ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಸರ್ಗ, ೪೪.] ಯುದ್ಧಕಾಂಡವು. ಯನ್ನು ನೋಡಿದರೂ, ಕೊಲ್ಲಿರಿ ' ಸೀಳಿರಿ ! ಬಡಿಯಿರಿ ? ಇತ್ತಬನ್ನಿರಿ' ಇ ದೇಕೆ ಓಡುವಿರಿ!”ಎಂದು ಒಬ್ಬರಿಗೊಬ್ಬರು ಕೂಗಾಡುವ ದೊಡ್ಡಗದ್ದಲವೇ ಕೇಳಿಸುತಿತ್ತು. ಆ ಕಗ್ಗತ್ತಲೆಯಲ್ಲಿ ಬಂಗಾರದ ಕವಚಗಳನ್ನು ಧರಿಸಿದ ಕ ರೀಮೈಯುಳ್ಳ ಕೆಲವುರಾಕ್ಷಸರು, ಅಲ್ಲಲ್ಲಿ ಉರಿಯುತ್ತಿರುವ ಜ್ಯೋತಿರ್ಲತೆ ಯ ಕಾಡುಗಳಿಂದ ತುಂಬಿದ ದೊಡ್ಡದೊಡ್ಡಬೆಟ್ಟಗಳಂತೆ ಕಾಣುತಿದ್ದರು. ಮಿತಿಮೀರಿದ ಆ ಮಹಾಂಧಕಾರದಲ್ಲಿ, ರಾಕ್ಷಸರೆಲ್ಲರೂ ಕೋಪದಿಂದ ಮೈ। ಮರತವರಾಗಿ, ವೇಗದಿಂದ ವಾನರನ್ಯಕ್ಕೆ ನುಗ್ಗಿ ,ಕೈಗೆ ಸಿಕ್ಕಿದ ವಾನರರನ್ನು ಮರತವರಾಗಿ, ವೇಗದಿಂದ 6 ಹಾಗೆಯೇ ನುಂಗಿಬಿಡುತ್ತ ಯುದ್ಧಭೂಮಿಯಲ್ಲಿ ವಿಹರಿಸುತಿದ್ದರು ಇತ್ತ ಲಾಗಿ ವಾನರರೂಕೂಡ ತಡೆಯಲಾರದ ಕೋಪವನ್ನು ಹೊಂದಿ, ಆಗಾಗ ಮೇಲೆ ಹಾರಿ, ಬಂಗಾರದ ತಿರೋಭೂಷಣಗಳುಳ್ಳ ಕುದುರೆಗಳನ್ನೂ, ಅಗ್ನಿ ಜ್ವಾಲೆಗಳಂತೆ ಪ್ರಕಾಶಿಸುತ್ತಿದ್ದ ಧ್ವಜಗಳನ್ನೂ ಅತಿತೀಕ್ಷ್ಯಗಳಾದ ತಮ್ಮ ಹಲ್ಲುಗಳಿಂದ ಸಿಗಿದುಹಾಕುತಿದ್ದರು ಬಲಾಡ್ಯರಾದ ಆ ವಾನರರೆಲ್ಲರೂ, ಅತಿಕೋಪೋದ್ರಿಕ್ತರಾಗಿ, ಅಲ್ಲಲ್ಲಿ ಮದದಾನೆಗಳಮೇಲೆ ಹಾರಿ, ಆ ಆನೆಗ ಳನ್ನೂ, ಅವಗಳಮೇಲೆ ಕುಳಿತಿದ್ದ ಮಾವುತರನ್ನೂ ಸಾಯಗೊಲ್ಲತಿಮ್ಮ ರು, ಕಲವರು ಧ್ವಜಪತಾಕೆಗಳಿಂದಲಂಕೃತವಾದ ರಥದಮೇಲೆ ಹಾರಿ, ಆ ವುಗಳನ್ನು ಮುರಿದು ಹಾಕುತಿದ್ದರು ಹೀಗೆ ವಾನರರೆಲ್ಲರೂ ರಾಕ್ಷಸ ಸೈನ್ಯದಲ್ಲಿ ನುಗ್ಗಿ, ತಮ್ಮ ಹಲ್ಲುಗಳಿಂದಲೂ, ಉಗುರುಗಳಿಂದಲೂ, ಆವ ರನ್ನು ನಾನಾವಿಧವಾಗಿ ಭೇದಿಸಿಕೊಲ್ಲುತಿದ್ದರು ಅತ್ತಲಾಗಿ ರಾಮಲಕ್ಷ ಣರೂಕೂಡ ಅಲ್ಲಲ್ಲಿ ಮುಗಿ, ಕತ್ತಲೆಯಲ್ಲಿ ಕಂಡೂ ಕಾಣದ ರಾಕ್ಷಸಾಕೃತಿಗೆ ಳನ್ನು ಗುರುತುಹಿಡಿದು, ಕೂರಸರ್ಪಗಳಂತಿದ್ದ ತಮ್ಮ ತೀಕ್ಷಬಾಣಗಳ ನ್ನು ಪ್ರಯೋಗಿಸಿ ಅವರನ್ನು ಕೊಲ್ಲುತಿದ್ದರು ಆಗ ಅಲ್ಲಿ ಗಾಢಾಂಧಕಾರವು ಮಾತ್ರವೇ ಅಲ್ಲದೆ, ಕುದುರೆಗಳ ಖರಾಗ್ರಹತಿಯಿಂದ ಪುಡಿಪುಡಿಯಾಗಿ, ರಥ ಚಕ್ರಸಂಚಾರದಿಂದ ಮೇಲಕ್ಕೆದ್ದ ನೆಲದ ಧೂಳಿಯು, ಅಲ್ಲಿ ಯುದ್ಧಮಾ ಡುತಿದ್ದವರ ಕಣ್ಣು ಕಿವಿಗಳೆರಡನ್ನೂ ಸಂಪೂರ್ಣವಾಗಿ ಮುಚ್ಚಿಬಿಟ್ಟಿತು ಹೀಗೆ ನೋಡುವವರಿಗೆ ರೋಮಾಂಚವನ್ನು ಹುಟ್ಟಿಸುವಂತೆ, ಮಹಾಭ ಯಂಕರವಾದ ಯುದ್ಧವು ನಡೆಯುತ್ತಿರಲು, ಕ್ಷಣಮಾತ್ರದಲ್ಲಿ ಆ ರಣ ರಂಗವೆಲ್ಲವೂ ರಕ್ತಮಯವಾಗಿ, ಎಲ್ಲೆಲ್ಲಿ ನೋಡಿದರೂ ಭಯಂಕರಗಳಾದ