ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ಜಾ ಸ ನೆ. ಇದುವರೆಗೆ ನಾವು ರಾಮಾಯಣಕಥೆಯೆಂಬ ಮಹಾಸಾಗರದಲ್ಲಿ ಬಹಳ ಪ್ರಬಲವಾದ ಎರಡನೆಯ ಅಲೆಯನ್ನೂ ಅರ್ಥದಮಟ್ಟಿಗೆ ದಾಟಿ ಬಿಟ್ಟೆವು. ಇತರಸಾಗರಗಳಂತೆಯೇ ಈ ಮಹಾಸಮುದ್ರವೂ ಮುಂದೆ ಮುಂದೆ ಹೋದಷ್ಟೂ ಬಹಳ ಗಂಭೀರವಾಗಿಯೂ, ವಿಶೇಷರಸಸಮೃದ್ಧಿ ಯುಳ್ಳುದಾಗಿಯೂ, ದುರವಗಾಹವಾಗಿಯೂ ಇದ್ದರೂ, ಮೊದಲಿನ ಒಂ ದೆರಡಲೆಗಳನ್ನು ದಾಟಿಬಿಟ್ಟಮೇಲೆ, ಸರಿಯಾದ ಸತ್ಪಾತ್ರಗಳ ಅವಲಂಬನ ವಿದ್ದರೆ, ನಿರಾಯಾಸವಾಗಿಯೇ ಕೊನೆಮುಟ್ಟಬಹುದೆಂಬುದರಲ್ಲಿ ಸಂದೇಹ ವಿಲ್ಲ. ಕೂಡಿದಮಟ್ಟಿಗೆ ಭಾಷಾಭಿಮಾನಿಗಳ ಬಲವಾದ ಅವಲಂಬನವು ನವು ಗೆ ಸಿಕ್ಕಬಹುದೆಂದು ತೋರಿರುವುದರಿಂದ, ನಾವು ನಿರ್ಭಯರಾಗಿ ಮುಂದು ವರಿಯುತ್ತಿರುವೆವು. ಆದುದರಿಂದ ನಡುದಾರಿಯಲ್ಲಿ ಕೈಬಿಟ್ಟುಹೋಗದೆ ಕೊನೆಮುಟ್ಟುವವರೆಗೂ ನಮ್ಮನ್ನು ಹಿಂಬಾಲಿಸಿ ಬಂದು, ನಮಗೆ ದೃಢವಾ ದ ಅವಲಂಬನವನ್ನು ಕೊಡುತ್ತಿರುವುದು, ಭಾಷಾಭಿಮಾನಿಗಳಾದ ಚಂದಾ ದಾರರ ಕರ್ತವ್ಯವೆಂಬುದನ್ನು ನಾವು ಹೇಳಬೇಕಾದುದೇ ಇಲ್ಲವು.

  1. ಈ ಆಯೋಧ್ಯಾಕಾಂಡವನ್ನು ಪೂರ್ತಿಯಾಗಿ ಒಂದೇ ಸಂಚಿಕೆಯಾಗಿ ಮಾಡಿಟ್ಟರೆ, ಚಂದಾದಾರರಿಗೆ ಹೆಚ್ಚು ಭಾರವನ್ನು ಹೊರಿಸಿದಂತಾಗುವು ದೆಂದು ಯೋಚಿಸಿ, ಅರ್ಧಭಾಗವನ್ನು ಮಾತ್ರ ಪ್ರತ್ಯೇಕಸಂಕಿಕೆಯಾಗಿ ಮಾಡಿ, ನನ್ನ ಮೊದಲಿನ ನಿಯಮಗಳ ಮೇರೆಗೆ, '೪೦೦ ಪುಟಗಳುಳ್ಳ ಈ ಸಂಚಿಕೆಗೆ ಒಂದೇ ರೂಪಾಯಿಯ ಬೆಲೆಯನ್ನು ನಿರ್ಣಯಿಸಿರುವೆವು.

ಆರ್. ವಿ.