ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೨ ಶ್ರೀಮದ್ರಾಮಾಯಣವು - [ಸರ್ಗ. ೬. ಕಾಕ್ಯಗಳನ್ನು ನಡೆಸುವನೋ, ಯಾವನು ಕೇವಲಪುರುಷಪ್ರಯತ್ನ ವನ್ನೇ ನಂಬದೆ ದೈವದಮೇಲೆಯೂ ಭಾರವನ್ನು ಹೊರಿಸುವನೋ, ಅಂತವನು ಪುರುಷರಲ್ಲಿ ಉತ್ತಮನೆನಿಸುವನು ಯಾವನು ತಾನೊಬ್ಬನೇ ಕಾಕ್ಯಗಳನ್ನಾ ಲೋಚಿಸಿ, ತಾನೊಬ್ಬನೇ ಮನಃಪೂರಕವಾಗಿ ದೈವವನ್ನು ನಂಬಿ, ತಾನೊ ೭ನೇ ಸಿಂತು ಆ ಕಾಕ್ಯಗಳನ್ನು ನಡೆಸುವನೋ ಅವನು ಮಧ್ಯಮನು, ಯಾವನು ಮುಂದೆ ಬರಬಹುದಾದ ಗುಣದೋಷಗಳನ್ನೂ ನಿಶ್ಚಯಿಸಿಕೊ ಛದೆ, ದೈವವನ್ನೂ ನಂಬದೆ, ತಾನೊಬ್ಬನೇ ಕಾಠ್ಯವನ್ನು ನಡೆಸುವುದಕ್ಕೆ ಪ್ರಯತ್ನಿಸಿ, ಅದನ್ನೂ ಅಲಕ್ಷದಿಂದ ನಡೆಸುವನೋ ಅವನು ನರಾಧಮನು ಹೀಗೆ ಮನುಷ್ಯರಲ್ಲಿ ಮೂರುಭಾಗಗಳಿರುವಂತೆ ಮಂತ್ರಾಲೋಚನೆಗಳಲ್ಲಿ ಯ, ಉತ್ಸಮಾ ಧಮಮಧ್ಯಮಗಳೆಂಬ ಮೂರು ಭೇದಗಳುಂಟು ಮಂ ತ್ರಿಗಳೆಲ್ಲರೂ ಐಕಮತ್ಯದಿಂದಿದ್ದು, ಚನ್ನಾಗಿ ಶಾಸ್ತ್ರಜ್ಞಾನವನ್ನೂ ಹೋಂ ದಿ, ಮನಃಪೂಕವಾದ ಆಸಕ್ತಿಯಿಂದ ಯಾವ ಆಲೋಚನೆಯನ್ನು ನಡೆ ಸುವರೋ ಅದು ಉತ್ತಮಮಂತ್ರವೆನಿಸುವುದು ಒಂದು ಸಂಗತಿಯನ್ನು ನಿರ್ಣಯಿಸುವಾಗ ಮೊದಲೇ ಅನೇಕರು ಅನೇಕವಿಧವಾದ ಅಭಿಪ್ರಾಯಭೇ ದವುಳ್ಳವರಾಗಿ, ಕೊನೆಗೆ ಎಲ್ಲರೂ ಯಾವುದೋ ಒಂದುವಿಧದಿಂದ ಏಕಾಭಿ ಪ್ರಾಯಕ್ಕೆ ಬರುವರೋ ಅದು ಮಧ್ಯಮಮಂತ್ರವೆನಿಸುವುದು ಯಾವ ವಿಷಯದಲ್ಲಿ ಮಂತ್ರಿಗಳೊಬ್ಬೊಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನೆ ? ಮುಖ್ಯವಾಗಿಟ್ಟುಕೊಂಡು, ತಮ್ಮ ಹಟವನ್ನು ಬಿಡದೆ ವಾದಮಾಡುತ್ತ, ಪರ ಸ್ಪರಪ್ರೀತಿಯೂ ಇಲ್ಲದೆ,ಐಕಮತ್ಯದಲ್ಲಿಯೂ ದೃಷ್ಟಿಯಿಲ್ಲದಿರುವರೋ ಅವ ರಿಂದುಂಟಾದ ಆಲೋಚನೆಯು ಅಧಮಮಂತ್ರವೆನಿಸುವುದು. ಆದುದರಿಂದ ಬುದ್ಧಿವಂತರಾದ ನೀವೆಲ್ಲರೂ ಈ ವಿಷಯವನ್ನು ಐಕಮತ್ಯದಿಂದ ಚೆನ್ನಾಗಿ ಪಲ್ವಾಲೋಚಿಸಿ, ಮುಂದೆ ಯಾವುದು ಯುಕ್ತವೆಂಬುದನ್ನು ನಿಶ್ಚಯಿಸಿ ಹೇ ಛಬೇಕು. ಹೀಗೆ ನೀವೆಲ್ಲರೂ ಐಕಮತ್ಯದಿಂದ ನಿಶ್ಚಯಿಸಿದ ಕಾಕ್ಯವೇ ನನಗೆ ಅವಶ್ಯಕೃತ್ಯವು,ಅದನ್ನೇ ನಡೆಸಬೇಕೆಂಬುದೂ 'ನನ್ನ ಮುಖ್ಯಾಭಿಪ್ರಾಯವು. ಇನ್ನು ನಾವು ಸುಮ್ಮನೆ ಉದಾಸೀನರಾಗಿರುವುದು ಯುಕ್ತವಲ್ಲ. ರಾಮನು ಮಹಾವೀರರಾದ ಸಾವಿರಾರುಮಂದಿ ವಾನರರೊಡನೆ ನಮ್ಮ ಈ ಲಂಕೆಗೆ