ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೧೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦೨ ಶ್ರೀಮದ್ರಾಮಾಯಣವು (ಸರ್ಗ ೪೭ ಕ್ಕೆ ಬಂದು ಸೇರಿದನು ಮತಂಗಮುನಿಯ ಭಯದಿಂದ ವಾಲಿಯು ಇಲ್ಲಿಗೆ ಬರಲಾರದೆ ಹೋದನು ರಾಮಾ ! ನಾನು ಈ ವ್ಯಾಜದಿಂದಲೇ ಸಮಸ್ಯ ಭೂಮಂಡಲವನ್ನೂ ಸುತ್ತಿ ಬಂದು, ಅಲ್ಲಲ್ಲಿನ ವಿಷಯಗಳೆಲ್ಲವನ್ನೂ ಪ್ರತ್ಯಕ್ಷ ವಾಗಿ ನೋಡಿ, ಕೊನೆಗೆ ಈ ಪರೂತದ ಗುಹೆಯಲ್ಲಿ ಅವಿತುಕೊಂಡೆನು” ಎಂ ದನು ಇಲ್ಲಿಗೆ ನಾಲ್ವತ್ತಾರನೆಯ ಸರ್ಗವು ದಕ್ಷಿಣದಿಕ್ಕಿಗೆ ಹೂದ ಹನುಮದಾದಿಗಳು ಹೊರ ) -++4) ತು; 3 ತು, ಬೇರೆ ದಿಕ್ಕುಗಳಿಗೆ ಹೋದ ಕಪಿಶೈನಿಕರೆಲ್ಲ ರೂ ಹಿಂತಿರುಗಿ ಬಂದುದು ಅತ್ತಲಾಗಿ ಸುಗ್ರೀವನಿಂದಾಜ್ಞಪ್ತರಾದ ಕಪಿಯೂಥಪರೆಲ್ಲರೂ, ಆ ವನು ಹೇಳಿದ್ದ ರೀತಿಯಲ್ಲಿಯೇ ಆಯಾದಿಕ್ಕುಗಳಿಗೆ ಹೋಗಿ ಅಲ್ಲಲ್ಲಿನ ಕೊಳ ಗಳಲ್ಲಿಯೂ, ನದಿಗಳಲ್ಲಿಯೂ, ಪದ್ಧಶಾಲೆಗಳಲ್ಲಿಯೂ, ಗಿಡುಬಳ್ಳಿಗಳಲ್ಲಿಯೂ, ಪೊದೆಗಳಲ್ಲಿಯೂ, ಬಯಲುಗಳಲ್ಲಿಯೂ, ಪಟ್ಟಣಗಳಲ್ಲಿಯೂ ಸೀತೆಯನ್ನು ಹುಡುಕುತ್ತಿದ್ದರು ನದಿಗಳಿಂದ ದುರ್ಗಮಗಳಾದ ಪ್ರದೇಶಗಳಲ್ಲಿಯೂ ಪ್ರವೇಶಿಸಿನೋಡಿದರು ಅನೇಕಪರತಗಳನ್ನೂ ಹುಡುಕಿ ಬಂದರು ಹೀಗೆ ಸುಗ್ರೀವನಿಂದಾಜಸ್ಥನಾದ ಒಬ್ಬೊಬ್ಬ ವಾನರಯೂಥಪನೂ ಪಕ್ವತಾರ ಣ್ಯಗಳೇ ಮೊದಲಾದ ಸಮಸ್ತಪ್ರದೇಶಗಳನ್ನೂ ಚೆನ್ನಾಗಿ ಹುಡುಕಿದನು ಒಬ್ಬೊಬ್ಬರಿಗೂ ಸೀತೆಯನ್ನು ಕಂಡು ಹಿಡಿಯಬೇಕೆಂದು ಮನಃಪೂರೈಕ ವಾದ ಆತುರವಿತ್ತು ಒಬ್ಬೊಬ್ಬರೂ ಹಗಲಲ್ಲಿ ಬೇರೆಬೇರೆಯಾಗಿ ಹೊರಟು ಅಂತರಿಕ್ಷಸಂಚಾರಿಗಳಾಗಿ ಸುತ್ತಿ ಸುತ್ತಿ ಹುಡುಕಿ,ರಾತ್ರಿಕಾಲಗಳಲ್ಲಿ ಎಲ್ಲರೂ ಭೂಮಿಯಲ್ಲಿ ಒಂದಾಗಿ ಸೇರುತ್ತಿದ್ದರು ಆ ವಾನರರು ಹೀಗೆ ಒಂದು ತಿಂಗಳ ವರೆಗೆ ಪ್ರತಿದಿನವೂ ಹಗಲಲ್ಲಿ ಆಯಾಸ್ಥಳಗಳಲ್ಲಿ ಸೀತೆಯನ್ನು ಹುಡುಕಿ, ರಾ ತ್ರಿಕಾಲಗಳಲ್ಲಿ ಸಾಧ್ವರ್ತುಕಗಳಾದ ಹೂಗಿಡಗಳ ಕೆಳಗೆ ಒಂದಾಗಿ ಸೇರಿ ಮ ಲಗುತ್ತಿದ್ದರು ರಾಮಕಾರಾರವಾಗಿ ಹೊರಟ ಆ ವಾನರರು ಅನುಭವಿಸಿ ದುದರಿಂದ, ಅಲ್ಲಲ್ಲಿನ ವೃಕ್ಷಗಳೆಲ್ಲವೂ ಸಾಫಲ್ಯವನ್ನು ಹೊಂದುತ್ತಿದ್ದುವು ಹೀ ಗೆ ವಾನರರು ತಾವು ಹೊರಟ ದಿನದಿಂದ ಒಂದು ತಿಂಗಳವರೆಗೆ ಹುಡುಕಿ,ಕೊ