ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪oo ಶ್ರೀಮದ್ರಾಮಾಯಣವು [ಸರ್ಗ ೫೩. ದನು ಕಾಯುತಿದ್ದ ದಕ್ಷಿಣದ್ವಾರದ ಕಡೆಗೆ ಬಂದುಸೇರಿತು, ಈ ದೊಡ್ಡ ರಾಕ್ಷಸಸೈನ್ಯವು ಪಟ್ಟಣದಿಂದ ಹೊರಟಾಗಲೇ, ಅಲ್ಲಲ್ಲಿ ಕೆಲವು ದುರ್ನಿಮಿತ್ತ ಗಳು ತಲೆದೋರುತಿದ್ದುವು. ಮೇಫುಶೂನ್ಯವಾದ ಆಕಾಶದಿಂದ ಭಯಂಕರ ಸ್ವರೂಪವುಳ್ಳ ಉಲ್ಕೆಗಳು ಬಿಳುತಿದ್ದುವು ಅಲ್ಲಲ್ಲಿ ನರಿಗಳು ಬಾಯಿಂದ ಅಗ್ನಿ ಜ್ವಾಲೆಗಳನ್ನು ಕಕ್ಕುತ್ಯ, ಭಯಂಕರಧ್ವನಿಯಿಂದ ಆರುಚುತಿದ್ದವು. ಅಲ್ಲಲ್ಲಿ ಕೂರಮೃಗಗಳು ರಾಕ್ಷಸರಿಗೆ ಮರಣವನ್ನು ಸೂಚಿಸುವಂತೆ ಅಮಂ ಗಳವಾಗಿ ಕೂಗುತಿದ್ದುವು. ಯುದ್ಧಕ್ಕಾಗಿ ಮುಂದೆಮುಂದೆ ಸಾಗಿಬರುತಿದ್ದ ರಾಕ್ಷಸಯೋಧರೂ ಕೂಡ,ದಾರಿಯಲ್ಲಿ ನಿಷ್ಕಾರಣವಾಗಿ!ಭಯಪಟ್ಟು ತಡವರಿಸಿ ನಿಲ್ಲುತ್ತಿದ್ದರು. ಮಹಾತೇಜಸ್ವಿಯಾಗಿಯೂ ಬಲಾಢನಾಗಿಯೂ ಇರುವ ವಜ್ರದಂಷ್ಯನು, ಈ ಮಹೋತ್ಪಾತಗಳೆಲ್ಲವನ್ನೂ ತಾನು ಕಣ್ಣಾರೆ ನೋ ಡುತಿದ್ದರೂ, ತನ್ನ ಮನಸ್ಸಿನಲ್ಲಿ ಧೈರವನ್ನು ಬಿಡದೆ,ಯುದ್ಧಾತುರದಿಂದ ಬಂ ದನು. ಈ ದೊಡ್ಡ ರಾಕ್ಷಸಸೈನ್ಯವು ಇದಿರಾಗಿ ಬರುವುದನ್ನು ಕಂಡೊಡನೆ, ಇತ್ತಲಾಗಿ ವಾನರರೆಲ್ಲರೂ ಉತ್ಸಾಹದಿಂದುಬ್ಬುತ್ತ, ಹತ್ತು ದಿಕ್ಕುಗಳನ್ನೂ ತುಂಬುವಂತೆ ಮಹಾಧ್ವನಿಯಿಂದ ಸಿಂಹನಾದಗಳನ್ನು ಮಾಡಿದರು. ಕೋ ನೆಗೆ ಭಯಂಕರಾಕಾರವುಳ್ಳ ಸಮಸ್ಯವಾನರರೂ ರಾಕ್ಷಸರಮೇಲೆ ನುಗ್ಗಿ ಬಂ ದರು ವಾನರರಾಕ್ಷಸರಿಬ್ಬರೂ ಸೇರಿ ಒಬ್ಬರನ್ನೊಬ್ಬರು ಕೊಲ್ಲಬೇಕೆಂಬ ಹ ಟದಿಂದ ತುಮುಲಯುದ್ಧವನ್ನಾ ರಂಭಿಸಿದರು. ಈ ಎರಡುಪಕ್ಷದವರೂ ಮಹೋತ್ಸಾಹದಿಂದ ಒಬ್ಬರಮೇಲೊಬ್ಬರು ಬಿದ್ದು ಯುದ್ಧ ಮಾಡುವಾಗ, ಅಲ್ಲಲ್ಲಿ ಕೆಲವರು ಮೈ ಮುರಿದು, ತಲೆಯೊಡೆದು, ಸಾಂಗಗಳಿಂದಲೂ ರಕ್ತ ವನ್ನು ಸುರಿಸುತ್ತ ಕೆಳಗೆ ಬಿದ್ದರು ಎಂತಹ ಮಹಾಯುದ್ಧಗಳಲ್ಲಿಯೂ ಹಿಂ ಜರಿಯದ ಮಹಾದ್ಭುತಪರಾಕ್ರಮವುಳ್ಳ ಕೆಲವು ರಾಕ್ಷಸರು, ಪರಿಫುಗಳನ್ನು ಹಿಡಿದು, ಅಲ್ಲಲ್ಲಿ ಸಿಕ್ಕಿದ ವಾನರಸೈನಿಕರಮೇಲೆ ನುಗ್ಗಿ ಹೊಡೆಯುತ್ತ ಅವರ ಮೇಲೆ ವಿವಿಧಾಯುಧಗಳನ್ನು ಪ್ರಯೋಗಿಸುತಿದ್ದರು ಆ ಯುದ್ಧದಲ್ಲಿ ವಾನ ರರಾಕ್ಷಸಸೈನಿಕರಿಬ್ಬರೂ ಒಬ್ಬರಿಗೊಬ್ಬರಿಗೆ ಹೊಡೆದಾಡುತ್ತಿರುವಾಗ, ಅವ ರವರು ವೃಕ್ಷಗಳನ್ನೂ, ಶಿಲೆಗಳನ್ನೂ, ಆಯುಧಗಳನ್ನೂ , ಪ್ರಯೋಗಿಸಿದುದ ರಿಂದುಂಟಾದ ಮಹಾಧ್ವನಿಯು ಅತಿಭಯಂಕರವಾಗಿ ರಣರಂಗವೆಲ್ಲ ವನ್ನೂ ವ್ಯಾಪಿಸಿ, ಜನರ ಹೃದಯವನ್ನು ಭೇದಿಸುವಂತೆ ಕೇಳಿಸುತಿತ್ತು. ಅಲ್ಲಲ್ಲಿ ರಥ