ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭೨ ಶ್ರೀಮದ್ರಾಮಾಯಣವು [ಸರ್ಗ, ೪೪. ಫಲವುಂಟು, ಇದರಿಂದ ಲಕ್ಷಣನಿಗಾಗಿಯೂ ನಾವು ದುಃಖಿಸಬಾರದು. ಸೀತೆಯು ಯಾವಾಗಲೂ ಸುಖವನ್ನೇ ಅನುಭವಿಸುವುದಕ್ಕೆ ಅರ್ಹಳೆಂಬುದ ರಲ್ಲಿ ಸಂದೇಹವಿಲ್ಲ. ವನವಾಸದಲ್ಲಿ ಅನೇಕ ಕಷ್ಟಗಳುಂಟೆಂಬುದನ್ನೂ ಆಕೆ ಯು ಚೆನ್ನಾಗಿ ಬಲ್ಲಳು.ಹೀಗಿದ್ದರೂ ಅವಳು ಪಾತಿವ್ರತ್ಯಪರಾಯಣೆಯಾಗಿ, ಪತಿಯೇ ತನಗೆ ಪರದೈವವೆಂದು ತಿಳಿದು, ಕಾಡಿನಲ್ಲಿಯೂ ಪತಿಯ ಪಾದ ಶುಶೂಷೆಯನ್ನು ಮಾಡುತ್ತಿರುವುದಕ್ಕಾಗಿ ಧನ್ಯಾತ್ಮದಾದ ನಿನ್ನ ಮಗ ನನ್ನೇ ಹಿಂಬಾಲಿಸಿ ಹೋಗಿರುವಳು. ಅವಳಿಗೂ ಇದು ಸ್ವರೂಪಾನು ವಾದ ಧರವಾದುದರಿಂದ ಆ ಸೀತೆಗಾಗಿಯೂ ನಾವು ದುಃಖಿಸಬಾರದು. ಈ ಪ್ರಪಂಚದಲ್ಲಿ ತನ್ನ ಕಿರಿಯೆಂಬ ಪತಾಕೆಯನ್ನೆತ್ತಿ ಕಟ್ಟುತ್ತಿರುವ ಪ್ರ ಭುವಾದ ರಾಮನಿಗೆ, ಇದರಿಂದ ಯಾವ ಶ್ರೇಯಸ್ಸು ತಾನೇ ಉಂಟಾಗಲಾ ರದು?ಆತನು ಮಹರ್ಷಿಗಳಂತೆ ಜಿತೇಂದ್ರಿಯನೆನಿಸಿಕೊಂಡಿರುವನು. ಧರವೆಂ ಬುದೇ ಆತನ ಧನವು. ಸತ್ಯವೆಂಬುದೇ ಆತನ ವ್ರತವು. ಆತನ ಮಹಿಮೆಯನ್ನು ಈಲೋಕದಲ್ಲಿ ಕಂಡರಿಯದವರೇ ಇಲ್ಲ. ಆತನ ಶುಚಿತ್ವವನ್ನೂ ,ಎಣೆಯಿಲ್ಲದ ಮಹಿಮೆಯನ್ನೂ ಚೆನ್ನಾಗಿ ತಿಳಿದಿರುವುದರಿಂದಲೇ, *ಸೂರನೂಕೂಡ ತನ್ನ ಕಿರಣಗಳಿಂದ ಆತನ ದೇಹವನ್ನು ಸಂತಾಪಪಡಿಸಲಾರನೆಂದು ತಿಳಿ!+ವಾಯು

  • ಈ ಮುಂದಿನ ವಾಕ್ಯಗಳೊಳಗೆಲ್ಲಾ ವೇದಾಂತಪ್ರತಿಪಾದ್ಯಗಳಾದ ಪರಮಪುರು ಷನ ಲಕ್ಷಣಗಳು ತಿಳಿಸಲ್ಪಡುವುವೆಂದು ಗ್ರಹಿಸಬೇಕು. ಹೇಗೆಂದರೆ:-

ಇಲ್ಲಿ “ತಸ್ಯನಾಮ ಮಹದ್ಯಶ?' ಎಂಬ ಪ್ರತ್ಯಕ್ಷವು ಪ್ರತಿಪಾದಿಸಲ್ಪಟ್ಟಿದೆ. * ಇದುಮೊದಲು ದೇವತೆಗಳೆಲ್ಲರೂ ಆತನ ಅಜ್ಞಾಧಾರಕರಾಗಿರುವುದರಿಂದ, ಆತ ನಿಗೆ ಅವರೆಲ್ಲರೂ ಅನುಕೂಲರಾಗಿಯೇ ಪ್ರವರ್ತಿಸುತ್ತಿರುವರೆಂಬುದನ್ನು ಸೂಚಿಸುವರು ಇಲ್ಲಿ ಭೀಷ್ಮದೇತಿ ಸೂರ:” ಎಂಬ ಶ್ರುತರವು ಪ್ರತಿಪಾದಿತವಾಗಿದೆ.

  • ಇಲ್ಲಿ 'ಭಿಷಾಸ್ಕಾ ದ್ಯಾತ: ಪವತೇ” ಎಂಬ ಶ್ರುತರವನ್ನು ಅನುಸಂಧಿಸಿ ಕೊಳ್ಳಬೇಕು. ಮತ್ತು ಇಲ್ಲಿ 'ಶಿವಪ್ಪಶ್ವೇಷು ಕಾಲೇಷು ಕಾನನೇಭೋವಿನಿತ:?? ಎಂದು ಮೂಲವು. (ಶಿವ:) ಎಂಬುದರಿಂದ ಅಲ್ಲಿನ ಗಾಳಿಯಲ್ಲಿ ಬಿರುಸಿಲ್ಲದೆ ದೇಹಕ್ಕೆ ಹಿತಕರವಾದ ಮಾಂದ್ಯಗುಣವೂ, (ಕಾನನೇಭ್ಯ:)'ಎಂಬುದರಿಂದ ಸೌರಭ್ಯಗುಣವೂ, (ವಿನಿಸ್ಸತ:) ಎಂಬುದರಿಂದ ಶೈತ್ಯಗುಣವೂ ಹೇಳಲ್ಪಟ್ಟಿರುವುವು.