ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೭ ] ಯುದ್ಧಕಾಂಡವು. ೨೧೩೨ ದು ಕಾಲದಲ್ಲಿ, ನಾನು ಗಗನಚಾರಿಯಾಗಿ ಹೋಗುತಿದ್ದೆನು * ಆಗ ಪಂಜಿಕ ಸ್ಥಳಿಯೆಂಬ ಅಪ್ಪರಸಿಯು ಬ್ರಹ್ಮ ಸಭೆಗೆ ಹೋಗುತ್ತ, ದಾರಿಯಲ್ಲಿ ನನ್ನನ್ನು ಕಂಡಳು ಅಗ್ನಿ ಜ್ವಾಲೆಯಂತೆ ಬೆಳಗುತಿದ್ದ ಆಕೆಯು ನನ್ನ ಫೆರರೂಪವ ನ್ನು ಕಂಡೊಡನೆ ಭಯದಿಂದ ಹಿಂದಕ್ಕೆ ಸರಿದಳು ನನಗಾದರೋ ಅವಳನ್ನು ಕಂಡೊಡನೆ ಕಾಮಾತುರವು ಹುಟ್ಟಿತು ಆಗಲೇ ನಾನು ಅವಳನ್ನು ಬಲಾ ತಾರದಿಂದ ಹಿಡಿದು, ಅವಳ ಬಟ್ಟೆಯನ್ನೆಳೆದು, ಅವಳೊಡನೆ ಭೋಗಿಸಿದೆನು ಆಕೆಯು ಹೀಗೆ ನನ್ನಿ cದ ಭಂಗಹೊಂದಿ, ಕಂಬದ ಕಮಲಿನಿಯಂತೆ ಕೂರು ಗುತ್ತ ಬ್ರಹ್ಮ ದೇವನ ಬಳಿಗೆ ಹೋದಳು ಆ ಸಂಗತಿಯು ಆಗಲೇ ಮಹಾತ್ಮ ನಾದ ಬ್ರಹ್ಮನಿಗೂ ತಿಳಿದಂತಿದೆ ಆಗ ಬ್ರಹ್ಮನು ನನ್ನ ಮೇಲೆ ಬಹಳವಾಗಿ ಕೋಪಗೊಂಡು ನನ್ನನ್ನು ಕರೆದು, “ ರಾವಣ ! ಇದು ಮೊದಲುಗೊಂಡು ನೀನು ಬೇರೆ ಯಾವ ಪರಸ್ಥಿಯನ್ನಾಗಲಿ ಬಲಾತ್ಕಾರದಿಂದ ಭೋಗಿಸಿದ ಪಕ್ಷದಲ್ಲಿ, ಆಗಲೆ ಸಿಕ್ಕ ತಲೆಯ ನೂರಭಾಗವಾಗಿ ಭೇದಿಸಿಹೋಗುವುದು ಇದರಲ್ಲಿ ಸಂದೇಹವಿಲ್ಲ ! " ಎಂದು ಶಪಿಸಿರುವನು ಈ ಶಾ ಪದ ಭಯ ಹಿಂದಲೇ ನನ ನು ಸೀತೆಯನ್ನು ಇದುವರೆಗೂ ಬಲಾತ್ಕಾರದಿಂದ ನನ್ನ ಹೆ? ಸಿಗೆಯನ್ನೇರಿಸದೆ ಬಿಟ್ಟಿರುವೆನು ಇದುಹೊರತು ನನಗೆ ಬೇರೆ ಭಯವಿಲ್ಲ! ವ ನಗಾದರೋ ಸಮುದ್ರದಂತೆ ವೇಗವೂ, ವಾಯುವಿನಂತೆ ಶೀಘ್ರಗತಿಯೂ ಇರುವುದು ಇದೊಂದೂ ಧಮನಿಗೆ ತಿಳಿಯದು ಅದರಿಂದಲೇ ರಾಮನು ವು ಮಮಹೇಶ್ವರ ತೀರರ ೨ ) ಅಥವಾ “ಎಲೈ ರಾವಣನೆ ಬೇರೆ ಯಾರಲ್ಲಿಯಾದರೂ ನೀನು ಕುಕ್ಕು ಟವೃತ್ತಿಯನ್ನ ವಲಂಬಿಸು : ಸೀತೆಯನ್ನಾದರೋ (ಬಲಾತಭುಕ್ಷ) ನಿನ್ನ ಬಲದಿಂದ ಚೆನ್ನಾಗಿ ರಕ್ಷಿಸುತ್ತಿರು” ಎಂದು ವಾಸ್ತವಾರ್ಥವು ಗೋವಿಂದ ರಾಜರು

  • ರಾವಣನಿಗೆ ಇದಕ್ಕೆ ಮೊದಲೇ ರಂಭೆಯನಿಮಿತ್ತವಾಗಿ ನಳಕೂಬರನಿಂದ ಪ್ರಾಪ್ತ ವಾದ ಶಾಪವಿದ್ದರೂ, ಆ ನಲಕಬರನು ಪ್ರಾಕೃತದೇವತೆಯಾದುದರಿಂದ, ಅದನ್ನು ಲಕ್ಷ್ಮದಲ್ಲಿಡದ, ಆಮೇಲೆ ತನಗೆ ಬ್ರಹ್ಮ ನಿಂದುಂಟಾದ ಈ ಶಾಪವನ್ನೇ ನಿರ್ದೇಶಿಸಿ, ಪಿತಾಮಹವಾಕ್ಯವಾದುದರಿಂದ ಅದನ್ನು ಮಾತ್ರ ತಾನು ಮೀರಿನಡೆಯುವುದಕ್ಕಿಲ್ಲವೆಂ ದು ಹೇಳಿದುದಾಗಿ ಗ್ರಾಹ್ಯವು