ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬೮ ಶ್ರೀಮದ್ರಾಮಾಯಣವು (ಸರ್ಗ: ೨೨ ಹುದು ಇದರಿಂದ ಅವನಿಗೆ ನಿನ್ನಲ್ಲಿರತಕ್ಕ ಪ್ರೀತಿಯೂ ತಪ್ಪಿ ಹೋಗುವುದು ಆದುದರಿಂದ ನೀನೇ ಆತನ ಮನಸ್ಸನ್ನನುವರ್ತಿಸಿ ನಡೆಯಬೇಕು ಈ ಸುಗ್ರಿ ವನ ಶತ್ರುಗಳೊಡನೆಯಾಗಲಿ, ಅವನ ಶತ್ರುಗಳ ಕಡೆಯವರೊಡನೆಯಾಗ ಲಿ ನೀನು ಸೇರಬಾರದು ಪ್ರಭುವಾದ ಆತನ ಕೋರಿಕೆಯಲ್ಲಿಯೇ ಯಾವಾ ಗಲೂ ದೃಷ್ಟಿಯಿಟ್ಟು ಅದನ್ನು ನಡೆಸುತ್ತಿರಬೇಕು ತಾಳ್ಮೆಯಿಂದ ಆತನಿ ಗಧೀನನಾಗಿಯೇ ನಡೆದುಕೊಳ್ಳಬೇಕು ಆತಿಸ್ಸೇಹವನ್ನೂ ತೋರಿಸಬೇಡ, ಸ್ನೇಹವಿಲ್ಲದಂತೆಯೂ ಇರಬೇಡ ರಾಜರಲ್ಲಿ ಅತಿಸೇಹವಾಗಲಿ, ಸ್ವಲ್ಪವೂ ಸ್ನೇಹವಿಲ್ಲದಿರುವುದಾಗಲಿ, ಇವರಡೂ ಬಹಳದೋಷಾಸ್ಪದವಾದುದು ಅ ದುದರಿಂದ ನೀನು ಇವೆರಡಕ್ಕೂ ಮಧ್ಯರೀತಿಯಲ್ಲಿ ವರ್ತಿಸು”ಎಂದನು ಹೀಗೆ ಹೇಳುವಷ್ಟರಲ್ಲಿಯೇ ಆ ವಾಲಿಗೆ ಬಾಣದ ವೇದನೆಯು ಪ್ರಬಲವಾಯಿತು ಕಣ್ಣಾಲಗಳು ತಿರುಗಲಾರಂಭಿಸಿದವು ಭಯಂಕರವಾದ ಹಲ್ಲುಗಳನ್ನು ತರದು ಬಾಯಗಲಿಸಿ ಪ್ರಾಣವನ್ನು ಬಿಟ್ಟನು ಇದನ್ನು ನೋಡಿದೊಡನೆ ಅಲ್ಲಿದ್ದ ವಾನರಶ್ರೇಷ್ಠರೆಲ್ಲರೂ ಉಚ್ಛ ಸ್ವರಬಂದಳುವುದಕ್ಕಾರಂಭಿಸಿದರು ಅವರೆ ಲ್ಲರೂ ಗುಂಪಾಗಿ ಸೇರಿ ಆಯ್ಯ' ಕಪಿರಾಜನಾದ ವಾಲಿಯು ಸ್ವರ್ಗಸ್ಥ ನಾದನೆ' ಇನ್ನು ನಮ್ಮ ಕಿಷಿಂಧೆಯ ಹಾಳಾಯಿತು ಇಲ್ಲಿನ ಉದ್ಯಾನ ಗಳೂ, ಪಕ್ವತಗಳೂ, ಕಾಡುಗಳೂ, ಶೂನ್ಯವಾದುವಲ್ಲಾ' ನಮ್ಮೆಲ್ಲರಿಗೂ ಸಿ. ಹ್ಮನಂತಿದ್ದ ವಾಲಿಯ ಹತನಾದಮೇಲೆ ನಮ್ಮ ಗತಿಯೇನು ? ಇವನೊಡನೆ ಯೋ ನಮ್ಮೆಲ್ಲರ ತೇಜಸ್ವ ಹೋಯಿತಲ್ಲಾ' ಆಹಾ' ಈ ವಾಲಿ ಯು ಸಂಚ ರಿಸುತ್ತಿರುವಾಗ, ಇವನ ತೊಡೆಯ ವೇಗಕ್ಕ, ಇಸ್ಥಿನ ಅರಣ್ಯಗಳಲ್ಲವೂ ತಮ್ಮ ತಮ್ಮ ಪಷ್ಟ ಸನ್ನದ್ಧಿಗಳೊಡನೆ ಹಿಂಬಾಲಿಸಿ ಹೋಗುವಂತಿದ್ದುವಲ್ಲಾ ! (ಯಾವನ ಪರಾಕ್ರಮದಿಂದಲೇ ಇಲ್ಲಿನ ತೋಟಗಳ, ಸರೋವರಗಳೂ ಭಯಪಟ್ಟು ತಮ್ಮ ತಮ್ಮ ಪಷ್ಟಫಲಸಮೃದ್ಧಿಯನ್ನು ತೋರಿಸುತಿದ್ದುವೋ ಅಂತಹ ಸಮರ್ಥನಾದ ವೀರನು ಇನ್ನು ಮೇಲೆ ಬೇರೆಲ್ಲಿ ಸಿಕ್ಕುವನು) ಈತನ ವೀರಾತಿಶಯವು ಇನ್ನಾರಿಗುಂಟು ? ಇವನು ಪೂರೈದಲ್ಲಿ ಮಹಾಭುಜ ನೆನಿಸಿಕೊಂಡ ಮಹಾತ್ಮನಾದ ಗೋಲಭನೆಂಬ ಗಂಧವ್ವನೊಡನೆ,ಹದಿನೈದು ವರುಷಗಳವರೆಗೆ ಹಗಲುರಾತ್ರಿಯೂ ಬಿಡದೆ ಯುದ್ಧಮಾಡಿ, ಹದಿನಾರನೆಯ