ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೮೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೮ ಶ್ರೀಮದ್ರಾಮಾಯಣವು [ಸರ್ಗ ೧೫. ದಹಾಗೆ ನುಡಿಯುವಂತಿದೆ' ನಿನ್ನ ಹೆತ್ತ ತಂದೆಯಾದ ಈ ರಾವಣನಿಗೆ, ಮುಂದೆ ರಾಮನಿಂದ ಬರಬಹುದಾದ ವಿನಾಶವನ್ನು ನನ್ನ ಬಾಯಿಂದ ಸ್ಪಷ್ಟವಾಗಿ ಕೇಳಿಯೂ, ಅಜ್ಞಾನದಿಂದ ನೀನು ಅದನ್ನು ತಿಳಿದುಕೊಳ್ಳದೆ ದುರಾರ್ಗಕ್ಕೇ ಅನುಮೋದಿಸುತ್ತಿರುವೆಯಲ್ಲಾ ' ಛೇ ! ನೀನು ಪುತ್ರನೆಂಬ ಹೆಸರಿಟ್ಟುಕೊಂ ಡು, ಹಿತನಂತೆ ನಟಿಸುವ ಶತ್ರುವೇಹೊರತು ನಿಜವಾಗಿ ರಾವಣನಿಗೆ ಮಗ ನಲ್ಲ ' ಹೀಗೆ ತಂದೆಯ ವಿನಾಶಕ್ಕಾಗಿ ಪ್ರಯತ್ನಿಸಿರುವ ಈ ನಿನ್ನ ದುರ್ಬಡ್ಡಿ ಗಾಗಿ ನಿನ್ನನ್ನು ಮಾತ್ರವೇ ಶಿಕ್ಷಿಸಿ ಫಲವಿಲ್ಲ ಏನೂ ತಿಳಿಯದ ಹುಡುಗನಾ ಗಿಯೂ, ಹಟವಾದಿಯಾಗಿಯೂ, ಹಿಂದುಮುಂದುನೋಡದೆ ಸಾಹಸ ಕಾಕ್ಯಗಳಿಗೆ ತಲೆಯಿಕ್ಕುವ ಆತುರಸ್ವಭಾವವುಳ್ಳವನಾಗಿಯೂ ಇರುವ ನಿನ್ನ ನ್ನು ಕರತಂದು, ಈ ಮಂತ್ರಾಲೋಚನೆಯ ಸಭೆಯಲ್ಲಿ ಸೇರಿಸಿದವರಾರೊ ಅವರನ್ನೆ ಮೊದಲು ವಧಿಸಬೇಕು ' ಸೀನೋ ಏನೂ ತಿಳಿಯದ ಮೂಢನು ! ತಾನೇ ಸರೂಜ್ಯನೆಂಬ ಗವು ಮಾತ್ರ ನಿನ್ನಲ್ಲಿ ಪೂರ್ಣವಾಗಿರುವುದು ನಿನ್ನಲ್ಲಿ ಸ್ವಲ್ಪವಾದರೂ ವಿನಯವೆಂಬುದೇ ಇಲ್ಲ ಕ್ರೂರಸ್ವಭಾವವುಳ್ಳವನು? ಅಲ್ಪಬುದ್ಧಿಯುಳ್ಳವನು ' ದುರಾತ್ಮನು ' ಮೂರ್ಖನು ' ಮಹಾದುರ್ಬು ಬೈಯುಳ್ಳವನು ' ಹುಡುಗುತನದಿಂದಲೇ ಈ ಮಾತುಗಳನ್ನಾಡುತ್ತಿರುವೆ | ಬ್ರಹ್ಮದಂಡ ನಂತೆ ದೇದೀಪ್ಯಮಾನಗಳಾಗಿಯೂ, ಮೃತ್ಯುವಿನಂತೆ ಭಯಂಕ ರಗಳಾಗಿಯೂ, ಯಮದಂಡಕ್ಕೆ ಸಮಾನಗಳಾಗಿಯೂ ಇರುವ ರಾಮನ ಬಾ ಣಗಳನ್ನು ಯುದ್ಧದಲ್ಲಿ ತಡೆದು ನಿಲ್ಲುವನಾವನು” ಎಂದು ಹೇಳಿ ರಾವಣನ ಕಡೆಗೆ ತಿರುಗಿ ( ಎಲೆರಾಜನೆ' ಈಗಲೂ ನನ್ನ ಹಿತವಾದವನ್ನು ಕೇಳು ' ನಮ್ಮ ಲ್ಲಿರುವ ಧನಗಳನ್ನೂ, ಉತ್ತಮವಸ್ತುಗಳನ್ನೂ, ಆಭರಣಗಳನ್ನೂ , ದಿವ್ಯ ವಸ್ತ್ರಗಳನ್ನೂ, ವಿಚಿತ್ರರತ್ನಗಳನ್ನೂ, ಸೀತಾದೇವಿಯ ಸಹಿತವಾಗಿ ಈಗಲೇ ರಾಮನಿಗೊಪ್ಪಿಸಿ ಬಾ' ಆಮೇಲೆ ನಿರ್ಭಯವಾಗಿ ಇಲ್ಲಿ ನಾವು ಸುಖದಿಂದಿರ ಬಹುದು ” ಎಂದನು ಇಲ್ಲಿಗೆ ಹದಿನೈದನೆಯ ಸರ್ಗವು