ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೩.] ಯುದ್ಧಕಾಂಡವು ೨೨೯೫ ಮವುಳ್ಳವಳಾಗಿಯೂ, ಪ್ರಿಯಸಖಿಯಾಗಿಯೂ, ಇದ್ದ ವಿಭೀಷಣಭಾಗ್ಯ ಯಾದ ಸರಮೆಯೆಂಬ ರಾಕ್ಷಸಿಯು, ಆ ಸೀತೆಯ ಸಮೀಪಕ್ಕೆ ಬಂದಳು. ಸೀತೆಯು ರಾಕ್ಷಸೇಶ್ವರನಾದ ರಾವಣನಮೋಸಕ್ಕೆ ಸಿಕ್ಕಿ, ತನ್ನ ಪತಿಯಾದ ರಾ ಮನು ಮೃತನಾದನೆಂದು ದುಃಖಿಸುತ್ತಿರುವಾಗ, ಸರಮೆಯು ಎಷ್ಟೆಷ್ಟೋ ಮೃದುವಾಕ್ಯಗಳನ್ನು ಹೇಳಿ ಅವಳನ್ನು ನಾನಾವಿಧದಿಂದ ಸಮಾಧಾನಸ ಡಿಸಿದಳು * ಆ ಸರಮೆಯೆಂಬವಳು ರಾವಣಾಜ್ಞೆಯಿಂದಲೇ ಅಲ್ಲಿ ಸೀತೆಯ ಮೇಲೆ ಕಾವಲಾಗಿರುತಿದ್ದರೂ, ಆಕೆಯು ಬಹಳದಯಾಸ್ವಭಾವವುಳ್ಳವಳಾ ದುದರಿಂದ, ಅವಳಿಗೆ ಸೀತೆಯಲ್ಲಿ ಒಂದುವಿಧವಾದ ಸ್ನೇಹಭಾವವು ಹುಟ್ಟಿ, ಹೋಯಿತು, ಮತ್ತು ಆಕೆಯು ಬಹಳ ಸ್ಥಿರಬುದ್ಧಿಯುಳ್ಳವಳಾಗಿಯೂ ಇದ್ದುದರಿಂದ, ಆಕೆಗೆ ಸೀತೆಯಲ್ಲಿ ಮೊದಲುಹುಟ್ಟಿದ ಪ್ರೇಮವೇ ಸ್ಥಿರವಾಗಿ ಯೂ ನೆಲೆಗೊಂಡಿತು ಅಲ್ಲಿ ಸೀತೆಯು ರಾಮನವಿಷಯವಾಗಿ ಭ್ರಾಂತಿಪಟ್ಟು ದುಃಖದಿಂದ ಆಗಾಗ ನೆಲದಮೇಲೆ ಬಿದ್ದು ಹೊರಳುತ್ತ, ಬೂದಿಯಲ್ಲಿ ಬಿದ್ದು ಹೊರಳಿದ ಹೆಣ್ಣು ಕುದುರೆಯಂತೆ ಕೊಳೆಮುಚ್ಚಿದ ಮೈಯುಳ್ಳವಳಾಗಿ ಕುಳಿತು ಸಂಕಟಪಡುತ್ತಿರಲು, ಸರಮೆಯು ಸಮೀಪಕ್ಕೆ ಬಂದು ಅವಳನ್ನು ಕೈಯಿಂದ ಸವರಿ ಸಮಾಧಾನಪಡಿಸಿ, ಕೊನೆಗೆ ಅವಳಲ್ಲಿ ಎಣೆಯಿಲ್ಲದ

  • ಇಲ್ಲಿ ರಾವಣನೇ ಈ ಸರಮೆಯೆಂಬವಳನ್ನು ಸೀತೆಯಮೇಲ ಕಾವಲಿರಿಸಿದ್ದು ದಾಗಿ ಕಾಣಿಸಲ ಟಿ.ದೆ, ಮುಂದೆ ಈ ಸರಮೆಯು ಸೀತೆಯನು ಸಮಾಧಾನಪಡಿಸುವಾಗ “ಸಖೀಸ್ನೇಹೇನ ತದ್ಭಗು ಮಯಾ ಸರೈ ಪ್ರತಿಶ್ರುತಂ | ಲೀನಯಾ ಗಹನೇ ಶನೈ ಭಯಮುತ್ಯಜ್ಯ ರಾವಣಾತ” ಎಂಬುದಾಗಿ ರಾವತಭಯಕ್ಕಾಗಿ ಮರೆಯ ಲ್ಲಿದ್ದು ತಾನು ಅವನ ಮಾತುಗಳನ್ನೆಲ್ಲಾ ಕೇಳಿ ಬಂದುದಾಗಿ ಹೇಳುವಳು ರಾವ ಹನಿಯುಕ್ತಳಾಗಿದ್ದ ಈಕೆಗೆ ಭಯಕ್ಕೆ ಕಾರಣವೇನು ? ಎಂದರೆ, ರಾವಣವಿಭೀಷಣರಿಗೆ ಮನಸ್ತಾಪವು ಹುಟ್ಟುವವರೆಗೂ ಈಕೆಯು ಅಂತರಂಗಭೂತಳಂತೆ ನಟಿಸುತ್ತ ನಿರ್ಭ ಯಳಾಗಿದ್ದರೂ, ವಿಭೀಷಣನು ಹೊರಟುಹೋದಮೇಲೆ ರಾವಣನ ಅಂತರಂಗವಾರ್ತೆಗ ಳನ್ನು ಕೇಳುವುದಕ್ಕೆ ಭಯಪಟ್ಟು ಗೂಢವಾಗಿ ಕೇಳಿದಳೆಂದು ಗ್ರಹಿಸಬಹುದು ಅಥವಾ ರಾವಣನಿಗೆ ಸೊಸೆಯಂತಿರುವ ತಾನು, ಅವನಮುಂದೆ ನಿಲ್ಲುವುದಕ್ಕೆ ನಾಚಿಕೆ ಗೂಂಡು ಕಣ್ಮರೆಯಾಗಿ ನಿಂತುದಾಗಿಯೂ ಊಹಿಸಬಹುದು ಈ ಸರಮೆಯು ಬೇರೊಬ್ಬಳಾಗಿರಬಹುದೆಂದೂ ಕೆಲವರ ಅಭಿಪ್ರಾಯವು