ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆ ವರ್ಗ: ೧೮.] ಆಯೋಧ್ಯಾಕಾಂಡವು. (ಎಲೆದೇವಿ ! ಇದೀಗ ಚೆನ್ನಾಯಿತು! ನನ್ನೊಡನೆಯೇ ನೀನು ಈ ಮಾತುಗಳ ನಾಡಬಹುದೆ ? ಹೀಗೆ ಹೇಳಬಾರದು. ತಂದೆಯ ಆಜ್ಞೆಯಾದರೆ ನಾನು ಅಗ್ನಿ ಪ್ರವೇಶವನ್ನು ಮಾಡುವುದಕ್ಕೂ ಹಿಂಜರಿಯುವವನಲ್ಲ ! ವಿಷವನ್ನಾ ಬರೂ ಕುಡಿದುಬಿಡುವೆನು. ಸಮುದ್ರದಲ್ಲಿಯಾದರೂ ಬಿದ್ದು ಬಿಡುವೆನು. ನನಗೆ ಗುರುವಾಗಿ, ತಂದೆಯಾಗಿ, ದೊರೆಯಾಗಿ, ಹಿತನಾಗಿಯೂ ಇರುವ ಈತನ ಉದ್ದೇಶದಂತೆ ನಾನು ನಡೆಯದಿದ್ದರೆ, ಇನ್ನು ನನ್ನ ಜನ್ಮವೇಕೆ ? ಎಲೆ ಜನನಿ ! ರಾಜನ ಇಷ್ಯವನ್ನು ತಿಳಿಸು! ತಪ್ಪದೆ ಅದನ್ನು ನಡೆಸುವೆನು. ಆಣೆ ಯಿಟ್ಟ ಸತ್ಯಮಾಡಿಕೊಡುವನು. ರಾಮನು ಎರಡುಮಾತಾಡತಕ್ಕವನಲ್ಲ ವೆಂದು ನೀನು ತಿಳಿಯೆಯಾ?” ಎಂದನು. ಹೀಗೆ ಋಜುಸ್ವಭಾವದಿಂದ ಪ್ರತಿ ಜ್ಞೆ ಮಾಡಿಕೊಟ್ಟ ಸತ್ಯಸಂಧನಾದ ಆ ರಾಮನನ್ನು ನೋಡಿ, ದುಷ್ಟೆಯಾದ ಕೈಕೇಯಿಯು, ಅತಿಕರವಾದ ಒಂದು ಮಾತನ್ನಾಡುವಳು. ವ ರಾಮಾ ! ಪೂತ್ವದಲ್ಲಿ ದೇವಾಸುರರಿಗೆ ಯುದ್ಧವು ನಡೆದಾಗ, ನಾನು ಈತನ ಪ್ರಾಣವನ್ನು ರಕ್ಷಿಸಿದೆನು. ಆಗ ಈತನ ದೇಹದಲ್ಲಿ ನಾಟಿಕೊಂಡಿದ್ದ ಬಾಣ ಗಳೆಲ್ಲವನ್ನೂ ಕಿತ್ತು ಕಾಪಾಡಿದೆನು. ಹೀಗೆ ಪ್ರಾಣದಾನವನ್ನು ಮಾಡಿದ ನನ್ನಲ್ಲಿ ಪ್ರಸನ್ನ ನಾಗಿ, ಈತನು ನನಗೆ ಎರಡುವರಗಳನ್ನು ಕೊಟ್ಟನು. ಆ ವರಗ ಇನ್ನು ಈಗ ನಾನು ವಾಚಿಸಿದೆನು. ಅವುಗಳಲ್ಲಿ ಒಂದಕ್ಕೆ ಭರತನಿಗೆ ರಾಜ್ಯಾ ಭಿಷೇಕವನ್ನು ಮಾಡಬೇಕೆಂದೂ,ಮತ್ತೊಂದಕ್ಕೆ ನಿನ್ನನ್ನು ಈಗಲೇ ದಂಡಕಾ ರಣ್ಯಕ್ಕೆ ಕಳುಹಿಸಿಬಿಡಬೇಕೆಂದು ಕೇಳಿಕೊಂಡೆನು. ರಾಮಾ : ನಿನ್ನ ತಂದೆಯನ್ನೂ ನಿನ್ನನ್ನೂ, ಸತ್ಯದಲ್ಲಿರಿಸಿಕೊಳ್ಳಬೇಕೆಂಬ ಆಸೆಯು ನಿನಗಿದ್ದರೆ, ಈ ಕಾವ್ಯಗಳನ್ನು ಈಗಲೇ ನಡೆಸುವ ಪ್ರಯತ್ನವನ್ನು ಮಾಡು. ನಿನ್ನ ತಂದೆ ಯು ಪ್ರತಿಜ್ಞೆ ಮಾಡಿಕೊಟ್ಟದನ್ನು ನೀನು ನಡೆಸಬೇಕು ! ಹದಿನಾಲ್ಕು ವರ್ಷ ಗಳವರೆಗೆ ನೀನು ಕಾಡಿನಲ್ಲಿರಬೇಕು. ಈಗ ನಿನ್ನ ಅಭಿಷೇಕಕ್ಕಾಗಿ ಸಿದ್ಧಪಡಿ ಸಲ್ಪಟ್ಟಿರುವ ಸಾಮಗ್ರಿಗಳಿಂದಲೇ, ಭರತನಿಗೆ ಅಭಿಷೇಕವು ನಡೆಯುವತೆ ಮಾಡಬೇಕು. ನೀವು ಮನಃಪೂರೈಕವಾಗಿ ರಾಜ್ಯಾಭಿಷೇಕವನ್ನು ಬಿಟ್ಟು,ಜಡೆ ಗಳನ್ನು ಧರಿಸಿ, ಕೃಷ್ಣಾಜಿನವನ್ನು ಟ್ಟು, ಹದಿನಾಲ್ಕು ವರ್ಷಗಳವರೆಗೆ ದಂಡ ಕಾರಣ್ಯದಲ್ಲಿರುವುದಕ್ಕೆ ಅನುಮತಿಸಬೇಕು. ಭರತನು ಕೋಸಲದೇಶದಲ್ಲಿ