ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೪ ಶ್ರೀಮದ್ರಾಮಾಯಣವು (ಸರ್ಗ, ೪೮. ತಹ ಮಹಾಬಲಪರಾಕ್ರಮಿಯಾದ ರಾಮನೂಕೂಡ, ತನ್ನ ತಮ್ಮನಾದ ಲಕ್ಷ್ಮಣನೊಡನೆ ಯುದ್ಧದಲ್ಲಿ ಹತನಾಗಿ ಬಿಳುವುದೆಂದರೇನು? ಲೋ ಕದಲ್ಲಿ ಕಾಲಕ್ಕಿಂತಲೂ ಪ್ರಬಲವಾದುದು ಯಾವುದೊಂದೂ ಇಲ್ಲವು. ದೈವವನ್ನು ಗೆಲ್ಲಬೇಕೆಂದರೆ ಯಾರಿಗೂ ಎಷ್ಟು ಮಾತ್ರವೂ ಸಾಧ್ಯವಲ್ಲ ಹಾ ಕಷ್ಟವೆ' ಶೋಚನೀಯಾವಸ್ಥೆಯನ್ನು ಹೊಂದಿದ ಆ ನನ್ನ ಅತ್ತೆಯನ್ನು ನೆನೆಸಿ ಕೊಂಡಾಗ ನನಗುಂಟಾಗುವ ದು:ಖವು, ರಾಮನನ್ನಾಗಲಿ, ಮಹಾಬಲಾ ಢನಾದ ಲಕ್ಷಣವನ್ನಾಗಲಿ,ನನ್ನ ಸ್ಥಿತಿಯನ್ನೇ ಆಗಲಿ ನನ್ನ ತಾಯಿಯನ್ನೇ ಆಗಲಿ ನೆನೆಸಿಕೊಂಡರೂ ಆಷ್ಟು ವ್ಯಥೆಯನ್ನುಂಟುಮಾಡದು. ಆ ನನ್ನ ಆತ್ಮ ಯಾದ ಕೌಸಲ್ಯಯು, ಈಗಲೂ ಅಹೋರಾತ್ರವೂ ಮನಸ್ಸಿಗೆ ನೆಮ್ಮದಿ ಯಿಲ್ಲದೆ, ಈ ಹದಿನಾಲ್ಕು ವರ್ಷಗಳ ವನವಾಸವ್ರತವನ್ನು ಮುಗಿಸಿ ತನ್ನ ಮುದ್ದು ಮಗನಾದ ರಾಮನು ಸೀತಾಲಕ್ಷಣರೊಡನೆ ಬಂದು,ಯಾವಾಗ ತನ್ನ ಕಣ್ಣುಗಳಿಗೆ ಆತ್ಯಾನಂದವನ್ನು ಬೀರೋವನೋ ಎಂದು ಎಡೆಬಿಡದೆ ಚಿಂತಿಸುತ್ತಿರುವಳಲ್ಲವೆ ? ಇನ್ನು ಆಕೆಯ ಗತಿಯೇನು ?” ಎಂದು ವಿಲಪಿಸಿ ದಳು ಹೀಗೆ ಗೋಳಿಡುತಿದ್ದ ಸೀತೆಯನ್ನು ನೋಡಿ, ತ್ರಿಜಟೆಯೆಂಬ ರಾಕ್ಷಸಿ ಯು ಆಕೆಯನ್ನು ಸಮಾಧಾನಪಡಿಸುತ್ತ, 4 ಅಮ್ಮ ಸೀತೆ " ಸೀನು ದು:ಖಿ ಸಬೇಡ' ಧೈಯ್ಯದಿಂದಿರು' ಈ ನಿನ್ನ ಪತಿಯು ಬದುಕಿರುವನು ಈ ಸಹೋ ದರರಿಬ್ಬರೂ ಬದುಕಿರುವರಂಬುದನ್ನು ಸೂಚಿಸುವಂತೆ ನನಗೆ ಅನುಭವಿಸಿ ದೃಗಳಾದ ಕೆಲವು ಕಾರಣಗಳು ಸ್ಪಷ್ಟವಾಗಿ ಕಾಣಿಸುತ್ತಿರುವುವು, ಅವುಗ ಳನ್ನೂ ಹೇಳುವೆನು ಕೇಳು' ನಿನ್ನ ಪತಿಯು ಹತನಾಗಿದ್ದ ಪಕ್ಷದಲ್ಲಿ, ಈ ಯುದ್ಧ ರಂಗದಲ್ಲಿ ಅವನ ಕಡೆಯ ಯೋಧರ ಮುಖಗಳೆಲ್ಲವೂ ಹೀಗೆ ಕೋಪಾವೇಶ ದಿಂದ ಕೂಡಿದವುಗಳಾಗಿಯೂ, ಸಂತೋಷದಿಂದ ಪ್ರಸನ್ನ ಗಳಾಗಿಯೂ ಇ ರಲಾರವು.ಮತ್ತು ಎಲೆ ಸೀತೆ! ಈಗ ನಾವು ಏರಿಬಂದಿರುವ ಈಪುಷ್ಪಕವಿಮಾ ನವು ದಿವ್ಯವಾದುದರಿಂದ, ಈ ರಾಮಲಕ್ಷ್ಮಣರು ಈಗ ಪ್ರಾಣವನ್ನು ಬಿಟ್ಟೆ ದ ಪಕ್ಷದಲ್ಲಿ ಇದುಪತಿಹೀನೆಯಾದ ನಿನ್ನನ್ನು ವಹಿಸಿಕೊಂಡಿರಲಾರದು!ಯು ದ್ಯದಲ್ಲಿ ಪ್ರಧಾನವೀರನು ಹತನಾದಪ್ಪಕ್ಷದಲ್ಲಿ, ಅವನ ಕಡೆಯ ಸೈನ್ಯಗಳೆ ಲ್ಲವೂ ಉತ್ಸಾಹಭಂಗವನ್ನು ಹೊಂಗಿ, ಮುಂದಿನ ಪ್ರಯತ್ನವನ್ನೂ ಬಿಟ್ಟು, ಜಲಮಧ್ಯದಲ್ಲಿ ನಾವಿಕನಿಲ್ಲದ ದೋಣಿಯಂತೆ, ಯುದ್ಧದಲ್ಲಿ ತಮ್ಮನ್ನು ನಡೆ