ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧.] ಯುದ್ಧಕಾಂಡವು. ೨೦೭೩ ಸುವನು ಯಾವನು ಕಾರಸಮರನಾಗಿದ್ದರೂ ರಾಜಾಜ್ಞೆಯಂತೆ ತಾನು ನಡೆಸಬೇಕಾದ ಕಾವ್ಯವನ್ನು ಮಾತ್ರವೇ ನಡೆಸಿ, ಆತನಿಗೆ ಪ್ರಿಯವಾದ ಬೇರೆ ಯಾವಕಾರವನ್ನೂ ಗಮನಿಸದೆ, ಅಷ್ಟರಲ್ಲಿಯೇ ತೃಪ್ತನಾಗಿ ಬರುವ ನೋ, ಅಂತವನು ಮಧ್ಯಮಶೃತ್ಯನೆನಿಸುವನು. ಯಾವನು ರಾಜಾಜ್ಞೆಯ ನ್ನನುಸರಿಸಿ ತಾನು ನಡೆಸಬೇಕಾದ ಕಾಠ್ಯವನ್ನೂ ಎಚ್ಚರಿಕೆಯಿಂದ ನಡೆಸದಿ ರುವನೋ ಅವನು ಅಧಮಶೃತ್ಯವೆನಿಸುವನು. ಈ ಹನುಮಂತನಲ್ಲಿ ಉತ್ತಮಭ್ಯತ್ಯಲಕ್ಷಣವಿರುವುದರಿಂದಲೇ ಇವನು ರಾಜಾಜ್ಞೆಯಂತೆ ನಡೆಸ ಬೇಕಾದ ಸೀತಾನ್ವೇಷಣವೆಂಬ ಮುಖ್ಯ ಕಾರವನ್ನೂ ನಡೆಸಿ, ತಾನೂ ಅವಮಾನಪಡದೆ, ಲಂಕಾದಹನವೇ ಮೊದಲಾದ ಅಥಿಕಕಾರಗಳಿಂದ ತನ್ನ ಪ್ರಭುವಾದ ಸುಗ್ರೀವನಿಗೆ ಹೆಚ್ಚು ಸಂತೋಷವನ್ನೂ ಉಂಟುಮಾಡಿರುವ ನು ಈಗ ಈ ಹನುಮಂತನು ಸೀತೆಯನ್ನು ನೋಡಿ ಬಂದುದರಿಂದ, ನಾ ನೂ, ಮಹಾಬಲಾಢನಾದ ಈ ಲಕ್ಷಣನೂ, ಇನ್ನೂ ರಘುವಂಶದಲ್ಲಿ ಹುಟ್ಟಿದವರೆಲ್ಲರೂ ಬದುಕುವಂತಾಯಿತು ! ಈತನೇ ನಮ್ಮೆಲ್ಲರಿಗೂ ಆತ್ಮಹ ತ್ಯಾರೂಪವಾದ ಅಧರವನ್ನು ತಪ್ಪಿಸಿ ನಮ್ಮನ್ನು ಥರ ಮಾರ್ಗದಲ್ಲಿ ನಿಲ್ಲಿಸಿ ದಂತಾಯಿತು ! ಹೀಗೆ ನಮಗೆ ಪ್ರಿಯವಾರ್ತೆಯನ್ನು ಹೇಳಿ, ನಮ್ಮೆಲ್ಲರನ್ನೂ ಬದುಕಿಸಿದ ಈ ಹನುಮಂತನ ವಿಷಯದಲ್ಲಿ ಅದಕ್ಕೆ ತಕ್ಕಂತೆ ಪ್ರಿಯವನ್ನು ಮಾಡಬೇಕಾದ ಭಾರವು ನನ್ನ ಮೇಲೆ ಬಿದ್ದಿತಲ್ಲವೆ? ಇದನ್ನು ಹೇಗೆ ತೀರಿಸಲಿ! ಈ ವಿಚಾರವು ನನ್ನ ಮನಸ್ಸನ್ನು ಬಹಳವಾಗಿ ಕೊರಗಿಸುತ್ತಿರುವುದು ! ಇ ದುವರೆಗೂ ನಾನು ಈತನಿಗೆ ತಕ್ಕ ಪ್ರತ್ಯುಪಕಾರವನ್ನು ಮಾಡದಿರುವುದೇ ನನ್ನ ಮನಸ್ಸನ್ನು ಬಹಳವಾಗಿ ಬಾಧಿಸುತ್ತಿರುವುದು, ಪ್ರಾಣದಾನಮಾ ಡಿದ ಈ ಮಹಾತ್ಮನಿಗೆ ಈಗ ನಾನು ಯಾವವಿಧದಲ್ಲಿ ಪ್ರತ್ಯುಪಕಾರಮಾ ಡಲಿ ! ಇದಕ್ಕಾಗಿ ನನ್ನ ಸರಸ್ವವನ್ನೂ ಕೊಟ್ಟಹೊರತು ನನ್ನ ಸಾಲವು ತೀರದು ! ಇವನಿಗೆ ಪ್ರತ್ಯುಪಕಾರ ಮಾಡಬೇಕಾದ ಕಾಲವೂ ಬಂದೊದ ಗಿರುವುದು! ಇದಕ್ಕಾಗಿ ಈಗ ನಾನು ಯಾವುದನ್ನು ಕೊಡಬಲ್ಲೆನು! ಇದೋ * ಈಗ ನಾನು ಕೊಡುವ ಈ ಆಲಿಂಗನವೇ ಸರಸ್ವದಾನರೂಪವಾಗಿರಲಿ | ೫ ಇಲ್ಲಿ 'ಏಷ ಸರಸ್ವಭೂತಸ್ತು ಪರಿಷ್ಕಂಗೆ ಹನೂಮತಃ ಮಯಾ ಕಾಲ ಮಿಮಂ ಪ್ರಾಪ್ಯ ದತ್ತಸಸ್ಯ ಮಹಾತ್ಮನಃ” ಎಂದು ಮೂಲವು, ವಿಶೇಷಾದ್ಧವು (ಏಷ:) 131