ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫ ] ಯುದ್ಧಕಾಂಡವು ೨೦೯ ನಾಗಿರುವ ನನ್ನ ಪ್ರಾಣಗಳನ್ನು ನಿಲ್ಲಿಸಿಡುವುದಕ್ಕೆ, ಈಗ ಇದೊಂದೇದೊಡ್ಡ ಸಾಧನವಾಗಿರುವುದು, ಏಕಶಯ್ಕೆಯಲ್ಲಿ ಮಲಗುವಂತೆ ಈಗ ನಾವಿಬ್ಬರೂ ಈ ಒಂದೇ ಭೂಮಿಯನ್ನಾಶ್ರಯಿಸಿರುವುದರಿಂದ, ಇದೇ ನಮ್ಮಿಬ್ಬರಿಗೂ ಜೀವನಸಾಧನವಾಗಿರುವುದು ಚೆನ್ನಾಗಿ ಜಲಸಮೃದ್ಧಿಯುಳ್ಳ ಗದ್ದೆಯ ಸ ಮೀಪದಲ್ಲಿರುವುದರಿಂದ, ನೀರಿಲ್ಲದ ಗದ್ದೆಗೂ ತೇವವೇರುವಂತೆ, ಆ ನನ್ನ ಪ್ರಿ ಯೆಯು ಬದುಕಿಬರುವಳೆಂಬ ಸುದ್ದಿಯನ್ನು ಕೇಳಿಯೇ ನಾನೂ ಈಗ ಬದು ಕಿರುವೆನು. ವತ್ಥ ಲಕ್ಷಣಾ ' ನಾನು ಆ ನನ್ನ ಶತ್ರುಗಳನ್ನು ಯಾವಾಗ ಜಯಿಸುವೆನು ? ಅಂದವಾದ ನಿಂತಂಬದಿಂದಲೂ, ಕಮಲದಂತೆ ವಿಸ್ತಾರ ವಾದ ಕಣ್ಣುಗಳಿಂದಲೂ ಶೋಭಿಸುವ ಅ ಸೀತೆಯನ್ನು, ತುಂಬಿದ ಭಾಗ್ಯ ಲಕ್ಷ್ಮಿಯನ್ನು ಪಡೆಯುವಂತೆ ಯಾವಾಗ ಪಡೆಯುವೆನು ? ರೋಗಿಯು ರ ಸಾಯನವನ್ನು ಕುಡಿಯುವಂತೆ ತಾವರೆಯಂತಿರುವ ಆಕೆಯ ಮುಖವನ್ನು ಸ್ವಲ್ಪವಾಗಿ ಮೇಲಕ್ಕೆತ್ತಿ, ತೊಂಡೆಯ ಹಣ್ಣಿನಂತಿರುವ ಆಕೆಯ ತುಟೆಯ ನ್ನು ನಾನು ಯಾವಾಗ ಪಾನಮಾಡುವೆನು ? * ಆ ನನ್ನ ಪ್ರಿಯೆಯು ಬಂ ದು ನನ್ನನ್ನು ಪ್ರೀತಿಯಿಂದಪ್ಪವಾಗ, ತಾಳೆಯ ಹಣ್ಣುಗಳಂತೆ ಉಬ್ಬಿ ಒತ್ತಾಗಿ ಬೆಳೆದ ಆಕೆಯ ಸ್ತನಗಳೆರಡೂ ನನ್ನ ಮೈಯನ್ನು ಯಾವಾಗ ಸೋಕುವುವು ? ನನ್ನ ಸ್ನೇ ದಿಕ್ಕಾಗಿ ನಂಬಿದ್ದ ಆ ನೀಲಲೋಚನೆಯು, ಈಗ ರಾಕ್ಷಸರ ಕೈಯಲ್ಲಿ ಸಿಕ್ಕಿಬಿದ್ದು, ಹೀಗೆ ನಾನು ಬದುಕಿರುವಾಗಲೂ ಅನಾ ಥೆಯಂತೆ ದಿಕ್ಕುಗಾಣದೆ ಕೂಗಿಡುವುದರಲ್ಲಿ ಸಂದೇಹವಿಲ್ಲ' ಹಾ ಕಷ್ಟವೆ ? ಜನಕರಾಜನಿಗೆ ಮಗಳಾಗಿ, ನನಗೆ ಕೈಹಿಡಿದ ಹೆಂಡತಿಯಾಗಿ, ದಶರಥರಾಜನಿ ಗೆ ಸೊಸೆಯೆನಿಸಿಕೊಂಡ ಆ ಸೀತೆಯ ಹೀಗೆ ಘೋರರಾಕ್ಷಸಿಯರ ನಡುವೆ ಮಲಗುವುದೆಂದರೇನು ? ಶರತ್ಕಾಲದಲ್ಲಿ ನೀಲಮೇಘಗಳನ್ನೊ ದರಿಕೊಂಡು ಹೊರಕ್ಕೆ ಬರುವ ಚಂದ್ರರೇಖೆಯಂತೆ, ಆ ಸೀತೆಯು ಯಾರಿಗೂ ಅಡ

  • 'ರಾಮನು ತಮ್ಮ ನಾದ ಲಕ್ಷಣನೊಡನೆ ಹೀಗೆ ತನ್ನ ಕಾಮಾವಸ್ಥೆಗಳನ್ನು ಹೇಳಿಕೊಳ್ಳುವದುಂಟ” ಎಂದರೆ, ಲಕ್ಷ್ಮಣನು ರಾಮನಿಗೆ ಸರೈ ವಿಧಸೇವಕನಾದದ ರಿಂಡ, ಅವನೊಡನೆ ಯಾವ ವಿಷಯವನ್ನು ಹೇಳುವುದೂ ಅನುಚಿತವಲ್ಲವೆಂದು ಗ್ರಾಹ್ಯವು