ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೧] ಯುದ್ಧಕಾಂಡವು. ೨೧೧೯ ನಿರ್ಮಿತವಾಗಿ, ಆರುನೂರು ಮಂದಿ ಘೋರಪಿಶಾಚಗಳಿಂದ ರಕ್ಷಿತವಾದ ತನ್ನ ಸಭಾಸ್ಥಾನವನ್ನು ಪ್ರವೇಶಿಸಿ ಅಲ್ಲಿ ವೈಡೂಲ್ಯಮಯವಾಗಿಯೂ, *ಪ್ರಿ ಯಕಮೃಗದ ಚರ್ಮದಿಂದ ಹೊದ್ದಿಸಲ್ಪಟ್ಟುದಾಗಿಯೂ, ಅಂದವಾದ ದಿಂಬುಳ್ಳುದಾಗಿಯೂ ಇದ್ದ ತನ್ನ ಸಿಕ್ಕಾಸನವನ್ನೇರಿ ಕುಳಿತನು ಆಮೇಲೆ ರಾವಣನು ಅಲ್ಲಿ ವೇಗಾಲಿಗಳಾದ ಕೆಲವು ರಾಕ್ಷಸದೂತರನ್ನು ಕರೆದು, ತನ್ನ ಅಧಿಕಾರದರ್ಪಕ್ಕೆ ತಕ್ಕ ಮಾತಿನಿಂದ ಅವರನ್ನು ಕುರಿತು, ( ಎಲೆ ದತರೆ ! ಈಗ ನಾವು ಮಹಾಪ್ರಯತ್ನದಿಂದ ನಿರ್ವಹಿಸಬೇಕಾದ + ದೊ ಡಕಾರವೂಂಡಿರುವುದು ಈ ಪಟ್ಟಣದಲ್ಲಿರುವ ಸಮಸ್ತರಾಕ್ಷಸರನ್ನೂ ಈ ಕ್ಷಣವೇ ನನ್ನ ಕೈಗೆ ಕರೆತರಬೇಕು”ಎಂದು ಈ ಮಾತನ್ನು ಕೇಳಿದೊಡನೆ ರಾಕ್ಷಸದೂತರಲ್ಲರೂ ಆ ಪಟ್ಟಣದಲ್ಲಿ ಮನೆಮನೆಗೆ ತಿರುಗಿ, ಅಲ್ಲಲ್ಲಿನ ವಿಹಾ ರಸ್ಥಳಗಳಲ್ಲಿಯೂ, ಶಯನಗೃಹಗಳಲ್ಲಿಯೂ ಉದ್ಯಾನಗಳಲ್ಲಿ ಯೂ, ವಿಹ ಲಸ.ತಿದ್ದ ಒಬ್ಬೊಬ್ಬ ನ್ಯಾಕ್ಷಸನನ್ನೂ ನೋಡಿ ಸಿರ್ಭಯವಾಗಿ ಅವರಿಗೆ ರಾ ಜಞ್ಚ ಯನ್ನು ತಿಳಿಸುತ್ತ ಬಂದರು ಈ ರಾಜಾಜ್ಞೆಯನ್ನು ಕೇಳಿದೊಡನೆ ಆ ಪ್ರವಾಸಿಗಳಾದ ಸಮಸ್ತರಾಕ್ಷಸರೂ ಅಲ್ಲಿಂದ ರಾವಣ ಸಭೆಗೆ ಹೊರ ವರು ಕೆಲವರು ರಥಗಳನ್ನೆರಿ ಬಂದರು ಕೆಲವರು ಕುದುರೆಗಳನ್ನೇರಿ ಬಂ ದರು ಕೆವರು ಆನೆಗಳನ್ನೇರಿ ಹೊರಟರು ಕಲವರು ಕಾಲುನಡೆಯಿಂದಲೇ ಬಂದೆ ಸರಿದರು ಹೀಗೆ ಭಗಜತುರಗಾಮಿಗಳಿಂದ ತುಂಬಿದ ಆ ಪರಪ್ಪ ದೇಶವೆಲ್ಲವೂ, ಸಕ್ಷಿಗಳಿಂದ ನಿಬಿಡವಾದ ಆಕಾಶದಂತೆ ಕಾಣುತಿತ್ತು ಆ ರಾಕ್ಷಸು ಪಲ್ಲಕ್ಕಿ ಮೊದಲಾದ ಪ್ರಯಾಣಸಾಧನಗಳಿಂದ, ಆನೆ ಕು ದುರೆ ಮೊದಲಾದ ವಾಹನಗಳಿಂದಲೂ, ಆ ಸಭಾದ್ಯಾರದವರೆಗೂ ಬಂದು, ತಮ್ಮ » ಹನಗಳನ್ನು ಅಲ್ಲಿಯೇ ಹೊರಗೆ ನಿಲ್ಲಿಸಿ, ಸಹ್ಮಗಳು ಪತಗುಹೆಯ

  • ಪ್ರಿಯಕಮ್ರಗವೆಂದರೆ, ನುಣುವಾಗಿಯೂ, ಮೃದುವಾಗಿಯೂ ಇರುವ ಕೂದಲುಳ್ಳ ಒಂದು ಜಾತಿಯ ಮೃಗವು

- F ಇಲ್ಲಿ ಬಹಳ ದೊಡ್ಡ ಕಾರವೆಂದು ಹೇಳಿದುದರಿಂದ, ರಾವಣನು ಚಾರರ ಮೂಲಕವಾಗಿ ರಾಮಾದಿಗಳು ಸಮುದ್ರತೀರಕ್ಕೆ ಬಂದಿರುವುದನ್ನು ಆಗಲೇ ತಿಳಿದು ಕೊಂಡಿರುವುದಾಗಿ ಸಚಿತವು.