ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೯ - ಸರ್ಗ ೪.] ಯುದ್ಧಕಾಂಡವು. ಭಯಂಕರರೂಪವುಳ್ಳ ಹುಲಿ, ಬಗೆಬಗೆಯ ಹಾವುಗಳು, ಮದದಾನೆಗಳು ಇ ವೇ ಮುಂತಾದ ಅನೇಕಕೂರಮೃಗಗಳು ತುಂಬಿದ್ದುವು.ಮತ್ತು ಅಲ್ಲಿನ ಒಂ ದೊಂದು ಜಲಾಧಾರಪ್ರದೇಶವೂ, ಅಂದವಾಗಿ ಅರಳಿದ ತಾವರೆಗಳಿಂದ ಲೂ, ಕರೀನೈದಿಲೆಗಳಿಂದಲೂ, ಬಿಳಿನೈದಿಲೆಗಳಿಂದಲೂ, ಸೌಗಂಧಿಕವೇ ಮೊದಲಾದ ಇನ್ನೂ ವಿಧವಿಧವಾದ ನೀರುಹೂಗಳಿಂದಲೂ ರಮ್ಯವಾ ಗಿಟ್ಟಿತು ಆ ಬೆಟ್ಟದ ತಪ್ಪಲುಗಳಲ್ಲಿ ಬಗೆಬಗೆಯ ಹಕ್ಕಿಗಳು ಇಂಪಾದ ಧ್ವ ಸಿಯಿಂದ ಕೊಗುತಿದ್ದುವು ಈ ವಾನರರಾದರೋ ಆಕೊಳಗಳಲ್ಲಿ ಸ್ನಾ ನಪಾ ನಗಳನ್ನು ಮಾಡಿ ವಿನೋದದಿಂದ ವಿಹರಿಸುತ್ತ, ಒಬ್ಬರನ್ನೊಬ್ಬರು ಮೇಲ ಕೈತಿ ನೀರಿನಲ್ಲಿ ಬಿಸುಟು ಜಲಕ್ರೀಡೆಗಳನ್ನಾಡುವರು ಬೆಟ್ಟದ ತಪ್ಪಲ ಗ ಛನ್ನೇರಿ ಇಲ್ಲಿನ ಗಿಡಗಳಿಂದ ಅಮೃತಗಂಧವುಳ್ಳ, ಹಣ್ಣುಗಳನ್ನೂ , ಕಂದಮ ಲಗಳ , ಹೂಗಳನ್ನು ಕಿತ್ತು ತಿನ್ನು ವರು ಅಲ್ಲಲ್ಲಿ ಮರಗಳಮೇಲೆ ಒಂ ದೊಂದು ಕೊಳಗ ದಷ್ಟು ಜೇನಿನಿಂದ ತುಂಬಿ ತೂಗಾಡುತ್ತಿರುವ ಜೇನು ಗೂಡನ್ನು ಕೈಯಿಂದ ಕಿತ್ತು ಕುಡಿಯುವರು ಕಣ್ಣಿಗೆ ಕಂಡ ಮರಗಳನ್ನು ಮುರಿಯುವರು ಕಂಡಕಂಡ ಬಳ್ಳಿಗಳನ್ನು ಕಿತ್ತೆಸೆಯುವರು ಅಲ್ಲಲ್ಲಿ ಬೆಟ್ಟ, ಗಳಿಗೆ ಬೆಂಕಿಯ ಟ್ಟು ಉರಿಸುವರು ಹೀಗೆ ಬಲದಿಂದ ಕೊಬ್ಬಿದ ಆ ವಾ ನರರೆಲ್ಲರೂ ಪಾನಮದದಿಂದ ಕೊಚ್ಚಿ ಕೂಗಿಡುತ್ಯ, ಪರಮಸಂತೋ ಷದಿಂದ ಮುಂದೆಮುಂದೆ ಪ್ರಯಾಣಮಾಡುತಿದ್ದರು ಅವರಲ್ಲಿ ಕೆಲ ವರು ಮರಗಳಿಲ್ಲದ ಕಡೆಯನ್ನೆ ನೋಡಿ ಸುತ್ತಿ ಸುತ್ತಿ ನಡೆಯುವರು ಕೆಲ" ವರು ಮರದಿಂದ ಮರಕ್ಕೆ ಹಾರಿಹೋಗುವರು ಕೆಲವರು ಮರವನ್ನೇರಿ ಧುಮುಕುವರು ಹೀಗೆ ವಿಚಿತ್ರಗತಿಯಿಂದ ಹೋಗುವಾಗ ಅಲ್ಲಿನ ಸಮಸ್ಯೆ ಪ್ರದೇಶವೂ ಪಕ್ವವಾದ ಪೈರುಗಳಿಂದ ತುಂಬಿದ ಬತ್ತದ ಗದ್ದೆಯಂತೆ ಆ ಕಪಿಗಳಿಂದಲೇ ದಟ್ಟವಾಗಿ ತುಂಬಿಹೋಯ್ತು ಹೀಗೆ ರಾಮನು ಆ ಕಪಿ ಗಳೆ ಡನೆ ಪ್ರಯಾಣಮಾಡಿ, ಕೊನೆಗೆ ಮ ಕೇಂದ್ರಪರೈತವನ್ನು ಸೇರಿ, ಆ ನೇಕವೃಕ್ಷಸಮೂಹಗಳಿಂದ ಶೋಭಿತವಾದ ಆ ಪತಶಿಖರವನ್ನೇರಿದನು ದಶರಥಪುತ್ರನಾದ ರಾಮನು ಆ ಪತಶಿಖರದಲ್ಲಿ ನಿಂತು ನೋಡುವಾಗ, ಮುಂದೆ ಮತ್ತೈಕೂಲ್ಮಾ ದಿಜಲಜಂತುಗಳಿಂದ ತುಂಬಿದ ಮಹಾಸಮುದ್ರ