ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೩ ಶ್ರೀಮದ್ರಾಮಾಯಣವು (ಸರ್ಗ ೨. ಘ್ನು ನು ಸ್ನೇಹವನ್ನು ಮರೆತುಬಿಡುವಂತೆ ಮನಸ್ಸಿನಲ್ಲಿರುವ ಖೇದವನ್ನು ನಿಶ್ಚಿ ಷವಾಗಿ ಬಿಟ್ಟುಬಿಡು' ನೀನು ಹೀಗೆ ದುಃಖಿಸುವುದಕ್ಕೆ ಕಾರಣವೇನೋ ನನಗೆ ತಿಳಿಯಲಿಲ್ಲ! ನಮಗೆ ಅವಶ್ಯವಾಗಿ ಬೇಕಾದ ಸೀತಾವೃತ್ತಾಂತವು ತಿಳಿದ ಮೇಲೆ ಚಿಂತೆಗೆ ಕಾರಣವೇನು ? ಇದರಮೇಲೆ ನೀನು ಎಣೆಯಿಲ್ಲದ ಸೂಕ್ಷ ಬುದ್ಧಿಯುಳ್ಳವನು ನೀತಿಶಾಸ್ತ್ರಗಳನ್ನು ಬಲ್ಲವನು ಊಹಾಪೋಹಜ್ಞಾನ ವುಳ್ಳವನು. ಮುಂದೆ ಇದು ಹೀಗೆಯೇ ಆಗುವುದೆಂದು ನಿರ್ಣಯಿಸುವ ಅಸಾ ಧಾರಣಜ್ಞಾನವುಳ್ಳವನು. ಹೀಗಿರುವಾಗ ನಿನಗೆ ಬೇರೊಬ್ಬರು ಹೇಳಿ ತಿಳಿಸ ಬೇಕಾದುದೇನು? ಯೋಗಿಯಾದವನು ಮೋಕ್ಷವಿರುದ್ಧವಾದ ಬುದ್ಧಿಯನ್ನು ಪರಿತ್ಯಜಿಸುವಂತೆ, ನೀನು ನಿನ್ನ ಮಹೋತ್ಸಾಹಕ್ಕೆ ಕುಂದಕವಾದ ಈ ವ್ಯ ಸನವನ್ನು ಬಿಟ್ಟುಬಿಡಬೇಕು, ಸಮದ್ರವು ಎಷ್ಟೇ ಮಹಾನಕ್ರಗಳಿಂದ ತುಂಬಿ ಭಯಂಕರವಾಗಿದ್ದರೂ ಇರಲಿ' ನಾವು ಅದನ್ನು ದಾಟುವೆವು. ಲಂಕೆ ಯಪ್ರಾಕಾರವನ್ನೂ ಏರುವೆವು, ನಿನ್ನ ಶತ್ರುವನ್ನೂ ನಾವೇ ಕೊಲ್ಲುವೆವು. ಈವಿಷಯಕ್ಕಾಗಿ ನೀನು ಸ್ವಲ್ಪವೂ ಚಿಂತಿಸಬೇಕಾದುದಿಲ್ಲ ' ನೀನುಮಾತ್ರ ಥೈಲ್ಯವನ್ನು ಬಿಡದೆ ಉತ್ಸಾಹದಿಂದಿರು' ಮನಸ್ಸಿನಲ್ಲಿ ಉತ್ಸಾಹವನ್ನು ಬಿಟ್ಟು ಹೀನನಾಗಿ ವ್ಯಸನದಿಂದ ಕೊರಗುವವನಿಗೆ, ಹಿಡಿದ ಕಾರಗಳೆಲ್ಲವೂ ಕೆಡುವು ವು, ಮೇಲೆಮೇಲೆ ವ್ಯಸನವೂ ಹೆಚ್ಚುವುದು ರಾಮಾ' ನಮ್ಮ ಕಡೆಯ ಈ ವಾ ನರರನ್ನು ಸಾಮಾನ್ಯರೆಂದು ತಿಳಿಯಬೇಡ ಇವರೆಲ್ಲರೂ ಮಹಾಶೂರರು' ಬ ಹಳಸಮಸ್ಥರು ' ನಿನ್ನ ಪ್ರಿಯಕ್ಕಾಗಿ ಬೆಂಕಿಯಲ್ಲಿ ಪ್ರವೇಶಿಸುವುದಕ್ಕಾದರೂ ಇವರು ಹಿಂಜರಿಯುವವರೆಲ್ಲ ' ಇವರ ಸಂತೋಷವೇ ಇವರಿಗಿರುವ ಮಹೋ ತಾಹವನ್ನು ಸೂಚಿಸುತ್ತಿರುವುದು ನೋಡು ' ಇವರ ವಿಷಯದಲ್ಲಿ ಮೊದ ಲೇ ನನ್ನ ಮನಸ್ಸಿಗೆ ಸಂಪೂರ್ಣವಾದ ನಂಬಿಕೆಯುಂಟು' ಮುಂದಿನ ಕಾಠ್ಯ ಕಾಗಿ ನೀವು ಸ್ವಲ್ಪವೂ ಶ್ರಮವನ್ನು ವಹಿಸಬೇಕಾದುದಿಲ್ಲ ' ನೀನುಮಾತ್ರ ಧೈಯ್ಯಗುಂದದೆ ನಮಗೆ ಆಗಾಗ ಉತ್ಸಾಹವನ್ನು ಹುಟ್ಟಿಸುತಿದ್ದರೆ ಸಾಕು ! ನಾವೇ ನನ್ನ ಪರಾಕ್ರಮದಿಂದ ಪಾಪಕರಿಯಾದ ಆ ರಾವಣನನ್ನು ಕೊಂ ದು, ಸೀತೆಯನ್ನೂ ತಂದು ಬಿಡುವೆವು, ಮುಂದೆ ಸಮುದ್ರದಲ್ಲಿ ಸೇ ತುವನ್ನು ಕಟ್ಟುವುದಾಗಲಿ, ಆ ರಾಕ್ಷಸನಗರಿಯನ್ನು ಪ್ರವೇಶಿಸುವುದಕ್ಕಾ