ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೬೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಸರ್ಗ. ೫.) ಅಯೋಧ್ಯಾಕಾಂಡವು. ರಾಜಮಾರ್ಗಗಳೆಲ್ಲವೂ ನಿಬಿಡವಾಗಿ ತುಂಬಿದ್ದುವು. ಅಲೆಗಳ ಪರಂಪರೆಯಂ ತೆ ಜನಗಳು ಮೇಲೆಮೇಲೆ ಬಂದು ಸೇರಿ, ಸಂತೋಷಸಲ್ಲಾಪಗಳನ್ನು ಮಾ ಡುತಿದ್ದಾಗ, ಆ ರಾಜಮಾರ್ಗದಲ್ಲಿ ಹುಟ್ಟಿದ ಮಹಾಧ್ವನಿಯು ಉಲ್ಲೋ ಲಕಲ್ಲೋಲವಾದ ಸಮುದ್ರದ ಘೋಷದಂತೆ ತೋರುತಿತ್ತು.ಆ ರಾಜಮಾ ರ್ಗಗಳೆಲ್ಲವೂ ಜಲಸೇಚನಾದಿಗಳಿಂದ ಚೆನ್ನಾಗಿ ಅಲಂಕರಿಸಲ್ಪಟ್ಟಿದ್ದುವು. ಅಲ್ಲಲ್ಲಿ ಪುಷೋಪಹಾರಗಳು ಚೆಲ್ಲಲ್ಪಟ್ಟಿದ್ದುವು. ಮನೆಮನೆಗೂ ಧ್ವಜ ಗಳನ್ನು ಎತ್ತಿ ಕಟ್ಟಿದ್ದರು. ಅಯೋಧ್ಯೆಯಲ್ಲಿ ವಾಸಮಾಡುತ್ತಿದ್ದ ಬಾಲ ವೃದ್ದರೂ ಮಾರನೆಯದಿವಸದಲ್ಲಿ ನಡೆಯಬೇಕಾದ ರಾಮಾಭಿಷೇಕವನ್ನೇ ನಿರೀಕ್ಷಿಸುತ್ತ,ಸೂರೋದಯವಾಗುವುದನ್ನು ಅತ್ಯಾತುರದಿಂದ ಇದಿರುನೋ ಡುತಿದ್ದರು . ರಾಮಾಭಿಷೇಕಕ್ಕಾಗಿ ಅಲ್ಲಿನ ಪ್ರಜೆಗಳೆಲ್ಲರೂ ಅಲಂಕರಿಸಿ ಕೊಂಡಿದ್ದರು. ಹೀಗೆ ವಸಿಷ್ಠನು ಜನಭರಿತವಾಗಿರುವ ರಾಜಮಾರ್ಗದಲ್ಲಿ ಆ ಉತ್ಸವದ ಕೊಂಡಾಟಗಳನ್ನು ನೋಡುತ್ತಾ,ಹಬಂಧವನ್ನು ಮಾಡುವಂ ತೆ, ಆ ಜನರನ್ನು ಅಲ್ಲಲ್ಲಿ ಒತ್ತರಿಸಿಕೊಂಡು, ಬಹುಪ್ರಯತ್ನದಿಂದ ಅರಮನೆಗೆ ಬಂದು ಸೇರಿದನು. ಬಿಳೀಮೇವುಗಳಿಂದ ಕೂಡಿದ ಪರತಶಿಖರದಂದೆ ಶುಭ ವರ್ಣವಾಗಿ ಕಾಣುವ ಉಪ್ಪರಿಗೆಯನ್ನೇರಿ, ಬೃಹಸ್ಪತಿಯು ಇಂದ್ರನ ಬಳಿಗೆ ಬರುವಂತೆ ದಶರಧನಬಳಿಗೆ ಬಂದನು. ಹೀಗೆ ಬಂದ ವಸಿಷ್ಠನ ನ್ನು ನೋಡಿ ದಶರಧನು, ಥಟ್ಟನೆ ಇದಿರೆದ್ದು, ಆ ಮಹರ್ಷಿಯನ್ನು ಕುರಿತು ರಾಮನಿಗೆ ಉಪವಾಸವು ನಿಯಮಿಸಲ್ಪಟ್ಟಿತೆ?” ಎಂದು ಪ್ರಶ್ನೆ ಮಾಡಲು, ವಸಿಷನು ಆಯಿತೆಂದು"ಪ್ರತ್ಯುತ್ತರಕೊಟ್ಟನು. ಆಗ ಆ ರಾಜಾಸ್ಥಾನದಲ್ಲಿ ಈ ಸಭಿಕರೆಲ್ಲರೂ ಪ್ರತ್ಯುತ್ಯಾನಗಳಿಂದ ವಸಿಷ್ಠನನ್ನು ಗೌರವಿಸಿದರು. ಆಮೇಲೆ ದಶರಥನು ಆ ಸಭಿಕರೆಲ್ಲರನ್ನೂ ಕಳುಹಿಸಿ, ವಸಿಷ್ಠನ ಅನುಮತಿ ಯನ್ನು ಪಡೆದು, ಸಿಕ್ಕವು ಪಕ್ವತಗುಹೆಯನ್ನು ಪ್ರವೇಶಿಸುವಂತೆ ತನ್ನ ಅಂ ತಃಪುರಕ್ಕೆ ಪ್ರವೇಶಿಸಿದನು. ಅಲ್ಲಿನ ಸ್ತ್ರೀಯರೆಲ್ಲರೂ ರಾಮೋತ್ಸವಕ್ಕಾಗಿ ವಿಶೇ ಷವಾಗಿ ಅಲಂಕರಿಸಿಕೊಂಡು, ಆ ಅಂತಃಪುರಪ್ರದೇಶವನ್ನೆಲ್ಲಾ ತಮ್ಮ ಕಾಂತಿ ಯಿಂದ ಬೆಳಗುತ್ತಿರಲು, ಅದು ಇಂದ್ರಭವನವಂತೆ ಕಾಣಿಸಿತು. ನಕ್ಷತ್ರಸ ಮೂಹಗಳಿಂದ ಕೂಡಿದ ಆಕಾಶವನ್ನು ಚಂದ್ರನು ಹೇಗೋ ಹಾಗೆ, ದಶರಥ