ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩.] ಕಿಷಿಂಧಾಕಂಡವು ೧೩೫೯ ಸಾಮವೇದವನ್ನು ತಿಳಿಯದೆಯ ಇರುವವನಿಗೆ ಹೀಗೆ ಮಾತಾಡುವುದು ಎಂದಿಗೂ ಸಾಧ್ಯವಲ್ಲ ಮತ್ತು ಈತನು ವ್ಯಾಕರಣಶಾಸ್ತ್ರವೆಲ್ಲವನ್ನೂ ಅನೇ ಕಾವರ್ತಿ ಚೆನ್ನಾಗಿ ಅಭ್ಯಸಿಸಿದವನೆಂದೂ ತೋರುವುದು ಇವನು ವೇದ ವೇದಾಂಗಗಳೆಲ್ಲವನ್ನೂ ಸಂಪೂರ್ಣವಾಗಿ ತಿಳಿದವನೆಂಬುದರಲ್ಲಿ ಸಂದೇ ಹವೇ ಇಲ್ಲ ಏಕೆಂದರೆ, ಇವನು ಇದುವರೆಗೆ ನಮ್ಮೊಡನೆ ಇಷ್ಟು ಮಾತುಗಳ ಸ್ನಾ ಡಿದರೂ ಅವುಗಳಲ್ಲಿ ಸ್ವಲ್ಪವಾದರೂ ಅಪಶಬ್ದವು ಕಾಣಲಿಲ್ಲ * ಇವನು ಅದನ್ನು ಹೇಳಿಲ್ಲವು ' ಹೀಗೆ ಈ ಮೂರು ವೇದಗಳನ್ನೂ ತಕ್ಕ ರೀತಿಯಲ್ಲಿ ಅಭ್ಯಾಸ ಮಾಡದವನಿಗೆ ಹೀಗೆ ಮಾತಾಡುವುದು ಸಾಧ್ಯವಲ್ಲವೆಂದು ಮುಖ್ಯಾರ್ಥವು ಮತ್ತು ಹಿಂದೆ ಆಂಜನೇಯನು ಈ ರ ಮಲಕ್ಷ್ಮಣರನ್ನು ಕುರಿತು, ಉಭ ಯೋಗ್ಯಾವಹಂ ಮ ನೋ ರಕ್ಖಿತುಂ ಭುವನತ್ರಯಂ” ನೀವಿಬ್ಬರೂ ಈ ತ್ರೈಲೋಕ್ಯವನ್ನೂ ರಕ್ಷಿಸುವು ದಕ್ಕೆ ಸಮರ್ಥರು ” ಎಂದು ಹೇಳಿರುವುದರಿಂದ, ಈ ರಾಮನೇ ಸೃಷ್ಟಿಸ್ಥಿತಿಸಂಹಾರ ಕರ್ತನೆಂಬ ತತ್ವಾರ್ಥವನ್ನು ಸೂಚಿಸಿದಂತಾಯಿತು 'ಬ್ರಹ ವಾ ಇದಮಕ ಏವಾಗ್ರ ಆಸೀತ್ ಎಂಬುದಾಗಿ ಈ ವಿಷಯವು ಋಗೋದದಲ್ಲಿ ಹೇಳಲ್ಪಡುವುದರಿಂದ, ಅದನ್ನು ತಿಳಿಯದವನು ಈ ತತ್ವವನ್ನೂ ತಿಳಿಯಲಾರನೆಂದು ಭಾವವು ಹಾಗೆಯೇ 'ಮಾನು ಷಣಾ ದೇವರಪಿಣಾ?” ಇತ್ಯಾದಿವಾಕ್ಯದಿಂದ 'ಅಜಾಯಮಾನೋ ಬಹುಧಾ ವಿಜಾ ಯತೇ' ಎಂಬುದಾಗಿ ಯಜುರ್ವೇದೂಕ್ತವಾದ ಅವತಾಗರಹಸ್ಯವನ್ನೂ ಸೂಚಿಸಿರು ವನು “ಸುರರ್ಣಾಭಾ ಪದ್ಯ ಪಿಕ್ಷಾ' ಎಂಬೀ ವಿಶೇಷಣಗಳಿಂದ ಅಥ ಯ ಏಷೆSಾರಾದಿತ್ಯೇ ಹಿರಣ್ಯ ಪುರುಷೋ ದೃಶ್ಯತೇ” ಎಂಬುದು ಮೊದಲು “ತ ಸ್ಯ ಯಥಾಕವ್ಯಾಸಂ ವುಂಡರೀಕಮೇವ ಮಣಿ” ಎಂಬೀವರಗಿರುವ ಛಾಂದೋ ಗೋಪನಿಷದಕ್ಕಾರ್ಥವನ್ನೂ ಹೇಳಿರುವುದರಿಂದ, ಸಾಮವೇದವನ್ನರಿಯದವಗೆ ಈ ತತ್ವಾರ್ಥವು ತಿಳಿಯಲಾರದು ಆದುದರಿಂದ ಈತನು ಆ ಮರುವೇದಗಳನ್ನೂ ಸಂಪೂರ್ಣವಾಗಿ ತಿಳಿದಿರುವನೆಂಬ ವಿಷಯವನ್ನು ಇವನ ಮಾತುಗಳೇ ವ್ಯಕ್ತಪಡಿಸುತ್ತಿ ರುವುವೆಂದು ಭಾವವು

  • ವೇದಗಳು ಮಾತ್ರವೇ ಅಲ್ಲದೆ, ತದಂಗಭೂತಗಳಾದ ವ್ಯಾಕರಣಶಿಕ್ಷಾದಿಗಳೂ ಇವನಿಂದ ಅಧ್ಯಯನಮಾಡಲ್ಪಟ್ಟಿವೆಯೆಂಬುದನ್ನು ತಿಳಿಸುವುದಕ್ಕಾಗಿ, ಆತನ ವ್ಯಾಕರಣ ಜ್ಞಾನವನ್ನು ಹಿಂದಿನ ಶ್ಲೋಕದಿಂದ ಹೇಳಿ, ಇದುಮೊದಲು ಆತನ ಶಿಕ್ಷಾಜ್ಞಾನವನ್ನು ತಿಳಿಸುವರು ಹೇಗೆಂದರೆ ಕೆಲವರು ಮಾತಾಡುವಾಗ ಅನೇಕವಿಧಗಳಾದ ಮುಖವಿ ಕಾರಗಳೂ, ಅಂಗಚೇಷ್ಟೆಗಳೂ ಸ್ವಾಭಾವಿಕವಾಗಿ ಉಂಟಾಗುವುವು ಅವೊಂದೂ ಇಲ್ಲ