ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೪ ಶ್ರೀಮದ್ರಾಮಾಯಣವು [ಸರ್ಗ ೨೧, ರು, ಕಟಕಕೇಯೂರಾದಿಮುಕ್ಕಾಭರಣಗಳಿಂದಲಂಕೃತಗಳಾದ ತಮ್ಮ ನಿಗೆ ಸೀತೆಯೊಬ್ಬಳೇ ಅಲ್ಲದೆ ಇನ್ನೂ ಅನೇಕಪತ್ನಿಯರುಂಟೆಂದು ಕೆಲವರು ಹೇಳುವರು. ಇದು ಸರಿಯಲ್ಲ ಇಲ್ಲಿ ಪರಮನಾರಿಯರೆಂದರೆ ಅಂತಃವುರದಲ್ಲಿ ಅಲಂಕಾರಕಾರಕ್ಕೆ ನಿಯೋಗಿಸಲ್ಪಡತಕ್ಕ ಉತ್ತಮನೈರಂಧಿಯರೆಂದರು ಹಾಗೆಯೇ ಅಭಿಕ್ಕ ಷ್ಟಮ್” ಎಂಬುದಕ್ಕೂ ಸ್ಪರ್ಶಯೋಗ್ಯವೆಂದೇ ಅರವು, ಅಥವಾ ಪರಮನಾರಿಯರೆಂದರೆ ಭೂನೀ ಳಾದಿ ದಿವ್ಯಮಹಿಮೆಯರೆಂದೂ ಅರಮಾಡಬಹುದು 'ಮನುಷ್ಯರಸದಿಂದಿರುವ ರಾಮ ನಿಗೆ ಭೂನೀಳಾದಿದಿವ್ಯಮಹಿಷಿಯರೊಡನೆ ಸಂಬಂಧವು ಹೇಗೆ? ಎಂದು ಶಂಕಿಸಬಹು ದು, ರಾಮನು 'ಆತ್ಮಾನಂ ಮಾನುಷಂ ಮನ್ಯ' ಎಂದು ತನಗೆ ತಾನು ಮನುಷ್ಯ ನೆಂಬ ಭಾವನೆಯಿಂದಿದ್ದರೂ, ಮೊದಲು ಬಾಲಕಾಂಡದಲ್ಲಿ 'ಜಜ್ಞೆ ವಿಷ್ಣು ನಾತನ.* ಎಂದು ನಿಜಸ್ಥಿತಿಯನ್ನರಿತು ಹೇಳಿದ ವಾಲ್ಮೀಕಿಮ ಹಾಮುನಿಗೆ, ಅವನಲ್ಲಿ ಪರತ್ಯಜ್ಞಾ ನವೇ ಸ್ಥಿರವಾಗಿ ನೆಲೆಗೊಂಡಿರುವುದರಿಂದ, ಆ ಭಾವನೆಯಿಂದಲೇ ಈ ವಾಕ್ಯವನ್ನು ಹೇ ಳಿರಬಹುದು. ಆದುದರಿಂದ ವರಮನಾರಿಯರೆಂಬುದಕ್ಕೆ ಇತರಪತ್ನಿಯರೆಂದರವ ಇವು ರಾಮನಿಗೆ ಬೇರೆ ಪತ್ನಿಯರಿಲ್ಲದುದಕ್ಕಾಗಿಯೇ ಉತ್ತರಕಾಂಡದಲ್ಲಿ ಇವನು ಯ ಜ್ಯಕಾರಕ್ಕಾಗಿ ಸುವರ್ಣದಿಂದ ಸೀತಾಪ್ರತಿಮೆಯನ್ನು ಮಾಡಿಟ್ಟುಕೊಂಡುದಾಗಿ ಕಾಣಿ ಸಿದ ಆದರೆ ಭಟ್ಟಾಚಾರರು, ಪತ್ನಿಯರಿಗೆ ಪ್ರತಿನಿಧಿ ಭಾವವನ್ನು ವಿಧಿಸಲಿಲ್ಲವಲ್ಲಾ? ಎಂದು ಆಕ್ಷೇಪಿಸಬಹುದು ಈ ವಿಷಯದಲ್ಲಿ ಧರ ಸಂಸ್ಥಾಪನಾರವಾಗಿ ಅವತರಿಸಿ ರುವ ಆ ರಾಮನ ಆಚಾರವೇ ಮೇಲಾದ ಪ್ರಮಾಣವಾಗಿರುವಾಗ, ಇದಕ್ಕೆ ಬೇರೆ ಪ್ರಮಾ ಶವೇಕೆ? ವಾಸ್ತವಕ್ಕೆ ಆಚಾರವೇ ಪ್ರಥಮಪ್ರಮಾಣವು ಶ್ರುತಿಯ ವೂಲ್ಯಾಚಾರ ವನ್ನು ಪ್ರದರ್ಶಿಸಿಯೇ ಕರವನ್ನು ವಿಧಿಸುವುದು ಆಪಸ್ತಂಬರಕೂಡ ಧಮ್ಮಜ್ಞಸಮ ಯಸಿ ಪ್ರಯಾಣಂ ವೇದಾಶ್ಚ” ಎಂದು ಧರಜ್ಞಸಮಯರೂಪವಾದ ಆಚಾರವನ್ನೇ ಪ್ರಥಮ ಪ್ರಮಾಣವನ್ನಾಗಿ ಹೇಳಿರುವರು ಹಾಗೆಯೇ ಸ್ಮೃತಿಕಾರರ, 'ಶ್ರುತಿರ್ವಿ ಭಿನ್ಮಾ ತಯೋಪಿ ಭಿನ್ನಾ ನಚಾವೃಷೇರ್ದಶ್ರನಮಸ್ತಿ ಕಿಂಚಿತ್ | ಧರ ಸ ತತ್ರಂ ನಿಹಿತಂ ಗುಹಾಯಾಂ ಮ ಶಾ ಜನೋಯೇನಗತಸ್ಸಪಂಧಾ:” ಎಂದು ಶಿಷ್ಟಾಚಾರವೇ ಪ್ರಮಾಣವೆಂದು ನಿರ್ಣಯಿಸಿರುವರು ಆದುದರಿಂದ ರಾಮನ ಆಚಾರವೇ ಉತ್ತಮ ವಾದ ಪ್ರಮಾಣವೇಹೊರತು, ಅದರ ಮುಂದೆ ವಿರುದ್ಧ ನ್ಯಾಯಗಳಾವುವೂ ನಿಲ್ಲವು ರಾಜಸೂಯಾಶ್ವಮೇಧಾದಿಗಳಲ್ಲಿ ಪಟ್ಟಮಹಿಷಿಯಂತೆ ವಾಮಾತೆ, ಪರಿವೃತಿಯೆಂಬವ ರಿಬ್ಬರೂ ಇರಬೇಕಾದುದು ವಿಧಿಯು ಹೀಗಿದ್ದರೂ ಅವರಿಲ್ಲದ ಸಂದರ್ಭಗಳಲ್ಲಿ ಅವ ರಿಂದ ನಡೆಯಬೇಕಾದ ಕಾರವುಮಾತ್ರ ನಡೆಸಲ್ಪಡುವುದಿಲ್ಲವಷ್ಟೇಹೊರತು, ಅದರಿಂದ ಕರಕ್ಕೇನೂ ವೈಕಲ್ಯವು ಬಾರದು ಕುಂಟರು, ಕುರುಡರು ಮೊದಲಾದ ಅಂಗಹೀನರಿಗೆ