ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬e ಶ್ರೀಮದ್ರಾಮಾಯಕರ [ಸರ್ಗ, ೨೮, ಗಳಲ್ಲಿ ನಡೆಸಬೇಕಾದ ದೇವಕಾರಗಳನ್ನೂ , ಪಿತೃಕಾರಗಳನ್ನೂ ಶಾಸ್ತೆ ಕವಾಗಿ ನಡೆಸಬೇಕು. ಅತಿಥಿಗಳಾಗಿ ಬಂದವರನ್ನು ಪ್ರತಿದಿನವೂ ಉಪ ಚರಿಸಿ ಪೂಜಿಸಬೇಕು.ಪ್ರತಿದಿನವೂ ಕಾಲಕಾಲಕ್ಕೆ ಸರಿಯಾಗಿ ಮೂರಾವರ್ತಿ ಸ್ನಾನಮಾಡಬೇಕು. ಇವೆಲ್ಲಕ್ಕೂ ಅಲ್ಲಿ ತಕ್ಕ ಅನುಕೂಲವಿಲ್ಲದಿದ್ದರೂ ಯಾವ ಭಾಗದಲ್ಲಿಯೂ ಲೋಪವಿಲ್ಲದಂತೆ ನಡೆಸಬೇಕು. ನಿಯಮದಿಂದಿರಬೇಕು. ಈ ಕಾರಣಗಳಿಂದಲೇ ವನವಾಸವೆಂಬುದು ಬಹಳಕಷ್ಟವು ಪ್ರತಿದಿವಸವೂ ವಾನಪ್ರಸ್ಥರಾದ ಋಷಿಗಳು ನಡೆಸುವಂತೆ, ತನ್ನ ಕೈಯಿಂದಲೇ ಹೂಗ ಳನ್ನು ಕುಯ್ದು ತಂದು, ಅಗ್ನಿ ವೇದಿಕೆಯನ್ನು ಪೂಜಿಸಬೇಕು. ಇದೆಲ್ಲವನ್ನೂ ನಡೆಸುವುದು ಬಾಲೆಯಾದ ನಿನಗೆ ಸಾಧ್ಯವೆ? ಇದರಿಂದಲೇ ವನವಾಸವು ಬಹ ಆ ಕಷ್ಟವು. ಅಲ್ಲಲ್ಲಿ ಸಿಕ್ಕಿದ ಹಣ್ಣು ಮೊದಲಾದುವುಗಳಿಂದಲೇ ತೃಪ್ತಿ ಹೊಂ ದಬೇಕು, ಸಿಕ್ಕಿದುದರಲ್ಲಿ ಸಂತೋಷಪಡಬೇಕು.ಕಾಡಿನಲ್ಲಿರುವವರೆಗೂ ನಿಯ ತವಾದ ಆಹಾರದಿಂದಲೇ ಪ್ರಾಣಧಾರಣೆಯನ್ನು ಮಾಡಿಕೊಂಡಿರಬೇಕು.ಇ ದರಿಂದಲೇ ವನವಾಸವೆಂಬುದು ಬಹಳಕವು. ಕಾಡಿನಲ್ಲಿ ಯಾವಾಗಲೂ ಬಿರುಗಾಳಿಯು ಬೀಸುತ್ತಿರುವುದು! ರಾತ್ರಿಯಲ್ಲಿ ಗಾಢಾಂಧಕಾರವು ಕವಿದಿ ರುವುದು!ಯಾವಾಗಲೂ ಹಸಿವಿನಿಂದ ಬಳಲಬೇಕಾಗುವುದು. ಆಗಾಗ ಮಹ - ತಾದ ಭಯವು ಸಂಭವಿಸುವುದು. ಆದುದರಿಂದ ವನವಾಸವೆಂಬುದು ಬಹು ಕಷ್ಟವು. ಅಲ್ಲಲ್ಲಿ ಮಹಾಭಯಂಕರವಾದ ದೊಡ್ಡ ದೇಹವುಳ್ಳ ಬೆಟ್ಟದಹಾವು ಗಳು ಬುಸುಗುಟ್ಟುತ್ತ ನೆಲದಮೇಲೆ ಸಂಚರಿಸುತ್ತಿರುವುವು. ಆದುದರಿಂದ ಲೇ ಕಾಡಿನಲ್ಲಿರುವುದು ಬಹಳ ಅಪಾಯಕರವು, ನದಿಗಳಂತೆ ವಕ್ರಗತಿಗೆ ಳುಳ್ಳ ಮಹಾಸರಗಳು ಅಲ್ಲಲ್ಲಿ ದಾರಿಗಡಲಾಗಿ ಮಲಗಿರುವುವು. ಇದರಿಂದ ಲೇ ವನವಾಸವೆಂಬುದು ಬಹಳ ಕಷ್ಟವು. ಅಲ್ಲಲ್ಲಿ ಮಿಡಿತೆಗಳೂ, ಚೇಳುಗಳೂ ಕೀಟಗಳೂ, ಕಾಡುನೊಣಗಳೂ, ಯಾವಾಗಲೂ ಬಾಧಿಸುತ್ತಿರುವುವು. ಇದ ರಿಂದಲೇ ಕಾಡಿನಲ್ಲಿರುವುದು ಬಹುಕಷ್ಟವು. ಅಲ್ಲಲ್ಲಿ ಮುಳ್ಳುಮರಗಳೂ, ದರ್ಭೆಗಳೂ, ವಿಶೇಷವಾಗಿ ಬೆಳೆದು ಹರಡಿಕೊಂಡಿರುವವು. ಆದುದರಿಂದ ಕಾಡಿನಲ್ಲಿ ಸಂಚರಿಸುವುದು ಬಹಳಕಷ್ಟವು. ಕಾಡಿನಲ್ಲಿ ಅನುಭವಿಸಬೇ ನಾದ ಹೇಹಶ್ರಮಕ್ಕೆ ಪಾರವೇ ಇಲ್ಲ! ಅಲ್ಲಿ ಸಂಭವಿಸತಕ್ಕ ಭಯಕಾರಣ ಗಳು ಇನ್ನೂ ಅನೇಕ ವಿಧವಾಗಿರುವುವು. ಆದುದರಿಂದ ವನವಾಸವೆಂಬುದನ್ನು