ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೭೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫.] ಯುದ್ಧಕಾಂಡವು ೨೪೦೧ ನೇಮಿಧ್ವನಿಯೂ, ಧನುಸ್ಸಿನ ಟಂಕಾರಧ್ವನಿಯೂ, ಶಂಖಭೇರೀಮೃದಂ ಗಾದಿವಾದ್ಯಗಳ ಧ್ವನಿಯೂ ತುಮುಲವಾಗಿ ವ್ಯಾಪಿಸಿತು. ಅಲ್ಲಲ್ಲಿ ಕೆಲವರು ತಮ್ಮ ಕ್ಲಿದ್ದ ಶಸ್ತ್ರಾಸ್ತ್ರಗಳೆಲ್ಲವನ್ನೂ ಪ್ರಯೋಗಿಸಿ, ಅವೆಲ್ಲವೂ ಮುಗಿದಮೇ ೮ ಬಾಹುಯುದ್ಧವನ್ನಾರಂಭಿಸಿದರು ಅಲ್ಲಲ್ಲಿ ಕೆಲವು ವಾನರರು ತಮ್ಮ ಕೈಗೆ ಸಿಕ್ಕಿದ ರಾಕಸರನ್ನು ಅಂಗೆಗಳಿಂದಪ್ಪಳಿಸಿಯೂ, ಕಾಲುಗಳಿಂದ ತುಳಿ ದೂ, ಮುಷ್ಟಿಗಳಿಂದ ಹೊಡೆದೂ, ವೃಕಗಳಿಂದ ಬಡಿದ, ಮೊಳಕಾಲುಗ ಳಿಂದ ಗುದ್ದಿಯೂ, ಕೊಂದು ಕೆಡಹುತಿದ್ದರು. ಯುದ್ಧ ಮದದಿಂದುಬ್ಬಿದ ಬೇರೆ ಕೆಲವು ವಾನರರು, ಅಲ್ಲಲ್ಲಿ ಸಿಕ್ಕಿದ ರಾಕ್ಷಸರನ್ನು ಶಿಲೆಗಳಿಂದ ಹೊಡೆದು ಕೊಂದು ಚೂರ್ಣಮಾಡುತಿದ್ದರು ಸೇನಾಸತಿಯಾದ ವಜ್ರದಂಷ್ಯನಾದ ರೋ, ಪ್ರಳಯಕಾಲದಲ್ಲಿ ಪಾಶಹಸ್ಯನಾದ ಯಮನಂತೆ ಭಯಂಕರಾಕಾರ ವುಳ್ಳವನಾಗಿ, ಅಲ್ಲಲ್ಲಿ ಸಂಚರಿಸುತ್ಯ, ಅಲ್ಲಲ್ಲಿ ಸಿಕ್ಕಿದ ವಾನರರನ್ನು ಬಾಣಗಳಿಂ ದ ಹೊಡೆದು ಬೆದರಿಸಿ ಓಡಿಸುತಿದ್ದನು. ಬಲಾಡ್ಯರಾಗಿಯ, ಆಯುಧವಿದ್ಯೆ ಯಲ್ಲಿ ನಿಪುಣರಾಗಿಯೂ ಇದ್ಯ ಆನೇಕರಾಕ್ಷಸರು, ಆ ರಣರಂಗದಲ್ಲಿ ಕೋಪ ದಿಂದ ಮೈ ತಿಳಿಯದೆ ವಿವಿಧಾ ಯುಧಗಳನ್ನು ಹಿಡಿದು ವಾನರಸೈನ್ಯವನ್ನು ಕೊಂದು ಕೆಡಕುತಿದ್ದರು ಹೀಗೆ ರಾಕ್ಷಸರೆಲ್ಲರೂ ಅಲ್ಲಲ್ಲಿ ವಾನರಸೈನ್ಯವನ್ನು ಹಿಂದುಮುಂದುನೋಡದೆ ಕೊಲ್ಲುತ್ತಿರುವುದನ್ನು ಕಂಡು, ವಾಲಿಪುತ್ರನಾದ ಅಂಗದನು, ಪ್ರಳಯ ಕಾಲಾಗ್ನಿ ಯಂತೆ ಕೋಪದಿಂದ ಜ್ವಲಿಸುತ್ತ, ಕೆಂಪೇ ರಿದ ಕಣ್ಣುಳ್ಳವನಾಗಿ, ಒಂದು ದೊಡ್ಡ ವೃಕ್ಷವನ್ನು ಕಿತ್ತುಕೊಂಡು, ಕ್ಷುದ್ರ ಮೃಗಗಳನ್ನು ಬೆನ್ನಟ್ಟಿ ಹೋಗುವ ಸಿಂಹದಂತೆ ಆ ರಾಕ್ಷಸರ ಗುಂಪಿನಲ್ಲಿ ನುಗ್ಗಿ ಅವರೆಲ್ಲರನ್ನೂ ಕೊಲ್ಲುತ್ತಬಂದನು ಇಂದ್ರನಿಗೆಣೆಯಾದ ಪರಾಕ್ರ ಮವುಳ್ಳ ಆ ಅಂಗದನು ರಾಕ್ಷಸಸೈನ್ಯದಲ್ಲಿ ನುಗ್ಗಿ ಮಹಾಭಯಂಕರವಾದ ಯುದ್ಧವನ್ನು ನಡೆಸಿದಾಗ, ಈ ಅಂಗದನಿಗಿದಿರಾದ ರಾಕ್ಷಸರೆಲ್ಲರೂ ಬಹಳ ಫೆರಪರಾಕ್ರಮವುಳ್ಳವರಾಗಿದ್ದರೂ, ಅವನ ಪ್ರಹಾರದಿಂದ ನೊಂದು, ಬುಡವನ್ನು ಕಡಿದ ಮರಗಳಂತೆ ತಲೆಯೊಡೆದು ಕೆಳಕ್ಕುರಳುತಿದ್ದರು ಆಗ ಆ ರಣಭೂಮಿಯೆಲ್ಲವೂ ಮರಿದ ರಥಗಳಿಂದಲೂ, ಸತ್ತು ಬಿದ್ದ ಕುದುರೆಗ ಳಿಂದಲೂ, ಕತ್ತರಿಸಿದ ವಿಚಿತ್ರಧ್ವಜಗಳಿಂದಲೂ, ಭಿನ್ನ ಭಿನ್ನ ಗಳಾದ ವಾನ ರರಾಕ್ಷಸರ ದೇಹಗಳಿಂದಲೂ, ರಕ್ತಪ್ರವಾಹದಿಂದಲೂ ತುಂಬಿ, ಮಹಾಭ