ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೬ ] ಯುದ್ಧಕಾಂಡವು ೨೧೩೯ ರಾವಣನು ವಿಭೀಷಣನನ್ನ ವಮಾನಿಸಲು ಅವ ನು ತನ್ನ ನಾಲ್ಕು ಮಂತ್ರಿಗಳೊಡನೆ ಆಕಾಶಕ್ಕೆ ಹಾರಿ, ಆಗಲೂ ಮತ್ತೊಮ್ಮೆ ರಾವಣನಿಗೆ ಬುದ್ದಿವಾದವನ್ನು ಹೇಳಿದುದು * ಹೀಗೆ ವಿಭೀಷಣನು ರಾವಣನ ಮನಸ್ಸಿಗೆ ಚೆನ್ನಾಗಿ ಹಿಡಿಯುವಂತೆ ಹಿತವಾಕ್ಯಗಳನ್ನು ಹೇಳಿದರೂ, ಮೃತ್ಯುವಶನಾದ ರಾವಣನು ಅವುಗಳೊಂ ದನ್ನೂ ಗಮನಿಸದೆ, ಅವನ ಮಾತಿಗೆ ಇನ್ನೂ ಕೋಪಗೊಂಡು, ಪರಷವಾ

  • ಇಲ್ಲಿ 'ಸುನಿವಿಷ್ಟಂ ಹಿತಂ ವಾಕ್ಯಮುಕ್ತವಂತಂ ವಿಭೀಷಣಂ | ಅಬ್ರವೀತ್ಸರು ಷಂ ವಾಕ್ಯಂ ರಾವಣ ಕಾಲಚೋದಿತ &” ಎಂದ ಮಲತ್ರ ವಿಶೇಷಾರವು -.(ಸು ನಿವಿಷ್ಟಂ) ಕೇಳುತ್ತಿರುವಾಗಲೇ ಅರ್ಥಸೂರ್ತಿಯಾಗದಿದ್ದರೂ,ಅತಿಪ್ರೀತಿಕರವಾಗು ವಂತೆ ಅಂದವಾದ ಸನ್ನಿವೇಶವುಳುದು, ಎಂದರೆ ಅರ್ಥವು ಅನಿಷ್ಟವಾಗಿ ತೋರಿದರೂ ಕಿವಿಯಿಂದ ಕೇಳುವುದಕ್ಕೆ ಇಂಪಾದ ಮಾತೆಂದು ಭಾವವು (ಹಿತಂ, ಕಿವಿಗಿಂವಾದುದು ಮಾತ್ರವೇ ಅಲ್ಲ! ಪಥ್ಯವಾಗಿಯೂ ಇರುವುದು, (ವಾಕ್ಯ೦) ಪರಿಪೂರ್ಣಾರ್ಥವನ್ನು ಕೂ ಡುವುದೇ ವಾಕ್ಯವೆನಿಸುವು ದರಿಂದ, ಹೇಳಬೇಕಾದ ಹಿತೋಪದೇಶವೆಲ್ಲವೂ ಇದರಲ್ಲಿ ವೂರ್ಣವಾಗಿ ತುಂಬಿರುತ್ತವೆಂದು ಭಾವವು ಇಂತಹ ವಾಕ್ಯವನ್ನು (ಉಕ್ವಂತ೦ ಹೇ ಆದವನನು , 'ನಾಸಂವತ್ಸರವಾಸಿನೇ ಬಯಾತ್” ಎಂಬಂತೆ, ಆಚಾರನು ತನ್ನಲ್ಲಿಗೆ ಬಂದು ವಾದಗಳಲ್ಲಿ ಬಿದ್ದವರಿಗೆ ಮಾತ್ರವೇ ಹೇಳಬೇಕಾದ ನೀತಿಯನ್ನೂ ಕೂಡ ಈ ರಾವಣನ ದುರ್ಗತಿಯನ್ನು ನೋಡಿ ಸಹಿಸಲಾರದೆ ತಾನೇ ಮರುಕದಿಂದ ಒಂದು ಹೇಳಿದವನನ್ನು (ವಿಭೀಷಣಂ)ಬೇರೆ ಯಾವನಾದರೂ ದೂರಸ್ಸನೊಬ್ಬನು ಈ ಮಾತ ನ್ನು ಹೇಳಿದ್ದ ಪಕ್ಷದಲ್ಲಿಯಾದರೂ, ಒಂದುವೇಳೆ ಅದು ಆಪ್ತವೋ ಅಲ್ಲವೋ ಎಂದು ಸಂದೇಹಿಸಿ ಬಿಟ್ಟುಬಿಡಬಹುದು, ಸಾಕ್ಷಾತ್ಸಹೋದರನಾದ ವಿಭೀಷಣನೇ ಬಂದುಹೇಳಿ ದಾಗ ಆ ಮಾತು ತನಗೆ ಗ್ರಾಹ್ಯವೆಂಬುದನ್ನು ಹೇಳಬೇಕಾದುದೇನು? ಹೀಗಿದ್ದರ ೧, (ರಾವಣೆ ) ಹಿಂಸಾನ್ಸಭಾವದಿಂದ ಸಮಸ್ತಲೋಕಗಳನ್ನೂ ಗೋಳಾಡಿಸತಕ್ಕ, ಅಥವಾ (Fತೀತಿ ರವಣೆ : ಸವಿವ ರಾವಣ ) ಯಾವಾಗಲೂ ಗೋಳಿಡುವ ಸ್ವಭಾವವುಳ್ಳವನು ಎಂದರೆ ಕೈಲಾಸವನ್ನು ಕದಲಿಸಿದುದು, ವಾಲಿಯೊಡನೆ ಹೋರಾಡಿದುದು, ಕಾರ್ತವೀ ರನನ್ನು ಕೆಣಕಿದುದು, ಮೊದಲಾದ ಕುಚೇಷ್ಟೆಗಳಿಂದ ಸಾಗದ ಕಾರಕ್ಕೆ ಕೈ ಹಾಕಿ, ಅದರಿಂದ ಭಂಗಹೊಂದಿ ಗೋಳಿಡುವ ಸ್ವಭಾವವುಳ್ಳವನು. ಇದರಿಂದ ತನ ಗಾಗಲಿ ಪರರಿಗಾಗಲಿ ಹಿತವನ್ನು ತಿಳಿಯದ ದುಸ್ಸಭಾವವುಳ್ಳವನೆಂದು ಭಾವವು ಇಂ