ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಸರ್ಗ, ] ಅಯೋಧ್ಯಾಕಾಂಡವು. ನಿಮಗೆ ದುಃಖವು ಹೆಚ್ಚುತ್ತಿರುವುದು. ಇದನ್ನು ಇನ್ನೂ ಮೇಲೆಮೇಲೆ ಹೆಚ್ಚಿ ಸಿಕೊಳ್ಳುವುದು ಉಚಿತವಲ್ಲ. ಆದುದರಿಂದ ನಿಮ್ಮ ನಿಮ್ಮ ಕೆಲಸಗಳನ್ನು ನೋಡಿಕೊಂಡು ನೀವು ಹೊರಟುಹೋಗಬೇಕೆಂದು ಪ್ರಾರ್ಥಿಸುವೆನು.” ಎಂದನು. ಆಗ ಅವರೆಲ್ಲರೂ ರಾಮನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ವ್ಯಸನವನ್ನು ತಡೆಯಲಾರದೆ, ಭಯಂಕರವಾದ ಧ್ವನಿಯಿಂದ ಗೋ ಆಡುತ್ತಾ, ಆತನನ್ನು ಬಿಟ್ಟು ಹೋಗಲಾರದೆ, ಅಲ್ಲಲ್ಲಿಯೇ ಸ್ವಲ್ಪ ದೂರವಾ ಗಿ ನಿಂತಿದ್ದರು. ಹಾಗೆಯೇ ಆ ಜನರೆಲ್ಲರೂ ಆತೃಪ್ತರಾಗಿ ಗೋಳಿಡುತ್ತಿರುವ ರಲ್ಲಿ, ರಾಮನು ಸಾಯಂಕಾಲದ ಸೂರನಂತೆ ಅವರಿಗೆ ಕಣ್ಮರೆಯಾಗಿ ಹೊರಟುಹೋದನು. ಆಗ ರಾಮನು ಧನಧಾನ್ಯಗಳಿಂದ ತುಂಬಿ, ದಾನಶೀಲ ರಾದ ಅನೇಕಜನರಿಂದ ನಿಬಿಡವಾಗಿ,ಭಯರಹಿತವಾಗಿ, ಅತಿಮನೋಹರವಾ ಗಿರುವ ಆ ಕೋಸಲದೇಶದ ಪ್ರಾಂತ್ಯಗಳ ಮಾರವಾಗಿಯೇ ಹೋಗುತಿದ್ದ ನು, ಆ ಪ್ರದೇಶಗಳೆಲ್ಲವೂ ಅಂದವಾದ ಉದ್ಯಾನಗಳಿಂದಲೂ, ಹೂವಿನ ತೋ ಟಗಳಿಂದಲೂ, ನಿರಲವಾದ ಸರೋವರಗಳಿಂದಲೂ, ಮನಸ್ಸನ್ನು ಅಕ ರ್ಷಿಸುತ್ತಿದ್ದುವು. ನಿತ್ಯಸಂತುಷ್ಟರಾಗಿಯೂ, ಧನಿಕರಾಗಿಯೂ ಇರುವ ಆ ನೇಕಜನರಿಂದ ನಿಬಿಡವಾಗಿದ್ದುವು. ಎಲ್ಲಿ ನೋಡಿದರೂ ದೇವಾಲಯಗಳೂ, ಯೂಪಸ್ತಂಭಗಳೂ ಕಾಣುತಿದ್ದುವು. ಅಲ್ಲಲ್ಲಿ ಗೋಕುಲಗಳು ದಟ್ಟವಾಗಿ ತುಂಬಿದು ವು. ಆ ಪ್ರದೇಶಗಳು ರಾಜಾಧಿರಾಜರ ಮನಸನೂ ತಮ್ಮ ಕಡೆ ಗೆ ಎಳೆಯುವಂತಿದ್ದುವು. ಗ್ರಾಮಗ್ರಾಮಗಳಲ್ಲಿಯೂ ಬ್ರಾಹ್ಮಣರ ವೇದ ಮಂತ್ರಘೋಷಗಳು ಹೊರಡುತ್ತಿದ್ದುವು. ಹೀಗೆ ಲೋಕಾತಿಶಯವೆನಿಸಿ ಕೊಂಡ ಕೋಸಲದೇಶದ ಪ್ರಾಂತ್ಯಗಳೆಲ್ಲವನ್ನೂ ಪುರುಷಶ್ರೇಷ್ಠನಾದ ರಾ ಮನು ರಥದಿಂದಲೇ ದಾಟಿ ಹೋದನು. ನಿತ್ಯಸಂತೋಷವುಳ್ಳುದಾಗಿ, ಧನ ಧಾನ್ಯ ಸಮೃದ್ಧವಾಗಿ, ಅಂದವಾದ ಉದ್ಯಾನಗಳಿಂದ ಕೂಡಿದುದಾಗಿರುವ ರಾಜಭೋಗ್ಯವಾದ ಆ ಕೋಸಲರಾಜ್ಯದ ನಡುವೆ ಪ್ರಯಾಣಮಾಡುತಿ (ರೂ, ಅದರಲ್ಲಿ ಆಸೆಯನ್ನು ತೊರೆದು, ಥೈಲ್ಯವನ್ನು ಬಿಡದೆ ಹೋಗು ತಿದ್ದನೆಂದರೆ, ಆ ರಾಮನ ಮನಸ್ಸೆಲ್ಯವನ್ನು ಹೇಳತಕ್ಕದೇನು ? ಹೀಗೆಯೇ ಮುಂದೆಮುಂದೆ ಹೋಗುತ್ತಾ, ಅಲ್ಲಿ ಪ್ರವಹಿಸುತ್ತಿದ್ದ ಗಂಗಾನದಿಯನ್ನು ಕಂಡನು. ಸ್ವಲ್ಪವಾದರೂ ಪಾಚಿಯಿಲ್ಲದೆ ನಿಮ್ಮಲವಾದ ಜಲವುಳ್ಳುದಾಗಿ,