ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೫.] ಕಿಸ್ಮಿಂಢಾಕಾಂಡವು ೧೪೮೧ ಈ ತೈಲೋಕ್ಯವೂಕೂಡ ಆ ಬ್ರಹ್ಮ ಸಂಕಲ್ಪಕ್ಕೆ ಅಧೀನವಾಗಿ ನಡೆಯ ಬೇಕೇಹೊರತು, ಆದನ್ನು ಮೀರಿ ನಡೆಯಲು ಯಾರಿಗೂ ಸಾಧ್ಯವಲ್ಲ. ನೀನು ವಾಲಿಯಿದ್ದಾಗ ಯಾವಯಾವ ಸುಖಗಳನ್ನನುಭವಿಸುತಿದ್ದೆಯೋ, ಮುಂದೆ ಯೂ ಹಾಗೆಯೇ ಭೋಗಗಳನ್ನನುಭವಿಸುತ್ತ ಸುಖದಿಂದಿರುವೆ ನಿನ್ನ ಮಗ ನಾದ ಆಂಗದನೇ ಯವರಾಜ್ಯವನ್ನು ಹೊಂದುವನು ಹೀಗೆ ನಡೆಯಬೇ ಕೆಂಬುದೇ ದೈವಸಂಕಲ್ಪವಾಗಿರುವಾಗ, ನಿನ್ನಂತಹ ವೀರಪತ್ನಿ ಯರು ದುಃ ಖಿಸುವುದೆಂದರೇನು?” ಎಂದನು ಹೀಗೆ ಮಹಾತ್ಮನಾದ ರಾಮನ ಸಮಾ ಧಾನವಾಕ್ಯಗಳನ್ನು ಕೇಳಿದೊಡನೆ, ತಾರೆಯ ಮುಖದಲ್ಲಿ ಉಲ್ಲಾಸವುಂಟಾ ಯಿತು ಮನಸ್ಸಮಾಧಾನವನ್ನು ಹೊಂದಿ ಸುಮ್ಮನಿದ್ದಳು ಅಲ್ಲಿಗೆ ಇಪ್ಪ ತ್ತು ನಾಲ್ಕನೆಯ ಸರ್ಗವು (ರಾಮವು ದು:ಖಿತರಾದವರೆಲ್ಲರನ್ನೂ ಸಮಾಧಾನಸ ) ++ | ಡಿಸಿ ವಾಲಿಗೆ ಸಂಸ್ಕಾರವನ್ನು ಮಾಡಿಸಿದುದು ಹೀಗೆ ಒಂದುಕಡೆಯಲ್ಲಿ ತಾರೆಯೂ, ಮತ್ತೊಂದುಕಡೆಯಲ್ಲಿ ಅಂಗ ದನೂ, ಬೇರೊಂದುಕಡೆಯಲ್ಲಿ ಸುಗ್ರೀವನೂ ದುಃಖದಿಂದಳುವುದನ್ನು ಕಂ ಡು, ರಾಮಲಕ್ಷ್ಮಣರಿಗೂ ಮರುಕವುಂಟಾಯಿತು ಆವರೊಡನೆ ಈ ರಾ ಮಲಕ್ಷಣರೂ ಸಮವಾಗಿ ದುಃಖಿಸುತ್ತಿದ್ದರು ಆದರೆ ರಾಮನು ಧೀರ ಸ್ವಭಾವವುಳ್ಳವನಾದುದರಿಂದ, ಎಲ್ಲರನ್ನೂ ತಾನೇ ಸಮಾಧಾನಪಡಿಸುತ್ತ, ಆಮೂವರನ್ನೂ ಕುರಿತು ದುಃಖದಿಂದ ಸುಮ್ಮನೆ ಕೊರಗುವುದರಿಂದೇ ನು? ಇದರಿಂದ ಸತ್ತವರಿಗೆ ಸದ್ದತಿಯುಂಟಾಗಲಾರದು ಮೇಲೆ ನಡೆಸಬೇಕಾ ದ ಔರ್ಧ್ವದೈಹಿಕಕರ್ಮವೇ ಈಗ ಶ್ರೇಯಸ್ಕರವು. ಅದಕ್ಕೆ *ತಡೆಮಾಡಬಾ ರದು ಆ ಕಾಠ್ಯವನ್ನು ಅತ್ಯವಶ್ಯವಾಗಿ ನಡೆಸಿಯೇ ತೀರಬೇಕಲ್ಲವೆ ? ಕಣ್ಣೀ ರುಬಿಡುವುದು ಲೋಕಾಚಾರದಿಂದ ಬಂದ ಸಂಪ್ರದಾಯವಾದುದರಿಂದ,

  • ಇಲ್ಲಿ “ಅನ್ಯಧಾ ಕೃತಮಕೃತಂ” ಎಂಬ ಪ್ರಮಾಣದಿಂದ ವಿಹಿತಕಾಲಗಳಲ್ಲಿ ಯೇ'ಕರಗಳನ್ನು ನಡೆಸದಿದ್ದರೆ,ಆಮೇಲೆ ಅಂತಹ ಕರಗಳನ್ನು ನಡೆಸಿಯ ಫಲವಿಲ್ಲ ಬೆಂದು ಭಾವವು