ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೭ ಸರ್ಗ, ೩೧ ) ಯುದ್ಧಕಾಂಡವು. ಶಿರಸ್ಸನ್ನು ಕೂಡ ನಮ್ಮ ರಾಕ್ಷಸರು ಇಲ್ಲಿಗೆ ತಂದಿರುವರು” ಎಂದನು ದು ರಾತ್ಮನಾದ ರಾವಣನು ಸೀತೆಯನ್ನು ಕುರಿತು ಹಿಗೆಂದು ಹೇಳಿ, ಆಮೇಲೆ ಸಮೀಪದಲ್ಲಿದ್ದ ರಾಕ್ಷಸಿಯೊಬ್ಬಳನ್ನು ಕರೆದು, ಸೀತೆಯ ಕಿವಿಗೆ ಬೀಳುವಂ ತೆ ಅವಳನ್ನು ಕುರಿತು, (ಎಲೆ ರಾಕ್ಷಸಿ ! ಈಗಿನ ಯುದ್ಧದಲ್ಲಿ ಬಹಳ ಭಯಂ ಕರಕಾರವನ್ನು ನಡೆಸಿ ಯುದ್ಧರಂಗದಿಂದ ರಾಮನ ತಲೆಯನ್ನು ತಾನಾಗಿ ಆ ಸೆಯಿಂದ ತಂದಿಟ್ಟಿರುವ ಆ ಏದುಜ್ಞೆ ಹೃನನ್ನು ಕರೆದು ಕೊಂಡುಬಾ?” ಎಂ ದನು. ಅದರಂತೆಯೇ ರಾಕ್ಷಸಿಯು ಹೋಗಿ ಈ ರಾಜಾಜ್ಞೆಯನ್ನು ತಿಳಿಸಿದ ಮೇಲೆ, ವಿದ್ಯುಜ್ಜಿಹೂನು ತಾನು ಮಾಯೆಯಿಂದ ನಿರ್ಮಿಸಿದ ರಾಮನ ತಲೆ ಯನ್ನೂ, ಧನುಸ್ಸನ್ನೂ ಕೈಗೆತ್ತಿಕೊಂಡು ಬಂದು, ರಾವಣನಮುಂದೆ ನಿಂ ತು, ಅವನಿಗೆ ತಲೆಬಗ್ಗಿ ನಮಸ್ಕರಿಸಿದನು ಆಗ ರಾವಣನು, ಮುಂದೆ ನಿಂತಿದ್ದ ವಿದ್ಯುಜ್ಜಿಹೂನು ನೋಡಿ, ವಿದ್ಯುಜ್ಜಿಹ್ವಾ " ನೀನು ಯುದ್ಧರಂಗದಿಂದ ತಂದ ರಾಮನ ತಲೆಯನ್ನು ಈ ಸೀತೆಯಮುಂದೆ ತಂದಿಡು? ಈ ಬಡಹೆಂಗ ಸು ತನ್ನ ಪತಿಗುಂಟಾದ ಈ ಚರಮಾವಸ್ಯೆಯನ್ನಾ ದರೂ ಚೆನ್ನಾಗಿನೋ ಡಲಿ” ಎಂದನು ರಾವಣನು ಈ ಮಾತನ್ನು ಹೇಳಿದೊಡನೆ, ವಿದ್ಯುಜಿಹ್ನ ನು ನೋಡುವುದಕ್ಕೆ ಅತಿಸುಂದರವಾದ ಆ ರಾಮನ ಮಾಯಾಶಿರಸ್ಸನ್ನು ತಂದು ಸೀತೆಯಮುಂದೆ ಇರಿಸಿ, ಅಲ್ಲಿ ನಿಮಿಷಮಾತ್ರವೂ ನಿಲ್ಲದೆ ಕಣ್ಮರೆ ಯಾದನು ಆಮೇಲೆ ರಾವಣನು ವಿದ್ಯುಜ್ಜಿಹೂನು ತಂದಿದ್ದ ಲೋಕಪ್ರಸಿ ದೃವಾದ ಮಾಯಾಧನುಸ್ಸನ್ನು ತಾನೇ ತನ್ನ ಕೈಯಿಂದ ತೆಗೆದುಕೊಂಡು ಹೋಗಿ ಸೀತೆಯಮುಂದಿಟ್ಟು ಸೀತೇ ಇದೋ ನೋಡು' ದೃಢವಾದ ಹೆದೆ ಯಿಂದ ಕೂಡಿದ ಈ ಧನುಸೂ ಕೂಡ ನಿನ್ನ ರಾಮನದು' ಕೇವಲಮನುಷ್ಯ ಮಾತ್ರನಾದ ಆ ರಾಮನನ್ನು ನಮ್ಮ ಪ್ರಹಸನು ನಿನ್ನಿನರಾತ್ರಿಯಲ್ಲಿ ಕೊಂದು, ಇದನ್ನು ಇಲ್ಲಿಗೆ ತಂದುಕೊಟ್ಟನು.”ಎಂದನು ಹೀಗೆ ವಿದ್ಯುಜ್ಜಿ ಹೃನೂ, ರಾವಣನೂ ಕ್ರಮವಾಗಿ ಮಾಯಾರಾಮತಿರಸ್ಸನ್ನೂ, ಮಾಯಾ ಧನುಸ್ಸನ್ನೂ ಸೀತೆಯಮುಂದೆ ತಂದಿಟ್ಟ ಮೇಲೆ, ತಿರುಗಿ ರಾವಣನು ಮಹಾ ಪತಿವ್ರತೆಯೆಂದು ಹೆಸರುಗೊಂಡ ಆಸೀತೆಯನ್ನು (ಎಲೆಭದ್ರೆ!ಇನ್ನಾದರೂ ನನಗೆ ಪ್ರಸನ್ನಳಾಗು” ಎಂದನು ಇಲ್ಲಿಗೆ ಮೂವತ್ತೊಂದನೆಯ ಸರ್ಗವು.