ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨20೫. ಸರ್ಗ ೭.} ಯುದ್ಧಕಾಂಡವು. ಮೊಸಳೆಯಿಂದಲೂ, ಶಾಲಿಯೆಂದು ಹೆಸರುಗೊಂಡ ಆಯುಧಗಳೆಂಬ ವೃ ಕಗಳಿಂದಲೂ, ಯಮಪಾಶವೆಂಬ ದೊಡ್ಡ ಅಲೆಗಳಿಂದಲೂ, ಯಮಕಿಂಕರ ರೆಂಬ ಕೋರಸರ್ಪಗಳಿಂದಲೂ ತುಂಬಿ, ಮಹಾಸಮುದ್ರದಂತಿದ್ಯ ಯಮ ನ ಸೈನ್ಯವನ್ನೂ ಕೂಡ ಸೀನು ಯುದ್ಧದಲ್ಲಿ ನಿರ್ಭಯವಾಗಿ ಪ್ರವೇತಿಸಿ, ಆ ಯಮವನ್ನೂ ಓಡಿಸಿ ದೊಡ್ಡಜಯವನ್ನು ಪಡೆದು ಬಂದವನಲ್ಲವೆ? ಮೊದಲು ನೀನು ನಡೆಸಿದ ಸ್ವಲ್ಪ ಯುದ್ಧದಿಂದಲೆ ಸಮಸ್ತಲೋಕಗಳೂ ನಡುಗಿಹೋ ಗಿರುವುವು ನೀನು ಹಿಂದೆ ಜಯಪ್ರಯಾಣಕ್ಕೆ ಹೊರಟಕಾಲದಲ್ಲಿಯೇ ಇಂದ್ರ ಸಿಗೆಣೆ ಯಾದ ಪರಾಕ್ರಮವುಳ್ಳ ಎಷ್ಟೊ ಮಂದಿ ವೀರಕ್ಷತ್ರಿಯರು ಈ ಸಮ ಸಭಮಿಯನ್ನೂ ಎಡೆಬಿಡದೆ ತುಂಬಿದ್ದರೆ, ಅವರಲ್ಲಿ ಯಾರೊಬ್ಬರೂ ಸಿನ ಮ್ಮ ಇದರಿಸಿ ನಿಲ್ಲಲಾರದೆ ಪರಾಜಿತ ರಾದರು ಈ ರಾಮನು ಪರಾಕ್ರಮ ದಲ್ಲಿಯಾಗಲಿ, ಗುಣದಲ್ಲಿ ಯಾಗಲಿ, ಉತ್ಸಾಹದಲ್ಲಿ ಯಾಗಲಿ, ಎಷ್ಟು ಮಾತ್ರ ವೂ ಅವರಿಗೆ ಸಮನಾ ಅಂತಹ ಕ್ಷತ್ರಿಯರನ್ನೆ ನೀನು ನಿನ್ನ ವೀರದಿಂದ ಕಂದು ಬಂದಿರುವಾಗ, ಈ ರಾಮನು ನಿನಗೆ ಎಷ್ಟು ಮಾತ್ರದವನು? ಆದುದ ರಿಂದ ಎಲೆ ಮಹಾರಾಜನೆ' ನೀನು ಇಸ್ಥೆಯೇ ಸುಮ್ಮನಿರು' ವ್ಯರ್ಥವಾಗಿ ಹೀ ಗೆ ಚಿಂತಿಸಿ ಶ್ರಮಪಡುವುದರಿಂದೇನು ? ಆ ಕಪಿಗಳಡಗಿಸುವುದಕ್ಕೆ ? ದೊ' ಮಹಾಬಾಹುವಾದ ಈ ಇಂದ್ರಜಿತೊಬ್ಬನೇ ಸಾಕು' ಈತನು ಪೂರೈ ದಲ್ಲಿ ಮಹೇಶ್ವರನನ್ನು ಕುರಿತು ಒಂದು ದೊಡ್ಡ ಯಜ್ಞವನ್ನು ಮಾಡಿ, ಬೇ ರೊಬ್ಬರಿಗೆ ದುರ್ಲಭವಾದ ವರವನ್ನು ಪಡೆದು ಬಂದಿರುವನು ಮತ್ತು ಈ ತನು ಶಕ್ತಿ ತೋಮರಗಳೆಂಬ ಮೀನುಗಳಿಂದಲೂ, ಕಿತ್ತುಬಿದ್ದ ನರಗಳೆಂಬ ಪಾಚಿಯಿಂದಲ, ಆನೆಗಳೆಂಬ ದೊಡ್ಡ ಆಮಗಳಿಂದಲೂ, ಕುದುರೆಗ ಳೆಂಬ ಕಪ್ಪೆಗಳಿಂದಲೂ, ರುದ್ರಾದಿತ್ಯರೆಂಬ ದೊಡ್ಡ ಮೊಸಳೆಗಳಿಂದಲೂ, ಮರತ್ತುಗಳೆಂದೂ, ವಸುಗಳಂದೂ ಪ್ರಸಿದ್ಧರಾದ ದೇವತೆಗಳೆಂಬ ಮಹಾ ಸಕ್ಷಗಳಿಂದಲೂ, ರಥಗಜತುರಗಗಳೆಂಬ ಜಲಸಮೂಹಗಳಿಂದಲೂ, ಕಾಲಾಗಿ ಳುಗಳೆಂಬ ದೊಡ್ಡಮಳಲುದಿಣ್ಣೆಗಳಿಂದಲೂ ಕೂಡಿದ ದೇವಸೈನ್ಯವೆಂಬ ಮಹಾಸಾಗರವನ್ನೂ ಪ್ರವೇಶಿಸಿ, ಅಲ್ಲಿ ದೇವೇಂದ್ರನನ್ನು ಹಿಡಿದುಬಂಧಿಸಿ ನಮ್ಮ ಲಂಕೆಗೆ ತಂದಿಟ್ಟವನಲ್ಲವೆ? ಎಲೆ ರಾಜನೆ ' ಆಗ ಬ್ರಹ್ಮನ ಮಾತಿನಂತೆ 133