ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯೧ ಸರ್ಗ, ೪೮.] ಅಯೋಧ್ಯಾಕಾಂಡವು. ಟು ಸೀತೆಯನ್ನು ಪಚರಿಸುತ್ತಿರುವೆವು, ನೀವು ರಾಮನನ್ನು ಪಚರಿಸಿರಿ? ಎಂದು ಹೇಳಿ ಆ ಪುರಸ್ತಿಯರೆಲ್ಲರೂ ದುಃಖದಿಂದ ತಮ್ಮ ಗಂಡಂದಿರನ್ನು ನಿರ್ಬಂ ಥಿಸುತ್ತಾ,ಪುನಃಪುನಃ ಅವರನ್ನು ಕುರಿತು, (ಕಾಡಿನಲ್ಲಿ ರಾಮನು ನಿಮ್ಮ ಯೋಗ ಕ್ಷೇಮಲಾಭವನ್ನು ತಾನೇ ವಹಿಸುವನು. ನಮ್ಮೆಲ್ಲರ ಯೋಗಕ್ಷೇಮವನ್ನೂ ಸೀತೆಯು ವಿಚಾರಿಸುವಳು. ರಾಮನಿಲ್ಲದಮೇಲೆ ಈ ಅಯೋಧ್ಯೆಯಲ್ಲಿ ಸಜ್ಜ ನರಾದವರು ವಾಸಮಾಡುವುದಕ್ಕೆ ಯೋಗ್ಯವಲ್ಲ. ಇಲ್ಲಿರತಕ್ಕ ಯಾವ ನೊಬ್ಬನ ಮುಖದಲ್ಲಿಯೂ ಸ್ವಲ್ಪವಾದರೂ ಹರ್ಷವಿಲ್ಲದೆ ಒಬ್ಬೊಬ್ಬರೂ ವ್ಯಸನಪೀಡಿತರಾಗಿರುವುದರಿಂದ, ಈ ಪಟ್ಟಣದಲ್ಲಿ ಕಳೆಯೇ ಇರುವುದಿಲ್ಲ. ಆ ನು ಮೇಲೆ ಇದರಲ್ಲಿ ವಾಸಮಾಡುವುದಕ್ಕೆ ಯಾರಿಗೆತಾನೇ ಮನಸ್ಸು ಹು ಟ್ಟುವುದು? ಈ ರಾಜ್ಯವು ಧರಾತಿಕ್ರಮದಿಂದ ಆ ಕೈಕೇಯಿಯ ಕೈಗೆ ಸಿಕ್ಕಿ, ಅನಾಯಕವಾದ ರಾಜ್ಯದಂತೆ ದುರ್ದಶೆಯನ್ನು ಹೊಂದುವಪಕ್ಷದಲ್ಲಿ, ನಾವು ಇನ್ನು ಬದುಕಿರುವುದೇ ನ್ಯಾಯವಲ್ಲ. ಇನ್ನು ನಮಗೆ ಮಕ್ಕಳಿಂದೇನು? ಅಥ ವಾ ಹಣದಿಂದೇನು?ತಾನೇ ಸಕಲೈಶ್ವರವನ್ನೂ ಪಡೆಯಬೇಕೆಂಬ ದುರಾಶೆ ಯಿಂದ,ಕೈಹಿಡಿದ ಗಂಡನನ್ನೂ ,ಮಗನನ್ನೂ ಕೆಡಿಸಿ,ಕುಲಗೇಡಿಯೆನಿಸಿಕೊಂಡ ಆ ಕೈಕೇಯಿಯೂ,ಮುಂದೆ ಇನ್ನು ಯಾರನ್ನು ತಾನೇ ಕೆಡಿಸದಿರುವಳು?ಯಾ ರನ್ನು ತಾನೇ ಕ್ಷೇಮದಿಂದ ಕಾಪಾಡುವಳು? ನಾವು ಇನ್ನು ಮೇಲೆ ಆ ಕೈ ಕೇಯಿಯ ರಾಜ್ಯದಲ್ಲಿ ಎಂದಿಗೂ ಕೆಲಸಮಾಡಿಕೊಂಡಿರಲಾರೆವು. ಆವ ಳು ಬದುಕಿರುವವರೆಗೂ ನಮ್ಮ ಜೀವಾವಧಿಯಾಗಿ ನಾವು ಈ ರಾಜ್ಯದಲ್ಲಿ ರತಕ್ಕವರಲ್ಲ. ನಮ್ಮ ಮಕ್ಕಳಾಣೆಗೂ ಇದು ಸತ್ಯವು, ಮನಸ್ಸಿನಲ್ಲಿ ಸ್ವಲ್ಪವಾ ದರೂ ಮರುಕವಿಲ್ಲದೆ, ರಾಜಕುಮಾರನನ್ನೇ ಯಾವಳು ದೇಶದಿಂದ ಹೊರಡಿ ಸಿಬಿಟ್ಟಳೋ, ಅಂತವಳನ್ನು ನಂಬಿ ಯಾರುತಾನೇ ಸುಖದಿಂದ ಜೀವಿಸಬಹು ದು? ಹೀಗೆ ದುಷ್ಟಸ್ವಭಾವವುಳ್ಳವಳಾಗಿಯೂ, ಅಧರಪ್ರವರ್ತಕಳಾಗಿ ಯ ಇರುವ ಆಕೆಯಿಂದ ಪ್ರಜೆಗಳಿಗೆ ಸುಖವೆಂಬುದಲಿಯದು ? ಮುಖ, ವಾಗಿ ಈ ರಾಜ್ಯವು ಅನಾಯಕವಾಯಿತು. ಇದಕ್ಕಿದ್ದ ಆಶ್ರಯವೂ ತಪ್ಪಿ ಹೋಯಿತು.ಈ ರಾಜ್ಯಕ್ಕೆ ಕೊನೆಯಿಲ್ಲದ ಕಷ್ಯವು ಬಂದೊದಗಿತು, ಆಕೈಕೇ ಯಿಯೊಬ್ಬಳಿಗಾಗಿ ಈ ರಾಜ್ಯವೇ ಹಾಳಾಗುವ ಕಾಲವು ಬಂದೊದಗಿತು. ರಾ