ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೬ ಸರ್ಗ, ೫೨ ] | ಯುದ್ಧಕಾಂಡವು ಗಿ ಮುಂದೆ ಬಂದು, ಬಾಣವರ್ಷವನ್ನು ಕರೆದು, ವಾನರರನ್ನು ಚದರಿಸಿ ದಿಕ್ಕು ದಿಕ್ಕಿಗೆ ಓಡಿಸುತಿದ್ದನು. ಇತ್ತಲಾಗಿ ಹನುಮಂತನು, ತನ್ನ ಕಡೆಯ ವಾನರಸೈನ್ಯವೆಲ್ಲವೂ, ಧೂಮ್ರಾಕ್ಷನ ಬಾಣಪ್ರಹಾರದಿಂದ ನೊಂದುದ ನ್ನು ಕಂಡು, ಅತಿಕೋಪಾವಿಷ್ಟನಾಗಿ, ಒಂದು ದೊಡ್ಡತಿಲೆಯನ್ನೆತ್ತಿಕೊಂಡು ಆ ಥಮಾಕ್ಷಸಿಗಿಹಿರಾಗಿ ಹೊರಟನು. ಸಹಜವಾಗಿಯೇ ಪಿಂಗಳನೇತ್ರ ವುಳ್ಳವನಾಗಿಯೂ, ತನ್ನ ತಂದೆಯಾದ ವಾಯುದೇವಗಣೆಯಾದ ಹರಾ ಕ್ರಮವುಳ್ಳವನಾಗಿಯೂ ಇದ್ದ ಆ ಹನುಮಂತನು, ಕೋಪದಿಂದ ಮತ್ತ ಷ್ಟು ಕೆಂಪೇರಿದ ಕಣ್ಣುಳ್ಳವನಾಗಿ, ತಾನು ಹೊತ್ತು ತಂದಿದ್ದ ದೊಡ್ಡ ಶಿಲೆ ಯನ್ನು ಥಮಾಕ್ಷನ ರಥದಮೇಲೆ ಬೀಸಿದನು ಈ ದೊಡ್ಡ ಶಿಲೆಯು ತನಗಿದಿರಾಗಿ ಬರುವುದನ್ನು ನೋಡಿದೊಡನೆ, ಧೂಮಾಕನು ತನ್ನ ಗದೆ ಯನ್ನು ಕೈಗೆತ್ತಿಕೊಂಡು, ವೇಗದಿಂದ ರಥವನ್ನು ಬಿಟ್ಟು ಕೆಳಕ್ಕೆ ಹಾರಿ ನೆಲದಮೇಲೆ ನಿಂತನು ಹನುಮಂತನಿಂದ ಪ್ರಯುಕ್ತವಾದ ಆ ದೊಡ್ಡ ಶಿಲೆ ಯು ಧೂಮ್ರಾಕ್ಷನ ರಥಗಳನ್ನೂ, ಅದರ ಚಕ್ರಗಳನ್ನೂ, ನೊಗಗಳನ್ನೂ , ಅದರ ಕುದುರೆಗಳನ್ನೂ , ಧ್ವಜಗಳನ್ನೂ, ಅದರಲ್ಲಿದ್ದ ಬಿಲ್ಲನ್ನೂ ಪುಡಿಪುಡಿಯಾ ಗಿಮಾಡಿ ಭೂಮಿಯಲ್ಲಿ ಬಿದ್ದಿತು ವಾಯುಪ್ರತ್ರನಾದ ಹನುಮಂತನು ಹೀ ಗೆ ಧೂಮ್ರಾಕ್ಷನ ರಥವನ್ನು ಮುರಿದಮೇಲೆ, ಸ್ಕಂಧಗಳಿಂದಲೂ, ಶಾಖೆಗ ಳಿಂದಲೂ ಕೂಡಿದ ದೊಡ್ಡದೊಡ್ಡ ಮರಗಳನ್ನು ಕಿತ್ತು ತಂದು, ಇತರ ರಾಕ್ಷಸರೊಡನೆ ಯುದ್ಧಕ್ಕೆ ನಿಂತನು ಅಲ್ಲಲ್ಲಿ ಕೆಲವು ರಾಕ್ಷಸರು ಈ ಆಂಜ ನೇಯನ ವೃಕ್ಷ ಪ್ರಹಾರದಿಂದ ತಲೆಯೊಡೆದು ರಕ್ತದಿಂದ ತೊಯ್ದು ಕೆಳ ಕುರುಳಿದರು. ಹೀಗೆ ಹನುಮಂತನು ವೃಕ್ಷಪ್ರಹಾರಗಳಿಂದ ಅಲ್ಲಿದ್ದ ಸಮಸ್ತರಾಕ್ಷಸಸೈನ್ಯವನ್ನೂ ಓಡಿಸಿ, ಒಂದು ದೊಡ್ಡ ಪರತಶಿಖರವನ್ನು ಕೈಗೆತ್ತಿಕೊಂಡು, ಧಮಾಕನಿಗಿದಿರಾಗಿ ಬಂದನು. ಹೀಗೆ ತನಗಿರಿರಾಗಿ ಬರುತ್ತಿರುವ ಹನುಮಂತನನ್ನು ನೋಡಿ ಥಮಾಕ್ಷನು, ತನ್ನ ಗದೆಯ ನೈತಿಕೊಂಡು ಸಿಂಹನಾದವನ್ನು ಮಾಡುತ್ತ, ಹನುಮಂತನನ್ನಿ ದಿರಿಸಿ ನಿಂ ತನು, ಮತ್ತು ವೀಠ್ಯವಂತನಾದ ಆ ಧೂಮ್ರಾಕ್ಷನು, ಆತ್ಯಾಕ್ರೋಶದಿಂದ ಕೂಡಿದವನಾಗಿ, ಸುತ್ತಲೂ ಮುಳ್ಳುಗಳುಳ್ಳ ಆ ದೊಡ್ಡ ಗದೆಯನ್ನೆತ್ತಿ ಹನುಮಂತನ ತಲೆಯಮೇಲೆ ಪ್ರಹರಿಸಿದನು ಭಯಂಕರಾಕಾರವುಳ್ಳ ಆ