ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫೨ ಶ್ರೀಮದ್ರಾಮಾಯಣವು (ಸರ್ಗ, ೨. ಫ್ರಾನ್ವೇಷಿಗಳಾಗಿದ್ದು,ಸಮಯವುಸಿಕ್ಕಿದಾಗ ಕೊಲ್ಲುವರು ನಮ್ಮಣ್ಣನಾದ ವಾಲಿಯಾದರೋ ಅಂತಹ ಕಾವ್ಯಗಳಲ್ಲಿ ಬಹಳ ಚತುರನು ಬಹಳ ದೂರದೃ ಷ್ಟಿಯುಳ್ಳವನು ಅರಸರು ಶತ್ರುಗಳನ್ನಡಗಿಸುವುದಕ್ಕಾಗಿ ಎಷ್ಟೋ ಉಪಾ ಯಗಳನ್ನು ಹುಡುಕುತ್ತಿರುವರು ಆದುದರಿಂದ ಮನುಷ್ಯರು ಅಂತಹ ಶತ್ರು ಗಳ ರಹಸ್ಯಗಳನ್ನು ತಿಳಿದುಕೊಳ್ಳುವುದಕ್ಕಾಗಿ ತಕ್ಕ ಪ್ರಯತ್ರಗಳನ್ನು ಮಾ ಡುತ್ತಿರಬೇಕು ಡಂಭವನ್ನು ಬಿಟ್ಟು ಹೀನವೇಷದಿಂದಲೇ ಆ ಶತ್ರುಗಳಲ್ಲಿ ಒಳ ಹೊಕ್ಕು ಅವರ ಅಭಿಪ್ರಾಯಗಳನ್ನು ಕಂಡು ಹಿಡಿಯಬೇಕು ಆದುದರಿಂದ ಎಲೈ ವಾನರಶ್ರೇಷ್ಠನೆ' ನೀನು ಈಗ ಒಬ್ಬ ಸಾಮಾನ್ಯ ಮನುಷ್ಯನ ವೇಷವ ನ್ನು ಧರಿಸಿ, ನಮ್ಮ ಕಡೆಗೆ ಬರುತ್ತಿರುವ ಆ ವೀರ ಬಳಿಗೆ ಹೋಗು ಆವರಇಂಗಿ ತಚೇಷ್ಟಾದಿಗಳನ್ನು ಪರಿಶೀಲಿಸಿ ನೋಡು ಅವರ ಇಂಗಿತಗಳಿಂದಲೂ, ಅವ ರ ಸ್ವರೂಪದಿಂದಲೂ,ಅವರ ಮಾತಿನ ಜಾಡೆಯಿಂದಲೂ, ಅವರ ಮನೋಭಿ ಪ್ರಾಯವನ್ನು ತಿಳಿಯಬೇಕು ಅವರಿಬ್ಬರೂ ಮನಸ್ಸಿನಲ್ಲಿ ಯಾವುದೋ ಕಾಪ ಟ್ಯವನ್ನಿಟ್ಟು *ಕೃತ್ರಿಮಹೃದಯರಾಗಿದ್ದ ಪಕ್ಷದಲ್ಲಿ,ಆಗ ನೀನು ಪ್ರೋತ್ರಾ ದಿಗಳಿಂದಲೂ,ಅವರ ಮನಸ್ಸಿಗೆ ಅನುಕೂಲವಾಗಿ ತೋರುವ ಚೇಷ್ಟೆಗಳಿಂದ ಲೂ ಅವರಿಗೆ ಚೆನ್ನಾಗಿ ನಂಬಿಕೆಯನ್ನು ಹುಟ್ಟಿಸಿ, ನಮಗನುಕೂಲರಾಗು ವಂತೆ ಮಾಡಿಕೊಂಡು, ಆ ವಿಷಯದಲ್ಲಿ ಅವರಿಂದಲೂ ಚೆನ್ನಾಗಿ ನಂಬಿ ಕೆಯನ್ನು ತೆಗೆದುಕೊಳ್ಳಬೇಕು ಹೀಗೆ ಆವರಿಬ್ಬರೂ ನಮಗೆ ಅನುಕೂಲರಾಗಿ ಬರುವರೆಂಬ ನಂಬಿಕೆಯನ್ನು ದೃಢವಾಗಿ ಹುಟ್ಟಿಸಿಕೊಂಡಮೇಲೆ, ಅವರಿಬ್ಬ ರೂ ಈಗ ಧನುರ್ಧಾರಿಗಳಾಗಿ ಈ ಕಾಡಿಗೆ ಪ್ರವೇಶಿಸಲು ಕಾರಣವೇನೆಂಬು ದನ್ನು ವಿಚಾರಿಸಿ ತಿಳಿ 'ಎಲೈ ಹನುಮಂತನೆ' ಮುಖ್ಯವಾಗಿ ಧನುರ್ಧಾರಿಗಳಾದ ಆವೀರರು, ಯಾವುದೊಂದು ಕೃತ್ರಿಮಸ್ವಭಾವವೂ ಇಲ್ಲದೆ ಋಜುಬುಕ್ಕಿ ಯುಳ್ಳವರಾಗಿಯೇ ಇದ್ದ ಪಕ್ಷದಲ್ಲಿ, ಆಗ ಅವರಿಬ್ಬರನ್ನೂ ನಮ್ಮ ಕಡೆಯವರ

  • ಇಲ್ಲಿ 'ದುಷ್ಕಮನಸೌ ಯದಿ” ಎಂದು ಮೂಲದಲ್ಲಿದೆ ಪ್ರಹೃಷ್ಣಮನ ಸೌ ಯದಿ” ಎಂದು ಗೋವಿಂದರಾಜೀಯ ವ್ಯಾಖ್ಯಾನದಲ್ಲಿ ಪಾರಾಂತರವನ್ನು ಮಾಡಿ (ಅವರು ಶುದ್ಧ ಹೃದಯರಾಗಿದ್ದ ಪಕ್ಷದಲ್ಲಿ” ಎಂದು ಅರ್ಥಾ೦ತರವು ಪ್ರತಿಪಾದಿ ತವಾಗಿದೆ.