ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೬೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ ೩೬ ] ಕಿಂಧಾಕಾಂಡವು ೧೫೫೧ ವಾದ ಈ ವಾನರರಾಜ್ಯಲಕ್ಷ್ಮಿಯನ್ನನುಭವಿಸುವುದಕ್ಕೆ ನೀನೇ ಅರ್ಹನು ರಾ ಮನಿಗೆ ನಿನ್ನ ಸಹಾಯವಿರುವಾಗ ಇನ್ನು ಶೀಘ್ರದಲ್ಲಿಯೇ ಶತ್ರುಗಳನ್ನಡಗಿ ಸುವುದರಲ್ಲಿ ಸಂದೇಹವಿಲ್ಲ ಎಲೈ ಕಪಿರಾಜನೆ' ಈಗ ನೀನು ಹೇಳಿದ ಮಾತು ಗಳು, ಧರನಾಗಿಯೂ, ಕೃತಜ್ಞನಾಗಿಯೂ, ಯುದ್ಧಗಳಲ್ಲಿ ಹಿಂತಿರು ಗದವನಾಗಿಯೂ ಇರುವ ಸತ್ಪುರುಷನು ಹೇಳತಕ್ಕ ಮಾತುಗಳೆಂಬುದರಲ್ಲಿ ಸಂದೇಹವಿಲ್ಲ ನೀನು ಹೇಳಿದುದು ಯುಕ್ತಿಯುಕ್ತವಾಗಿಯೇ ಇರುವುದು ನನ್ನಣ್ಣನಾದ ರಾಮನೊಬ್ಬನು ಮತ್ತು ನೀನೊಬ್ಬನು ಹೊರತು, ನಿಗ್ರಹಾ ನುಗ್ರಹಗಳಲ್ಲಿ ಸಂಪೂಲ್ಯವಾದ ಸಾಮರ್ಥ್ಯವನ್ನು ಹೊಂದಿಯೂ ತನ್ನ ದೋ ಷಗಳನ್ನು ತಿಳಿದುಕೊಂಡು, ತಾವು ಮಾಡಿದುದು ತಪ್ಪೆಂದು ಒಪ್ಪಿಕೊಳ್ಳುವ ವರು ಬೇರೆಯಾರುಂಟು? ಇದಲ್ಲದೆ ನೀನು ಪರಾಕ್ರಮದಲ್ಲಿಯೂ, ಬಲದಲ್ಲಿ ಯೂ ಆ ರಾಮನಿಗೆ ಸಾಟಿಯೆಂಬುದರಲ್ಲಿ ಸಂದೇಹವಿಲ್ಲ ಬಹುಕಾಲಕ್ಕೆ ಈ ನಿನ್ನ ಸಹಾಯವು ನಮಗೆ ದೇವತಾನುಗ್ರಹದಿಂದ ಬಂದುದೇ ಹೊರತು ಬೇ ರೆವಿಧದಿಂದ ನಿನ ಂತವನ ಸಹಾಯವನ್ನು ಹೊಂದುವುದು ಎಂದಿಗೂ ಸಾಧ್ಯ ವಲ್ಲ ಎಲೈ ವೀರನೆ' ಅವೆಲ್ಲವೂ ಹಾಗಿರಲಿ' ಈಗ ನೀನು ಮಾಡಬೇಕಾದ ಕೆಲಸವೇನೆಂದರೆ, ಈಗಲೇ ನೀನು ನನ್ನೊಡನೆ ರಾಮನಬಳಿಗೆ ಬಂದು ಸೀತಾ ವಿರಹದುಃಖದಿಂದ ಕೊರಗುತ್ತಿರುವ ನಿನ್ನ ಮಿತ್ರನಾದ ಆತನನ್ನು ಸಮಾ ಧಾನಪಡಿಸಬೇಕು ನೀನು ಮೊದಲು ಮಾಡಬೇಕಾದ ಸಹಾಯವೇ ಇದು. *ರಾಮನು ದುಃಖದಿಂದ ವಿಲಪಿಸುವಾಗ, ದೈನ್ಯದಿಂದ ಹೇಳಿದ ಮಾತುಗಳ

  • ಇಲ್ಲಿ ದುಃಖದಿಂದ ಮೈಮರೆತಿದ್ದ ರಾಮನ ಮಾತೆಂಬುದರಿಂದ,ರಾಮನು'ಈ ಟ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ,ಮತ್ತೊಬ್ಬರು ಪರುಷವಾಗಿ ಹೇಳಿ ದರೂ ಇದಿರ ಮಾತಾಡುವವನಲ್ಲವೆಂಬುದರಿಂದ ರಾಮನು ಸ್ವಭಾವದಿಂದ ಪರುಷವಾಕ್ಕೆ ವನ್ನಾಡುವವನಲ್ಲವೆಂದು ಸಿದ್ಧವಾಗುವುದು.”ಮತ್ತು ಅಂತಹ ರಾಮನು ದುಖದಿಂದ ಹೇಳಿದುದನು ಕೇಳಿ ನಾನೂ ನಿನ್ನೊಡನೆ' ಈ ಪರುಷವಾಕ್ಯವನ್ನಾಡಿದೆನೆಂದು ಲಕ್ಷ ಹನು ನಾನು ಹೇಳಿದುದು ರಾಮನ ಮಾತಿನ ಅನುವಾದವಾದುದರಿಂದ ದೋಷವಲ್ಲವೆಂ ದು, ಸೂಚಿಸಿದುದಾಗಿ ತಿಳಿಯಬೇಕು ಈ ಸಂದರ್ಭದಲ್ಲಿ ತಿಳಿಯಬೇಕಾದ ತತ್ವವೇನೆಂದ ರೆ-ಮಹಾರಾಜನಾದ ಸುಗ್ರೀವನು ತನ್ನ ಸ್ವಾಮಿಯಾದ ರಾಮನಕಾರವನ್ನು ನಡೆಸ ಬೇಕಾದ ಸಮಯದಲ್ಲಿಯೂ, ಭೋಗಲೋಲನಾಗಿ, ಕಾಲಾತಿಕ್ರಮವೆಂಬ ಮಹಾಪರಾಧವೆ