ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶ್ರೀಮದ್ರಾಮಾಯಣವು [ಸರ್ಗ, ೧ ಎಷ್ಟು ಮನೋಹರವಾಗಿರುವುದು ನೋಡು ! ಎಲ್ಲಿ ನೋಡಿದರೂ ನೀರು ಹೂಗಳು ಅರಳಿ ಶೋಭಿಸುತ್ತಿರುವುವು' ಸುತ್ತಲೂ ಬಗೆಬಗೆಯ ವೃಕ್ಷಗಳು ಬೆಳೆದಿರುವುವು.ಲಕ್ಷ್ಮಣಾ'#ಈ ಸರೋವರಕ್ಕೆ ಸೇರಿದಂತೆ ಶೋಭಿಸುತ್ತಿರುವ ಈ ವನಪ್ರದೇಶವು ನೋಡುವುದಕ್ಕೆ ಎಷ್ಟೊ ರಮ್ಯವಾಗಿರುವುದು'ಅದನ್ನಾ ಶ್ರಯಿಸಿರುವ ಮರಗಳು ಶಿಖರಗಳಿಂದ ಕೂಡಿದ ಬೆಟ್ಟಗಳಂತೆ ಎಷ್ಟು ಉನ್ನತ ಗಳಾಗಿರುವುವು ನೋಡಿದೆಯಾ? ಇದಲ್ಲದೆ ಎಲೆವನೆ' ಭರತನ+ವಿಷಯವಾದ ದುಃಖವೊಂದು 'ಸೀತೆಯನ್ನು ಕಳೆದುಕೊಂಡ ಮಹಾವ್ಯಸನವೊಂದು' ಇವೆರ ಡರಿಂದಲೂ ನಾನು ಬಹಳವಾಗಿ ನೊಂದಿರುವೆನು ಮೊದಲೇ ದುಃಖಾರ್ತ ನಾಓ ನನ್ನನ್ನು ಈಗಿನ ವಸಂತಋತುವು ಮತ್ತಷ್ಟು ದುಃಖಿತನನ್ನಾಗಿ ಮಾಡಿ ಪೀಡಿಸುವಂತಿದೆ ! ವಿಚಿತ್ರವಾದ ತೋಪುಗಳುಳ್ಳ ಈ ಸಂಪಾಸರೋವರ ವು ಮನಸ್ಸನ್ನು ಎಷ್ಟು ಆಹ್ಲಾದಪಡಿಸುತ್ತಿರುವುದು ನೋಡು' ಇದರಲ್ಲಿರುವ ಬಗೆಬಗೆಯ ಪ್ರಷ್ಟಗಳೂ ಮನಸ್ಸಿಗೆ ಎಷ್ಟೋ ಆನಂದವನ್ನು ಂಟುಮಾ ಡುತ್ತಿರುವುವು +ಇದರಲ್ಲಿ ಸಕ್ಷಗಳೂ,ಹೆಬ್ಬಾವುಗಳೂ ಸೇರಿಕೊಂಡಿದ್ದರೂ, ಇದರಮೇಲೆ ಕಮಲಗಳು ದಟ್ಟವಾಗಿ ಮುಚ್ಚಿಕೊಂಡಿರುವುದರಿಂದ ನೋ ಡುವುದಕ್ಕೆ ಪ್ರಿಯವನ್ನುಂಟುಮಾಡುವುದು * ಮೃಗಗಳೂ, ಪಕ್ಷಿಗಳೂ,

  • ಇಲ್ಲಿ ಸಂಪಾತೀರಾಶ್ರಯಿಗಳಾದ ವೃಕ್ಷಗಳನ್ನೂ ,ಆ ವೃಕ್ಷವನ್ನು ನಮ್ಮಿರುವ ಶಾಖೆಗಳನ್ನೂ ಹೇಳಿರುವುದರಿಂದ,ಭಗವತ್ಕೃಪಾಶ್ರಯದಿಂದ ಪಜೀವಿಸುವ ಆಚಾರ ರೂ, ಆ ಆಚಾರೋಪಜೀವಿಗಳಾದ ಶಿಷ್ಯರ ಸೂಚಿಸಲ್ಪಡುವರು “ಅತ್ರಪರತ್ರಚಾ ” ಎಂಬ ನ್ಯಾಯದಿಂದ ನಿತ್ಯ ವಿಭೂತಿಯಲ್ಲಿಯೂ ಈ ಬಗೆಯ ಸಾನ್ನಿಧ್ಯವುಂಟೆಂದು ಸಿದ್ದವಾಗುವುದು
  • + ಇಲ್ಲಿ ಭರತನ ದುಃಖವನ್ನು ನೋಡಿ ರಾಮನು ದುಖಿಸುತಿದ್ದನೆಂಬುದ ರಿಂದ, ಸಂಸಾರದಲ್ಲಿ ಬಿದ್ದು ದು ಖಿಸುತ್ತಿರುವ ಚೇತನರನ್ನು ನೋಡಿ ಭಗವಂತನೂ ದುಃಖಿಸುವನೆಂಬ ಭಾವವು ಸೂಚಿತವು |

{ ಇಲ್ಲಿ ಸರ್ವಾದಿಕೂರಜಂತುಗಳಿದ್ದರೂ ಈ ಸರೋವರವು ಪದ್ಯಕ್ಷ ಉಾದಿಗಳಿಂದ ಮನೋಹರವಾಗಿರುವುದೆಂದು ಹೇಳುವುದರಿಂದ, ಜ್ಞಾನಿಯಲ್ಲಿ ಏನಾದ ರೂ ದೂರವಿದ್ದರೂ, ಅದರಿಂದ ಆತನಿಗೆ ಹೇಯತ್ವವುಂಟಾಗದೆಂದು ಸೂಚಿತ. (ತೇಷಾಂ ತೇಜೋವಿಶೇಷೇನ ಕ್ರತ್ಯವಾಯೋ ನ ವಿದ್ಯತೇ” ಎಂಬ ಸ್ಮೃತನುಸಾರವಾ ಗಿ,ಅವರ ತೇಜೋವಿಶೇಷವೇ ಇತರಹಗಳೆಲ್ಲವನ್ನೂ ಅಡಗಿಸುತ್ತದೆಂದರ್ಥನ.