ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮೪ ಶ್ರೀಮದ್ರಾಮಾಯಣವು [ಸರ್ಗ ೪. ಅವನನ್ನು ಕುರಿತು, (ಎಲೆ ವಾಯುಪುತ್ರನೆ ! ಭಯಂಕರವಾದ ಆ ರಾವಣ ನಗರಿಯ ಸ್ಥಿತಿಯೆಲ್ಲವನ್ನೂ ನೀನು ಹೇಳಿದೆಯಷ್ಟೆ ? ಆದರೇನು ? ಇರಲಿ ? ಶೀಪುದಲ್ಲಿಯೇ ಅದನ್ನು ನಾನು ಧ್ವಂಸಮಾಡುವೆನು ನೋಡು ! ಇದು ಸತ್ಯವೆಂದು ತಿಳಿ!” ಎಂದು ಹೇಳಿ, ಸುಗ್ರೀವನ ಕಡೆಗೆ ತಿರುಗಿ, 14 ಸುಗ್ರೀ ವಾ! ಈ ಮುಹೂರ್ತದಲ್ಲಿಯೇ ಪ್ರಯಾಣಹೊರಡಬೇಕೆಂಬುದು ನನ್ನ ಉ ದೇಶವು, ಈಗ ಸೂರನು ನಡುಹಗಲಲ್ಲಿರುವುದರಿಂದ, ಈ ಅಭಿಜಿನ್ನು ಹೂ ರ್ತವೇ ನಮ್ಮ ಪ್ರಯಾಣಕ್ಕೆ ಯುಕ್ತಕಾಲವು. ಇದೇ ಜಯಸೂಚಕವಾದ ಶುಭಮುಹೂರ್ತವು ಸೂರನು ಮಧ್ಯಗತನಾಗಿರುವಾಗ, ಈ ಅಭಿಜಿನ್ನು ಹೂ ರ್ತದಲ್ಲಿಯೇ ನಾವು ಪ್ರಯಾಣ ಮಾಡಿದರೆ ನಮಗೆ ಜಯವು ಸಿದ್ದವು ನಾ ವು ಈ ಜಯಕಾಲದಲ್ಲಿ ಪ್ರಯಾಣಹೊರಟರೆ ಸೀತೆಯನ್ನು ಕದ್ಭುಯ್ಯ ಆ ರಾಕ್ಷಸನು ಎಲ್ಲಿ ಹೋದರೆ ತಾನೇ ಇನ್ನೆಂದಿಗೆ ತಪ್ಪಿಸಿಕೊಳ್ಳಬಲ್ಲನು ? ವಿಷವನ್ನು ಕುಡಿದು ಸಾಯುವ ಸ್ಥಿತಿಯಲ್ಲಿರುವವನೂಕೂಡ, ಸಾಯವ ಕಾಲ ದಲ್ಲಿ ಅಮೃತಸ್ಪರ್ಶವನ್ನು ಹೊಂದಿ ಬದುಕುವಂತೆ, ಪ್ರಾಣಾಂತಕರವಾದ ಆಷ್ಟು ಕಷ್ಟದಲ್ಲಿ ಸಿಕ್ಕಿಬಿದ್ದಿರುವ ಸೀತೆಯು, ನಮ್ಮ ಈ ದಂಡ ಯಾತ್ರೆಯ ನ್ನು ಕೇಳಿದರೆ, ಸ್ವಲ್ಪವಾದರೂ ಆಶೋತ್ತರವನ್ನು ಹೊಂದಬಹುದು, ಎಲೆ ಸುಗ್ರೀವಾ ' ಈಗ * ಉತ್ತರಾನಕ್ಷತ್ರವಾದುದರಿಂದ ಪುನರೈಸುವಿನಲ್ಲಿ ಹು ಟ್ವಿದ ನನಗೆ ಇದು ಸಾಧ್ಯ ನತಾರಯು, ನಾಳೆ ಚಂದ್ರನು ಹಸ್ತ ನಕ್ಷತ್ರ ದೊಡನೆ ಸೇರುವನು ಅದು ನನಗೆ ವಧತಾರಯಾಗುವುದು ಆದುದರಿಂದ ಸ ಮಸ್ಸಸೈನ್ಯಗಳೊಡನೆ ಈ ದಿನವೇ ಪ್ರಮಾಣಮಾಡುವೆವು ಇದೋ ' ಆಗ ಲೇ ನನಗೆ ಶುಭನಿಮಿತ್ಯಗಳೂ ತೋರುತ್ತಿರುವುವು ಈಗ ಹೊರಟತ ರಾವ ಣನನ್ನು ಕೊಂದು ಸೀತೆಯನ್ನು ತರುವುದೇ ನಿಜವು ಇದೋ ? ಈಗ ನನ್ನ ನೇತ್ರವು ಮೇಲಕ್ಕೆ ಆಗಿರುತ್ತಿರುವುದರಿಂದ, ನನ್ನ ಕೋರಿಕೆಗೆ ಜಯವು ಸಿದ್ದ ವೆಂಬುದನ್ನೇ ಸೂಚಿಸುವಂತಿರುವುದು ” ಎಂದನು ರಾಮನು ಹೇಳಿದ ಈ ಮಾತನ್ನು ವಾನರರಾಜನಾದ ಸುಗ್ರೀವನ, ಲಕ್ಷಣನೂ ಸಂತೋಷ

  • ಉತ್ತರಘಟ್ಟುನಿಯಲ್ಲಿ ಪ್ರಯಾಣವನ್ನು ಹೇಳಿರುವುದರಿಂದ, ನಾಲ್ಕು ನಮಾಸದ ಪೂರ್ಣಿಮೆಯಲ್ಲಿ ರಾಮನ ಪ್ರಯಾಣವೆಂದು ತಿಳಿಯಬೇಕು.