ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೬೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೨. ಅಯೋಧ್ಯಾಕಾಂಡವು. ಆತನಿಗೂ ನೀನು ಅಮೂಲ್ಯಗಳಾದ ನಮ್ಮ ವಸ್ತ್ರಾಭರಣಗಳನ್ನೂ, ನಮ್ಮ ಇರುವ ಧನರಾತಿಯನ್ನೂ, ನಮ್ಮಲ್ಲಿರುವ ಸಾವಿರಾರು ಗೋವುಗಳನ್ನೂ, ಇನ್ನೂ ಸಣ್ಣ ಆಕಳುಗಳನ್ನೂ ಕೊಟ್ಟು, ಸಂತೋಷಪಡಿಸಬೇಕು. ಮತ್ತುಕ ಠ, ಕಾಲಾಪ ಮೊದಲಾದ ವೇದಶಾಖೆಗಳನ್ನು ಅಧ್ಯಯನಮಾಡಿದ ಬ್ರಾಹ್ಮ ಹೊತ್ತಮರೂ ಇಲ್ಲಿ ಅನೇಕರಿರುವರು. ಪಲಾಶದಂಡಗಳನ್ನು ಧರಿಸಿದ ಬ್ರಹ್ಮ ಚಾರಿಗಳೂ ಇಲ್ಲಿ ಬೇಕಾದಷ್ಟು ಮಂದಿಯಿರುವರು. ಇವರೆಲ್ಲರೂ ಯಾವಾಗ ಲೂ ವೇದಾಧ್ಯಯನವನ್ನು ಮಾಡುತ್ತ ಕಾಲವನ್ನು ಕಳೆಯುವರೇಹೊರತು, ಬೇರೆ ಯಾವ ಕಾರಗಳನ್ನೂ ಮಾಡುವುದಕ್ಕೆ ಶಕ್ತರಲ್ಲ. ಬಹಳ ಆಲಸಸ್ವಭಾವ ವುಳ್ಳವರು. ಅವರಿಗೆ ಮಧುರವಾದ ಆಹಾರದಲ್ಲಿಯೇ ಬಹಳ ಆಸೆಯುಂಟು. ಮಹಾತ್ಮರಾದವರು ಕೂಡ ಅವರನ್ನು ಸನ್ಮಾನಿಸುವರು. ಅವರ ಸಂಖ್ಯೆಯ ಎಂಬತ್ತರವರೆಗೆ ಇರುವುದರಿಂದ, ಒಬ್ಬೊಬ್ಬರಿಗೊಂದೊಂದರಂತೆ,ರತ್ನ ಪೂರ ವಾದ ಎಂಬತ್ತು ವಾಹನಗಳನ್ನು ಕೊಟ್ಟು ಬಿಡು ಮತ್ತು ಬತ್ತಗಳನ್ನು ಹೇರಿ ದ ಇನ್ನೂರು ಎತ್ತುಗಳನ್ನೂ ಅವರಿಗೆ ಕೊಡು. ಅವರು ಮಧುರವಾದಪದಾ ರಗಳನ್ನೇ ವಿಶೇಷವಾಗಿ ಬಯಸುವರಾದುದರಿಂದ, ಅವರಿಗೆ ಹಾಲು, ಮೊಸರು ತುಪ್ಪಗಳನ್ನು ಬೇಕಾದಷ್ಟು ಒದಗಿಸಿಕೊಡುವಂತೆ ಸಾವಿರಾರು ಗೋವು ಗಳನ್ನೂ ಕೊಡು.ಇನ್ನೂ ಅನೇಕ ಬ್ರಹ್ಮಚಾರಿಗಳು ಕೌಸಲೈಯನ್ನಾಶ್ರಯಿ ಸಿಕೊಂಡಿರುವರು. ಅವರಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಸಾವಿರಗೋವು ಗಳನ್ನು ಕೊಡು ! ವತ್ಸ ಲಕ್ಷಣಾ ! ಮುಖ್ಯವಾಗಿ ನಮ್ಮ ತಾಯಿಯಾದ ಕೌಸಲ್ಯಗೆ ಮನಸ್ಯಪ್ತಿಯಾಗುವಂತೆ ಆ ಬ್ರಾಹ್ಮಣರಿಗೆ ದಕ್ಷಿಣಾದಿಗಳನ್ನು ಕೊಟ್ಟು ಪೂಜಿಸು” ಎಂದನು. ಹಾಗೆಯೇ ಲಕ್ಷಣನು ರಾಮನ ಮಾತಿನಂ ತೆ ಧನರಾತಿಯನ್ನು ತಂದು, ಕುಬೇರನಂತೆ ಬ್ರಾಹ್ಮಣರೆಲ್ಲರಿಗೂ ಹಂಚಿ ಕೊಟ್ಟನು. ಆಗ ರಾಮನು ತನ್ನ ಮುಂದೆ ವ್ಯಸನದಿಂದ ಕಣ್ಣೀರನ್ನು ಸುರಿ ಸುತ್ತಾ ನಿಂತಿರುವ ತನ್ನ ಅನುಜೀವಿಗಳನ್ನು ನೋಡಿ, ಅವರ ಜೀವನಾರ್ಥವಾಗಿ ಒಬ್ಬೊಬ್ಬರಿಗೂ ಬೇಕಾದಷ್ಟು ಧನಗಳನ್ನು ಕೊಟ್ಟು, ಅವರನ್ನು ಕುರಿತು ನೀ ವೆಲ್ಲರೂ ನಾವು ಹಿಂತಿರುಗಿ ಬರುವವರೆಗೂ ನನ್ನ ಮನೆಯನ್ನೂ , ಲಕ್ಷ್ಮಣನ ಮನೆಯನ್ನೂ ಶೂನ್ಯವಾಗಿಟ್ಟಿರದಂತೆ ಯಾವಾಗಲೂ ಕಾವಲಿದ್ದು ರಕ್ಷಿಸುತ್ತಿ