ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧o೪ ಶ್ರೀಮದ್ರಾಮಾಯಣವು (ಸರ್ಗ ೭ ರೊಡಗೂಡಿ ಕೈಲಾಸಶಿಖರದಲ್ಲಿದ್ದ ಕುಬೇರನೊಡನೆಯೂ ದೊಡ್ಡ ಯು ದ್ಯವನ್ನು ಮಾಡಿ, ಅವನನ್ನು ನಿನ್ನ ಕೈವಶಮಾಡಿಕೊಂಡಿರುವೆ ? ಆ ಕುಬೇರ ನೋ ಈಶ್ವರಸಿಗೆ ಪರಮಮಿತ್ರನೆಂದು ಪ್ರಸಿದ್ಧನಾದವನು ' ಲೋಕಪಾ ಕಲನು ' ಮಹಾಬಲಾಡ್ಯನು ' ಅಂತಹ ಕುಬೇರನಕ್ಕೆ ನೀನು ಯುದ್ಧದಲ್ಲಿ ಜಯಿಸಿಬಂದವನಲ್ಲವೆ? ಮತ್ತು ನೀನು ಅಲ್ಲಿನ ಯಕ್ಷರನ್ನ ಗುಂಪಗುಂಪಾಗಿ ಹಿಡಿದುತಂದು, ಕೆಲವರನ್ನು ನಿಗ್ರಹಿಸಿ, ಕೆಲವರನ್ನು ಸೆರೆಹಿಡಿದು ಕೈಲಾಸ ಶಿಖರದಿಂದ ಪುಷ್ಪಕ ವಿಮಾನವನ್ನೂ ತಂದವನಲ್ಲವೆ? ಎಲೆ ರಾಕ್ಷಸೇಂದ್ರಸಿ ! ಪೂತ್ವದಲ್ಲಿ ದಾನವೇಂದ್ರನಾದ ಮಯನು, ನಿನ್ನ ಭಯಕ್ಕಾಗಿ ನಿನ್ನೊಡನೆ ಸ್ನೇಹವನ್ನು ಬಯಸಿ, ತನ್ನ ಮಗಳಾದ ಮಂಡೋದರಿಯನ್ನು ನನಗೆ ಕೊ ಟ್ಟು ಮದುವೆಮಾಡಲಿಲ್ಲವೆ ? ಪರಾಕ್ರಮದಿಂದ ಕೊಬ್ಬಿ, ಎಂತವರಿಗೂ ದುರ್ಜಯನೆನಿಸಿಕೊಂಡು, ನಿನ್ನ ತಂಗಿ ಕುಂಭೀನಸಿಗೆ ಪ್ರಿಯಪತಿಯಾದ ಮ ಧುವೆಂಬ ದಾನವೇಂದ್ರನನ್ನೂ ನೀನು ಯುದ್ಧದಲ್ಲಿ ಸಿಗ್ರಹಿಸಿ ಅವನನ್ನು ನಿನ್ನ ವಶಪಡಿಸಿಕೊಂಡವನಲ್ಲವೆ ? ಎಲೆ ಮಹಾಬಾಹೋ ! ಇದಲ್ಲದೆ ನೀನು ರಸಾತಲಕ್ಕೆ ಹೋಗಿ ಅಲ್ಲಿದ್ದ ವಾಸುಕಿಯನ್ನೂ , ತಕ್ಷಕನನ್ನ, ಶಂಖನನ್ನೂ ಜಟಿಯನ್ನೂ , ಇನ್ನೂ ಅವನಕಡೆಯ ಅನೇಕನಾಗರನ್ನೂ ಜಯಿಸಿ ವಶಪಡಿಸಿ ಕೊಂಡವನಲ್ಲವೆ ? ತುಂಡುತುಂಡಾಗಿ ಕಡಿದರೂ ತಿರುಗಿ ಮೇಲೆದ್ದು ಯುದ್ಧ ಕೈ ನಿಲ್ಲುವಂತೆ ವರವನ್ನು ಪಡೆದವರಾಗಿಯೂ, ನಾಶರಹಿತರಾಗಿಯೂ, ಬಲಾ ಢರಾಗಿಯೂ, ಶೂರರಾಗಿಯೂ ಇದ್ದ ಕಾಲಕೇಯರೆಂಬ ರಾಕ್ಷಸರ, ಸಿ. ನ್ಯೂ ಡನೆ ಒಂದುಸಂವತ್ಸರದವರೆಗೆ ಯುದ್ಧ ಮಾಡಿ ಕೊನೆಗೂ ಸಿನಗೆ ಸೋತು ನಿನ್ನ ವಶರಾದುದನ್ನು ಮರೆತುಬಿಟ್ಟೆಯಾ ? ಎಲೆ ರಾಜೇಂದ್ರನೆ ? ಇ ದಲ್ಲದೆ ಅವರಿಂದ ಸೀನು ಎಷ್ಟೊವಿಧಗಳಾದ ಮಾಯೆಗಳನ್ನೂ ತಿಳಿದು ಕೊಂಡಿರುವವನು ' ಬಲಾಡ್ಯರಾದ ಎಷ್ಟೋ ಮಂದಿ ದಿಕ್ಕಾಲಕರನ್ನೂ ಓದಿ ಸಿದವನು ' ದೇವಲೋಕಕ್ಕೆ ಹೋಗಿ ದೇವೇಂದ್ರನನ್ನೂ ಜಯಿಸಿಬಂದ ವನು ' ಶೂರರಾಗಿಯೂ, ಬಲಾಡ್ಯರಾಗಿಯೂ, ಚತುರಂಗಬಲಸಹಿತರಾಗಿ ಯೂ ಇದ್ದ ವರುಣಪುತ್ರರಕೂಡ ಯುದ್ಧದಲ್ಲಿ ನಿನ್ನಿಂದ ಪರಾಜಿತರಾಗಿ ರುವರು: ಮಹಾಪ್ರಭೂ' ಇವೆಲ್ಲವೂ ಹಾಗಿರಲಿ! ಯಮದಂಡವೆಂಬ ದೊಡ್ಡ