ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೧ ಸರ್ಗ, ೨೨] ಯುದ್ಧಕಂಡವು. ಯನಾಗಿರುವೆ ಅವರ ಸಹವಾಸ ದೋಷದಿಂದಲೇ ನಿನಗೆ ಇಷ್ಟಾದರೂ ನನ್ನ ವೀ ವಾಗಲಿ, ನನ್ನ ಬಲವಾಗಲಿ, ತಿಳಯಲಿಲ್ಲವೆಂದು ತೋರುತ್ತಿ ದೆ, ಮುಂದೆ ನನ್ನಿಂದ ನಿನಗೆ ಸಂಭವಿಸಬಹುದಾದ ಕಷ್ಟವನ್ನಾ ದರೂ ನೀ ನು ಆಲೋಚಿಸಿ ತಿಳಿಯದಿರುವೆ ? ಆದರೇನು ? ಇರಲಿ ! ಇನ್ನು ನನ್ನ ಶಕ್ತಿ ಯನ್ನು ನಿನಗೆ ತೋರಿಸುವೆನು ನೋಡು!” ಎಂದನು ಹೀಗೆಂದು ಹೇಳಿದೆ ಡನೆ ಮಹಾಬಲಾಢನಾದ ರಾಮನು “ಬ್ರಹ್ಮದಂಡಕ್ಕೆ ಸಮಾನವಾದ ಒಂ ದು ಕೂರಬಾಣವನ್ನು ತೆಗೆದು, ಅದನ್ನು ಬ್ರಹ್ಮಾಸ್ತಮಂತ್ರದಿಂದ ಅಭಿ ಮಂತ್ರಿಸಿ, ಧನುಸ್ಸಿನಲ್ಲಿ ಸಂಧಾನಮಾಡಿ, ಆದರ ನಾಣನ್ನೆಳೆದನು. ರಾ ಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ನಾಣನ್ನೆಳೆದೊಡನೆ, ಬ್ರಹ್ಮಾಂಡ ಕಟಾಹವೇ ಬೇಧಿಸಿದಂತಾಯಿತು. ಭೂಮ್ಯಾಕಾಶಗ ರಡೂ ಎರಡು ಹೋ ಳಾಗುವಂತೆ ತೋರಿತು. ಪಕ್ವತಗಳೆಲ್ಲವೂ ನಡುಗಿಹೋದುವು. ಸಮಸ್ಯ ಲೋಕಕ್ಕೂ ಗಾಢಾಂಧಕಾರವು ಮುಚ್ಚಿದಂತಾಯಿತು. ಸಮಸ್ಯ ದಿಕ್ಕುಗಳೂ ಮಲಿನವಾದುವು' ನದಿಗಳೂ, ಸರೋವರಗಳೂ ಕಲಗಿಹೋದು ವು ಸೂ‌ಚಂದ್ರರಿಬ್ಬರೂ ನಕ್ಷತ್ರಗಳೊಡನೆ ವಕ್ರಗತಿಯಿಂದ ನಡೆಯ ಲಾರಂಭಿಸಿದರು ಸೂರಕಿರಣಗಳ ಪ್ರಕಾಶವೂತಗ್ಗಿ ತು. + ಉಲ್ಕೆಗಳಂ ತೆ ನಕ್ಷತ್ರಗಳು ಉದಿರುತಿದ್ದವು ಅಂತರಿಕ್ಷದಲ್ಲಿ ಮಹಾಧ್ವನಿಗಳೊಡನೆ £ ನಿ

  • ಇಲ್ಲಿ ಬ್ರಹ್ಮದಂಡವೆಂದರೆ ಬ್ರಹ್ಮಶಾಪವು, ಬ್ರಹ್ಮಶಾಪದಂತೆ ಆಮೋಘವಾದು ದೆಂದು ಭಾವವು, ಅಥವಾ ಬ್ರಹ್ಮದಂಡವೆಂದರೆ ಭಯಂಕರವಾದ ಒಂದು ಉತ್ಪಾತಕೇ ತುವಿಶೇಷವ, ನಾರಧಸಂಹಿತೆಯಲ್ಲಿ 'ಪಿತಾಮಹಾತ್ಮ ಜ: ಕೂರಸಿವರ್ಣ ಶಿಖರಾ ದ್ವಿತಃ | ಬ್ರಹ್ಮದಂಡಾಹ್ನಯಃ ಕೇತುಸ್ಸಭೂತವಿನಾಶನ ” ಬ್ರಹ್ಮ ನಿಂದ ಹುಟ್ಟಿ, ಕೂರವಾಗಿ, ಮೂರುವರ್ಷವುಳುವಾಗಿ, ಶಿಖರದಿಂದ ಕೂಡಿದುದು ಬ್ರಹ್ಮದಂಡನಾ

ಮಕವಾದ ಕೇತು ವೆಂದೂ, ಇದು ಸರಭೂತವಿನಾಶಕವೆಂದೂ ಹೇಳಲ್ಪಟ್ಟಿದೆ. t ಉಲ್ಕೆಯೆಂದರೆಉಲ್ಕಾ ಶಿರಸಿ ವಿಶಾಲಾ ನಿಪತಂಶೀ ವರ್ಧತೇಜ ತನುಶಜ್ಞಾ" ಅಗಲವಾದ ತಲೆಯಿಂದಲೂ, ಸಣ್ಣಬಾಲದಿಂದಲೂ ಕೂಡಿ ಕೆಳಗೆ ಬಿಳುತ್ತಬಿಳುತ್ತ ಹೆಚ್ಚಿ ಬರುವುದು ಉಲ್ಕೆ (ಅಥವಾ ಆರಾಶದಕೊಳ್ಳಿ) ಯೆಂದು ವರಾಹಮಿಹಿರವಚನವು.

  1. ನಿರ್ಘಾತವೆಂದರೆ, “ಪವನಃ ಪವನಾಭಿಹತೋ ಗಗನಾದವನೌ ಯದಾ ಸಮ ಪತತಿ ! ಭವತಿ ತದಾ ನಿಘಇFತಸ್ಸಚ ಪಾಪೋ ದೀರ್ಘಖಗವಿರುತ” ಬಿರುಗಾಳಿ