ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೧೮ ಶ್ರೀಮದ್ರಾಮಾಯಣವು | [ಸರ್ಗ, ೧೧ ಮೇಫುಗರ್ಜನದಂತೆ ಮೊರೆಯುತ್ತಿರುವ ರಥಚಕ್ರ ಧ್ವನಿಯೊಡನೆ ಮಂತ್ರಸ ಭೆಗೆ ಹೊರಟನು ಅನೇಕಾನೇಕರಾಕ್ಷಸಯೋಧರೂ ಅವನೊಡನೆ ಹೊರಟ ರು, ಕೆಲವರು ಕತ್ತಿಗಳನ್ನೂ, ಕೆಲವರು ಗುರಾಣಿಗಳನ್ನೂ , ಇನ್ನು ಕೆಲವರು ಬೇರೆ ಆಯುಧಗಳನ್ನೂ ಹಿಡಿದು ಮುಂದೆ ನಡೆದರು ರಥದ ಹಿಂದೆಯ, ಪ ಕ್ಯಗಳಲ್ಲಿಯೂ ವಿಕಾರವಾದ ನಾನಾವೇಷಭೂಷಣಗಳುಳ್ಳ ಅನೇಕರಾಕ್ಷಸ ರು ಸುತ್ತಿ ಬರುತಿದ್ದರು ಅತಿರಥರಾದ ಕೆಲವು ರಾಕ್ಷಸರು ರಥಾರೂಢರಾಗಿಬಂ ದರು ಹಾಗೆಯೇ ಕೆಲವರು ಮದದನಗಳನ್ನೂ,ಬೇರಕಲವರು ಚಿತ್ರಗಮವ ವುಳ್ಳ ಕುದುರೆಗಳನ್ನೂ ಏರಿ ರಾವಣವನ್ನು ಹಿಂಬಾಲಿಸಿದರು ಮತ್ತೆ ಕೆಲವರು ಗದೆಗಳನ್ನೂ ಕೆಲವರು ಸುಘಗಳನ್ನೂ ಕೆಲವರು ಶಕ್ಯಾ ಯುಧಗಳನ್ನೂ , ಕೆಲವರು ತೋಮರಗಳನ್ನೂ, ಕೆಲವರು ಗಂಡುಗೊಡಲಿಗಳನ್ನೂ, ಕಲವ ರು ಶೂಲಗಳನ್ನೂ ಹಿಡಿದು ಬರುತಿದ್ದರು ಹಿಂಗೆ ರಾವ ಇನು ಸಭಾಸ್ಥಾನಕ್ಕೆ ಹೆರಟಾಗ, ಸಾವಿರಾರುವಾದ್ಯಗಳು ಮಹಾಧ್ವಸಿಯಿಂದ ವೆಳಗುತಿ ದ್ಯು ವು ಶಂಖಗಳು ಮಡಿಸಲ್ಪಡುತ್ತಿದ್ದುವು ರಾವಣನು ರಾಜಮಾರ್ಗದಲ್ಲಿ ಬರುತ್ತಿ ರುವಾಗ ಅವನ ಮಹಾರಥದ ಚಕ್ರ ಧ್ವನಿಯೆ, ನಾನಾ ದಿಕ್ಕುಗಳಲ್ಲಿಯ, ಪ್ರತಿಧ್ವಸಿಯನ್ನು ಹೊರಡಿಸುವಂತೆ ಮೊಳಗುತಿತ್ತು ರಥದಮೇಲೆ ರಾಜ ಕಿ ಹ್ನ ವಾಗಿ ಹಿಡಿದ ಶ್ವೇತಚ್ಛತ್ರವು ಪೂರ್ಣಚಂದ್ರನಂತೆ ಶೋಭಿಸುತಿತ್ತು ಆತನ ಎಡಬಲಪಕ್ಕಗಳಲ್ಲಿ ಸುವರ್ಣಸೂತ್ರದಿಂದ ಬಿಗಿಯಲ್ಪಟ್ಟು ಶುರ ಸ್ಪಟಿಕದಂತೆ ಸ್ವಚ್ಛವಾದ ಎರಡುಚಾಮರಗಳು ಶೋಭಿಸುತ್ತಿದ್ದವು ರಾವಣನು ಬಯವಾಗ, ಅಲ್ಲಲ್ಲಿ ರಾಕ್ಷಸರು ಕೈಜೋಡಿಸಿ ಮುಂದೆ ಸಿತು ಆ ತನಿಗೆ ತಲೆಬಗ್ಗಿ ನಮಸ್ಕರಿಸುತಿದ್ದರು ಕೆಲವರು ಜಯವನ್ನು ಹೆಳು ತಿದ್ದರು ಕೆಲವು ವೃದ್ದರಾಕ್ಷಸರು ಆತೀದ್ವಚನಗಳನ್ನು ಹೆಳುತಿದ್ದರು ಹೀಗೆ ಸಮಸರಾಕ್ಷಸರಿಂದ ಸ್ತುತಿಸಲ್ಪಡುತ್ಯ ರಾವಣನು ತನ್ನ ಸಭಾಣ್ಣಾ ನವನ್ನು ಸೇರಿದನು ಆ ಸಭಾಸ್ಥಾನದಲ್ಲಿಯೋ ನಡುನಡುವೆ ಚಿನ್ನ ಬೆಳ್ಳಿ, ಯ ಕಂಬಗಳು : ಶುದ್ಧಸ್ಸJಕಮಯವಾದ ನೆಲಗಟ್ಟುಗಳು ! ಅವುಗಳಮೇಲೆ ಬಂಗಾರದ ಸರಿಗೆಗಳಿಂದ ಚಿತ್ರಕೆಲಸಮಾಡಲ್ಪಟ್ಟ ಪಟ್ಟೆ ಮಡಿ ಯ ದಿವ್ಯಾ ಸನಗಳು' ಹೀಗೆ ಮಹಾವೈಭವದಿಂದ ಕೂಡಿ, ಸಾಕ್ಷಾದ್ವಿಶ್ವಕರ್ಮವಿಂದ