ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೪, } ಯುದ್ದ ಕಾಂಡವು. ೨೨೪೭ ದ ಆ ಲಂಕಾನಗರಿಯು,ಬಿಳೀಮೇಫುಗಳಿಂದ ಮುಚ್ಚಿದ ಆಕಾಶದಂತೆಯೇ ಕಾಣುವುದು ನೋಡು' ಅಲ್ಲಿನ ಪಷಿತಗಳಾದ ತೋಟಗಳು, ಬಗೆಬಗೆಯ ವನಪಕ್ಷಿಗಳ ಕಲಕಲಧ್ವನಿಯಿಂದಲೂ, ಮಲ್ಲಿಗೆ ಮೊದಲಾದ ಹೂಗಿಡಗ ಳಿಂದಲೂ ಹೇಗೆ ಶೋಭಿಸುತ್ತಿರುವುವು ನೋಡಿದೆಯಾ ? ಅಲ್ಲಲ್ಲಿ ಫಲರಸವ ನ್ನು ಕುಡಿದು ಕೊಬ್ಬಿದ ವನಪಕ್ಷಿಗಳಿಂದಲೂ, ಮಕರಂದಪಾನದಿಂದ ಕೊಬ್ಬಿ ಕೂಗಿಡುವ ದುಂಬಿಗಳಿಂದಲೂ, ಚಿಗುರುಗಳ ಗೊಂಚಲಲ್ಲಿ ಸೇರಿ ನ ಲಿಯುವ ಕೋಗಿಲೆಗಳಿಂದಲೂ ಮನೋಹರಗಳಾದ ಅಲ್ಲಿನ ತೋಟಗಳನ್ನು ಸುಖಸ್ಪರ್ಶವಾದ ಮಂದಮಾರುತುವು ಆಗಾಗ ಆಲುಗಿಸುತ್ತಿರುವ ಸೋಗ ಸನ್ನು ನೋಡು ” ಎಂದು ತೋರಿಸುತಿದ್ದನು. ಹೀಗೆ ರಾಮನು ಲಕ್ಷಣ ನಿಗೆ ಲಂಕೆಯ ಸೊಗಸನ್ನು ತೋರಿಸುತಿದ್ದು, ಕೊನೆಗೆ ಶಾಸ_ರೀತಿಯಿಂದ ತನ್ನ ಕಡೆಯ ಸೈನ್ಯವನ್ನು ವ್ಯೂಹರೂಪವಾಗಿ ವಿಭಾಗಿಸಬೇಕೆಂದೆಣಿಸಿ, ಆ ಕ್ಲಿದ್ದ ವಾನರಸೇನಾಪತಿಗಳನ್ನು ಕುರಿತು ಎಲೈ ವಾನರರೆ ! ಈಗಲೇ ನಾ ವು ಇಲ್ಲಿ ವ್ಯೂಹವನ್ನು ನಿರ್ಮಿಸಬೇಕು ಆದುದರಿಂದ ನಿಮ್ಮಲ್ಲಿ, ವಿಠ್ಯವಂ ತನಾದ ಅಂಗದನು ನೀಲನೊಡನೆ ಸೇರಿ ತನ್ನ ಸೇನೆಯೊಡಗೂಡಿ ವ್ಯೂಹಕ್ಕೆ ವಕ್ಷಸ್ಥಲದಲ್ಲಿರಲಿ' ವಾನರಶ್ರೇಷ್ಠ ನಾದ ಋಷಭನು ತನ್ನ ಕಡೆಯ ವಾನ ರರೊಡನೆ ಆ ವ್ಯೂಹಕ್ಕೆ ಬಲಭಾಗದಲ್ಲಿರಲಿ' ಮದದಾನೆಯಂತೆ ದುರ್ಜಯ ನಾಗಿಯೂ, ವೇಗಶಾಲಿಯಾಗಿಯೂ ಇರುವ ಗಂಧಮಾದನನು ತನ್ನ ಸೈ ನ್ಯದೊಡನೆ ಆ ವ್ಯೂಹದ ಎಡಭಾಗವನ್ನು ರಕ್ಷಿಸುತ್ತಿರಲಿ ' ನಾನು ಲಕ್ಷಣ ನೊಡನೆ ಸೇರಿ, ಅದರತಲೆಯ ಕಡೆಯಲ್ಲಿ ಎಚ್ಚರಿಕೆಯಿಂದ ಕಾವಲಿರುವೆನು. ಜಾಂಬವಂತನೂ ಸುಷೇಷನನೂ, ವೇಗದರ್ಶಿಯೂ, ಈ ಮೂವರೂ ಬುದ್ದಿವಂತರಾಗಿಯೂ ವಾನರಭಕ್ಕೂಕಸಮೂಹಗಳಿಗೆ ಪ್ರಮುಖರಾ ಗಿಯೂ ಇರುವುದರಿಂದ, ಅವರು ಅದರ ಉದರಸ್ಥಾನವನ್ನು ರಕ್ಷಿಸುತ್ತಿರಲಿ! ಕಪಿರಾಜನಾದ ಸುಗ್ರೀವನು ತನ್ನ ಸೇನೆಯೊಡನೆ ಜಘುನಸ್ಥಾನದಲ್ಲಿದ್ದು ಕೊಂಡು, ತೇಜಸ್ವಿಯಾದ ವರುಣನು ಭೂಮಿಯ ಪಶ್ಚಿಮಭಾಗವನ್ನು ರಕ್ಷಿ ಸುವಂತೆ ಅದರ ಪುಚ್ಛಿಭಾಗವನ್ನು ರಕ್ಷಿಸುತ್ತಿರಲಿ! " ಎಂದನು. ಹೀಗೆ ರಾ ಮಾಚ್ಛೆಯಿಂದ ಆ ವಾನರಸೇನೆಯೆಲ್ಲವೂ ಗರುಡವ್ಯೂಹವಾಗಿ ನಿಲ್ಲಿಸಲ್ಪ