ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫೦ ಶ್ರೀಮದ್ರಾಮಾಯಣವು [ಸರ್ಗ ೨, ದು ನಿಜವು ಈಗ ಮಾಡುವುದೇನು?” ಎಂದನು ಹಾಗೆಯೇ ಆ ಸುಗ್ರೀವನ ಮಂತ್ರಿಗಳೆಲ್ಲರೂ, ಮಹಾಧನುರ್ಧಾರಿಗಳಾಗಿ ಬರುತ್ತಿರುವ ಆ ರಾಜಕುಮಾ ರರನ್ನು ನೋಡಿ,ಸುಗ್ರೀವನ ಮಾತನ್ನೇ ನಿಜವೆಂದು ನಂಬಿ ಆ ಬೆಟ್ಟದತಪ್ಪಲ ನ್ನು ಬಿಟ್ಟು, ಮತ್ತೊಂದು ದುರ್ಗಮವಾದ ಶಿಖರವನ್ನೇರಿ ಅಲ್ಲಿ ನಿಂತರು ರಾಮ ಲಕ್ಷ್ಮಣರನ್ನು ನೋಡಿದೊಡನೆ ದಿಕ್ಕು ದಿಕ್ಕಿಗೆ ಓಡಿಹೋದಕಪಿಗಳಲ್ಲರೂ ಕೋ ನೆಗೆ ಒಂದುಕಡೆಯಲ್ಲಿ ಸೇರಿ, ತಮಗೊಡೆಯನಾದ ಆ ಸುಗ್ರೀವನ ಸುತ್ತ ಲೂ ನಿಂತು ಆತನನ್ನು ಸೇವಿಸುತಿದ್ದರು ಆದರೆ ಎಲ್ಲಿಯೂ ಸ್ಥಿರವಾಗಿ ನಿಲ್ಲುವುದಕ್ಕಂಜಿಬೆಟ್ಟದಿಂದ ಬೆಟ್ಟಕ್ಕೆ ಹಾರುತ್ತ,ಕೊನೆಗೆ ಎತ್ತರವಾದ ಒಂ ದು ಶಿಖರದ ತುದಿಗೇರಿ,ಅಲ್ಲಿಯೂ ಭಯಗ್ರಸ್ತನಾಗಿ ನಿಂತಿರುವ ಸುಗ್ರೀವನ ಮುಂದೆಯೇ ಗುಂಪುಗೂಡಿದರು ಹೀಗೆ ಬವಾಢರಾದ ಆಕವಿಶ್ರೇಷ್ಠರೆಲ್ಲರೂ ತಮ್ಮ ವೇಗದಿಂದ ಬೆಟ್ಟಗಳನ್ನೂ ನಡುಗಿಸುವಂತೆ ಹಾರಿ ಹಾರಿ ಹೋಗುತ್ತ, ಭಯದಿಂದ ನಡುಗುತ್ತಿರುವ ಸುಗ್ರಿವನನ್ನು ಬಿಡದೆ, ತಾವು ಹೋಗು ವ ದಾರಿಗಡಲಾಗಿದ್ದ ಪಷಿತಗಳಾದ ಮರಗಳನ್ನು ಮುರಿದುಹಾಕು ಶಿಖರಗಳಿಂದ ಶಿಖರಗಳಿಗೆ ಹಾರುತ್ಯ, ಅಲ್ಲಲ್ಲಿದ್ದ ಜಿಂಕ, ಬೆಕ್ಕು, ಹುಲಿ ಮೊದಲಾದ ಕಾಡುಮೃಗಗಳನ್ನೊಡಿಸುತ್ತಿದ್ದರು ಹೀಗೆ ಅವರೆಲ್ಲರೂ ಅಲ್ಲಲ್ಲಿ ಸುತ್ತಿ ಋಶ ಮೂಕಪಕ್ವತವನ್ನೇರಿ, ತನ್ನೊಡೆಯನಾದ ಸುಗ್ರೀವ ನಮುಂದೆ ಕೈಮುಗಿದು ನಿಂತಿದ್ದರು ಆಗ ಕಾಲೋ೦ಚಿತವಾದ ಮಾತಿನಲ್ಲಿ ನಿಪುಣನಾದ ಹನುಮಂತನು, ವಾಲಿಯ ಭಯದಿಂದ ತತ್ತಳಿಸುತ್ತಿರುವ ಸುಗ್ರೀವನನ್ನು ನೋಡಿ ( ಸ್ವಾಮಿ' ಇದೇನು' ಧೀರರಾದ ನಿಮ್ಮಂತವರೂ ಶತ್ರು ಭಯಕ್ಕಾಗಿ ಹೀಗೆ ತತ್ವಳಿಸುವುದೆಂದರೇನು? ಇದು ಋಶ್ಯಮೂಕ ಪತವಲ್ಲವೆ? ಇಲ್ಲಿ ನಮಗೆ ವಾಲಿಯಿಂದ ಭಯವೆಂದರೇನು ? ಎಲೈ ವಾನ ರೇಂದ್ರನೆ | ವಾಲಿಯ ವೇಷವನ್ನು ಮರೆಸಿಕೊಂಡು ಬಂದಿರುವನೆಂದು ನೀನೂ ಭ್ರಮಿಸುವೆಯಾ?ನೀನು ಯಾರಿಗಾಗಿ ಹೀಗೆ ಭಯದಿಂದ ತತ್ತಳಿಸು ತಿರುವೆಯೋ ಆತನೋ ಮಹಾಕೂರಕವುಳ್ಳವನು ಆತನ ಸ್ವರೂಪವೂ ಅತಿಕ್ರೂರವಾಗಿರುವುದು ಅವನ ಜಾಡೆಗಳೊಂದಾದರೂ ಇವರಲ್ಲಿ ಕಾಣು ವುದಿಲ್ಲ ಎಲೈ ಸೌಮ್ಯನೆ' ನಿನ್ನ ಪತ್ನಿ ಯನ್ನ ಪಹರಿಸಿದ ಯಾವ ಪಾಪಿಗಾಗಿ