ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೯೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪೧ ಸರ್ಗ ೧೬ || ಯುದ್ಧಕಾಂಡವು ಮ್ಮ ಜ್ಞಾತಿಗಳ ಸಂತೋಷವನ್ನು ನೋಡಿ ಅಸೂಯೆಪಡುವರು, ತಮ್ಮ ಮನೋಭಿಪ್ರಾಯಗಳನ್ನು ಹೊರಪಡಿಸದೆ ಗೂಢವಾಗಿಯೇ ಇಟ್ಟುಕೊಂ ಡಿರುವರು, ಇಂತಹ ಘೋರಕೃತ್ಯವುಳ್ಳ ಜ್ಞಾತಿಗಳಿಂದ ಎಂದಿಗೂ ಭಯವು ತಪ್ಪದು, ಹಿಂದೆ ಪದ್ಮ ವನವೆಂಬ ಒಂದು ಕಾಡಿನಲ್ಲಿ ಕೆಲವು ಕಾಡಾನೆಗಳು, ತಮ್ಮನ್ನು ಹಿಡಿಯುವುದಕ್ಕಾಗಿ ಪಾಶಗಳನ್ನು ಹಿಡಿದು, ತಾವು ಮೊದಲು ಸಾಕಿಟ್ಟ ಕೆಲವು ಅನೆಗಳನ್ನೂ ಸಂಗಡಕರೆದುಕೊಂಡು ತಮ್ಮ ಕಡೆಗೆ ಬ ರುತ್ತಿದೆ ಮನುಷ್ಯರನ್ನು ಕುರಿತು ಕೆಲವು ಶ್ಲೋಕಗಳನ್ನು ಹೇಳಿದುದಾಗಿ ಕೇಳಿರುವೆನು ಆ ಶ್ಲೋಕಾರ್ಧಗಳನ್ನೂ ಹೇಳುವೆನು ಕೇಳು : ಆ ಆನೆಗ ಳು ತಮ್ಮ ಗುಂಪಿಗೆ ಸೇರಿದ್ದ ಬೇರ ಆನೆಗಳನ್ನು ನೋಡಿ « ನಮಗೆ ಬೆಂಕಿಯಿದ್ದರೂ ಭಯವಿಲ್ಲ ! ಬೇರೆ ಶಸ್ತ್ರಗಳಿಗೂ ನಾವು ಹೆದರಬೇಕಾ ದುದಿಲ್ಲ' ಭಯಂಕರಗಳಾದ ಈ ಪಾಶಗಳಿಂದಲೂ ನಮಗೆ ಅಂಜಿಕೆ ಖ' ಆ ದೋ ನೋಡಿರಿ ' ಕರುಣೆಯಿಲ್ಲದ ಕ್ರೂರಸ್ಯಭಾವವುಳ್ಳವುಗಳಾಗಿ, ತಮ್ಮ ಪ್ರಯೋಜನದಲ್ಲಿಯೇ ದೃಷ್ಟಿಯಿಟ್ಟು, ಆ ಪುರುಷರಿಗೆ ಸಹಾ ಯವಾಗಿ ಬರುವ ನಮ್ಮ ಜ್ಞಾತಿಗಜಗಳಿಗಾಗಿಯೇ ನಾವು ಹೆದರಬೇಕಾಗಿದೆ, ನ ಮ್ಮ ಜಾತಿಯ ಈ ಆನೆಗಳ ಈ ಮನುಷ್ಯರಿಗೆ ನಮ್ಮನ್ನು ಹಿಡಿಯುವು ದಕ್ಕೆ ಉಪಾಯವನ್ನು ಹೇಳಿಕೊಡುವಂತಿದೆ " ಎಂದು ಹೇಳಿತು. ಎಲ್ಲಾ ಭಯಗಳಿಗಿಂತಲೂ ಜ್ಞಾತಿಭಯವೇ ಹೆಚ್ಚು, ಇದು ನಿಮ್ಮೆಲ್ಲರಿ ಗೂ ತಿಳಿದೇ ಇರಬಹುದು ಗೋವುಗಳಲ್ಲಿ ಭಾಗ್ಯಸಂಪತ್ತಿಯೂ, ಬ್ರಹ್ಮ ಇರಲ್ಲಿ ಇಂದ್ರಿಯನಿಗ್ರಹವೂ, 'ಹೆಂಗಸರಲ್ಲಿ ಚಪಲಸ್ವಭಾವವೂ, ಜ್ಞಾತಿಳ ಭಯವೂ ಸಿದ್ಧವಾಗಿರುವುದು, ಅಪ್ಪ ವಿಭೀಷಣಾ ! ಸಾಕುಬಿಡು ! ನಿನ್ನ ಮನೋಭಾವವು ನನಗೆ ತಿಳಿಯಿತು ! ಲೋಕದಲ್ಲಿ ನನಗಿರುವ ಈ ಗೌ ರವವನ್ನೂ, ಈ ನನ್ನ ಮಹಾಭಾಗ್ಯವನ್ನೂ, ಶತ್ರುಗಳ ತಲೆಯನ್ನು ಮೆ ಟೈ ದಂತಿರುವ ಈ ನನ್ನ ಮಹಾವೈಭವವನ್ನೂ ನೋಡಿ ನೀನು ಸಹಿಸಬಲ್ಲೆ ಯಾ ?ಇವೊಂದೂ ನಿನಗೆ ಇಷ್ಟವಿಲ್ಲ'ಹೇಗಾದರೂ ನನ್ನನ್ನು ಕೆಡಿಸಬೇಕೆಂ ಬುದೇ ನಿನ್ನ ಮನೋರಥವು, ವಿಭೀಷಣಾ ' ನೀನು ನನ್ನೊಡನೆ ಎಷ್ಟು ದಿನ ವಿದ್ದರೇನು?ತಾವರೆಯೆಲೆಗಳು ನೀರಿನಲ್ಲಿಯೇ ಹುಟ್ಟಿ ಬೆಳೆದರೂ,ಅವು ತಮ್ಮ