ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೦ ಶ್ರೀಮದ್ರಾಮಾಯಣವು [ಸರ್ಗ ೧೧. ನ್ನು ಪ್ರವೇಶಿಸುವಂತೆ ಕಾಲುನಡೆಯಿಂದಲೇ ಸಭೆಯನ್ನು ಪ್ರವೇಶಿಸಿದರು. ಈ ಸಮಸ್ಯರಾಕ್ಷಸರೂ ಅಲ್ಲಿ ಮೊದಲು ರಾವಣನ ಪಾದಗಳನ್ನು ಹಿಡಿದು ನ ಮಸ್ಕರಿಸಲು, ರಾಕ್ಷಸೇಂದ್ರನೂ ಅವರೆಲ್ಲರನ್ನೂ ಯಥೋಚಿತವಾಗಿ ಮನ್ನಿ ಸಿದನು ಆಮೇಲೆ ರಾಜಾಜ್ಞೆಯಿಂದ ಅವರಲ್ಲಿ ಹಲವರು ಪಿರಗಳಲ್ಲಿಯೂ, ಶೋತ್ರಿಯರಾದ ಕೆಲವರು ದರ್ಭಾಸನಗಳಲ್ಲಿಯೂ, ಸಾಮಾನ್ಯರಾದ ಕೆ ಲವರು ಬರಿ-ನೆಲದಲ್ಲಿಯೂ ತಮ್ಮ ತಮ್ಮ ಸ್ಥಿತಿಗೆ ತಕ್ಕಂತೆ ಕುಳಿತರು ಹೀಗೆ ರಾಜಾಜ್ಞೆಗೆ ಬದ್ಧರಾಗಿ ಬಂದ ಲಂಕಾಸಿವಾಸಿಗಳೆಲ್ಲರೂ ತಮ್ಮ ತಮ್ಮ ಗೌ ರವಕ್ಕೆ ತಕ್ಕಂತೆ,ರಾವಣನ ಸುತ್ತಲೂ ಸೇರಿದರು ಮತ್ತು ಅಲ್ಲಿ ಕಾರಾಕಾರ ಗಳನ್ನು ನಿಶ್ಚಯಿಸುವುದರಲ್ಲಿ ನಿಪುಣರಾಗಿಯೂ, ಪ್ರಮುಖರಾಗಿಯೂ ಇರುವೆ ಕೆಲವು*ಮಂತ್ರಿಗಳೂ, ಗಣಾಡ್ಯರಾಗಿಯೂ, ವ್ಯವಹಾರಗಳನ್ನು ಚೆನ್ನಾಗಿ ಬಲ್ಲವರಾಗಿಯೂ, ಸೂಕ್ಷ್ಮ ಬುದ್ಧಿಯುಳ್ಳವರಾಗಿಯೋ ಇದ್ಯ ಅಮಾತ್ಯರೂ ನೂರಾರುಮಂದಿ ಸೇರಿದ್ದರು ಸುವರ್ಣಕಾಂತಿಯಿಂದ ಮನೋಹರವಾದ ಆ ರಾಕ್ಷಸೇಂದ್ರನ ಮನೆಯಲ್ಲಿ ರಾವಣ ಕ್ಷೇಮವನ್ನು ವಿಚಾರಿಸುವುದಕ್ಕಾಗಿ ಇನ್ನೂ ಅನೇಕಮಂದಿ ಶೂರರ, ಗುಂಪುಗುಂಪಾಗಿ ಬಂದು ಸೇರಿದ್ದ ರು ಈ ಸಮಸ್ಯೆ ರಾಕ್ಷಸರೂ ರಾವಣನನ್ನು ಸುತ್ತಿ ಕುಳಿತಿರಲು, ಇಷ್ಟರ ಲ್ಲಿ ಮಹಾತ್ಮನಾದ ವಿಭೀಷಣನೂ ಬಂಗಾರದಿಂದ ಚಿತ್ರಕೆಲಸಮಾಡಲ್ಪ ಟ್ಯ ಸರೊತ್ತಮವಾದ ಒಂದು ದೊಡ್ಡ ರಥವನ್ನೇರಿ ರಾವಣನ ಸಭೆಗೆ ಬಂದು ಸೇರಿದನು ಅಲ್ಲಿ ವಿಭೀಷಣನು ತನ್ನಣ್ಣನಾದ ರಾವಣನ ಪಾದಗಳ ನ್ನು ಹಿಡಿದು ತನ್ನ ಹೆಸರನ್ನು ಹೇಳಿ ನಮಸ್ಕರಿಸಿದನು ಹಾಗೆಯೇ ಶುಕನೂ, ಪ್ರಹಸನೂ ಮುಂದೆ ಬಂದು ರಾವಣಸಿಗೆ ನಮಸ್ಕರಿಸಿದರು ಆ ಮೂ ವರನ್ನೂ ರಾವಣನು ಯಥೋಚಿತವಾಗಿ ಮನ್ನಿಸಿ, ಅವರಿಗೆ ತಕ್ಕ ಆಸನಗ ಳನ್ನು ಕೊಟ್ಟು ಕುಳ್ಳಿರಿಸಿದನು ಆ ಸಭೆಯಲ್ಲಿ ನಾನಾರತ್ನ ಖಚಿತಗಳಾದ ಸುವರ್ಣಾಭರಣಗಳನ್ನು ಧರಿಸಿ, ಉತ್ತಮವಸ್ತ್ರಗಳನು ಟ್ಟು, ಮೇಲಾದ ಆಗರುಚ೦ದನಗಳನ್ನು ಪೂಸಿ, ಸುಗಂಧಪುಷ್ಪಗಳನ್ನು ಧರಿಸಿದ್ದ ರಾಕ್ಷಸರೆ

  • ಇಲ್ಲಿ ಮಂತ್ರಿಗಳೆಂದರೆ ಬುದ್ಧಿ ಸಹಾಯರೆಂದೂ, ಅಮಾತ್ಯರೆಂದರೆ ಕಾವ್ಯ ಸಹಾಯರೆಂದೂ ಭೇದವನ್ನು ಗ್ರಹಿಸಬೇಕು.