನುಸರಿಸಿ ದ್ವಾರಪಾಲಕರೆಲ್ಲರೂ ಹಿಂದಾಗಿಬಿ - ಟೈರು. ಹೀಗೆ ಸುಮಂತ್ರನು ತಡೆಯಿಲ್ಲದೆ ರಾಜನ ಮನೆಯನ್ನು